ಶನಿವಾರ, ಮೇ 28, 2022
21 °C

ವಾಹನಲೋಕ: ಮಹೀಂದ್ರ ಇ–ಆಲ್ಫಾ ಕಾರ್ಗೊ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹೀಂದ್ರ ಎಲೆಕ್ಟ್ರಿಕ್‌ ಮೊಬಿಲಿಟಿ ಕಂಪನಿಯು ದೇಶದ ಮಾರುಕಟ್ಟೆಗೆ ಮೂರು ಚಕ್ರಗಳ ಹೊಸ ವಿದ್ಯುತ್ ಚಾಲಿತ ವಾಹನ ‘ಇ–ಆಲ್ಫಾ ಕಾರ್ಗೊ’ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 1.44 ಲಕ್ಷ ಇದೆ.

ಉತ್ಪನ್ನಗಳನ್ನು ಗ್ರಾಹಕರ ಮನೆಗಳವರೆಗೆ ಒಯ್ದು, ವಿತರಣೆ ಮಾಡುವ ಕೆಲಸಕ್ಕೆ ಅತ್ಯುತ್ತಮ ಆಯ್ಕೆ ಇದಾಗಿದೆ. ಗ್ರಾಹಕರ ಅಗತ್ಯವನ್ನು ಮನಗಂಡು ‘ಇ–ಆಲ್ಫಾ ಕಾರ್ಗೊ’ ಬಿಡುಗಡೆ ಮಾಡಲಾಗಿದೆ ಎಂದು ಮಹೀಂದ್ರ ಎಲೆಕ್ಟ್ರಿಕ್‌ ಮೊಬಿಲಿಟಿ ಕಂಪನಿಯ ಸಿಇಒ ಸುಮನ್‌ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾದರಿಯು 310 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಗರಿಷ್ಠ ವೇಗ 25 ಕಿಲೋ ಮೀಟರ್‌ ಇದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು