ಸೋಮವಾರ, ಜೂಲೈ 13, 2020
23 °C

ಹುಂಡೈ ‘ಕ್ಲಿಕ್‌ ಟು ಬೈ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಆನ್‌ಲೈನ್‌ ಮಾರಾಟಕ್ಕೆ ಜಾಲತಾಣ ಬಿಡುಗಡೆ ಮಾಡಿದೆ. ಕಾರ್‌ಗಳ ಖರೀದಿಗಾಗಿ ಅತ್ಯಂತ ಸರಳ ಮತ್ತು ಪಾರದರ್ಶಕವಾದ ‘ಕ್ಲಿಕ್‌ ಟು ಬೈ’ ರೀತಿಯ ಸೌಲಭ್ಯ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

‘ಹೊಸ ಯುಗದ ಡಿಜಿಟಲ್‌ ಗ್ರಾಹಕರನ್ನು ಸೆಳೆಯಲು ಭಾರತದ  ಮೊದಲ ಆನ್‌ಲೈನ್‌ ಮಾರಾಟ ವೇದಿಕೆ ಇದಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಕಿಮ್‌ ತಿಳಿಸಿದ್ದಾರೆ.

‘ಒಂದು ದಶಕದಲ್ಲಿ ರಿಟೇಲ್‌ ಮಾರಾಟದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗಿವೆ. ಹೊಸ ಪೀಳಿಗೆಯವರು ಆನ್‌ಲೈನ್‌ನಲ್ಲಿ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ’ ಎಂದಿದ್ದಾರೆ.

ಕಂಪನಿಯು ಸದ್ಯ ದೆಹಲಿ–ಎನ್‌ಸಿಆರ್‌ನಲ್ಲಿ ಕೆಲವು ಡೀಲರ್‌ ವ್ಯಾಪ್ತಿಯಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿದೆ. https://clicktobuy.hyundai.co.in/#/customer/select-a-car 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು