ಸೋಮವಾರ, ಮಾರ್ಚ್ 30, 2020
19 °C

ಮಾರುತಿ ಹೊಸ ಇಗ್ನಿಸ್ ಬಿಡುಗಡೆ; ಎಸ್‌ಯುವಿ ವಿನ್ಯಾಸ, ಆರಂಭಿಕ ಬೆಲೆ ₹4.8 ಲಕ್ಷ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾರುತಿ ಸುಜುಕಿಯ ಹೊಸ ಇಗ್ನಿಸ್‌

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಬಿಎಸ್‌ 6 ಗುಣಮಟ್ಟದ 'ಇಗ್ನಿಸ್‌' ಕಾರು ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹4.89 ಲಕ್ಷ ನಿಗದಿಯಾಗಿದೆ. 

1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಹೊಸ ಇಗ್ನಿಸ್‌, 5–ಸ್ಪೀಡ್‌ ಮ್ಯಾನ್ಯುವಲ್‌ ಮತ್ತು ಆಟೋ ಗೇರ್‌ ಶಿಫ್ಟ್‌ ಟ್ರಾನ್ಸ್‌ಮಿಷನ್‌ ಎರಡೂ ಮಾದರಿಗಳಲ್ಲಿ ಲಭ್ಯವಿದೆ. ಬೆಲೆ ₹4.89–7.19 ಲಕ್ಷ (ದೆಹಲಿ ಎಕ್ಸ್‌–ಶೋರೂಂ) ನಿಗದಿಯಾಗಿದೆ. 

17.78 ಸೆಂ.ಮೀ. ಸ್ಮಾರ್ಟ್‌ಪ್ಲೇ ಸ್ಟುಡಿಯೊ ವಾಯ್ಸ್ ಕಮಾಂಡ್‌ ಸೇರಿದಂತೆ ಅತ್ಯಾಧುನಿಕ ಆಯ್ಕೆಗಳನ್ನು ಒಳಗೊಂಡಿದೆ. ಹಿಂದಿನ ಇಗ್ನಿಸ್‌ಗಿಂತ ಒಳಾಂಗಣ ವಿನ್ಯಾಸ ಬದಲಿಸಲಾಗಿದ್ದು, ಹೆಚ್ಚು ಸ್ಥಳಾವಕಾಶದ ಅನುಭವ ಸಿಗಲಿದೆ. ಕಾರಿನ ಮುಂಭಾಗದಲ್ಲಿ ಅಳವಡಿಸಲಾಗಿರುವ ಗ್ರಿಲ್‌, ಹೊಸ ರೀತಿಯ ಎಲ್‌ಇಡಿ ಪ್ರೊಜೆಕ್ಟರ್‌ ಹೆಡ್ ಲೈಟ್‌ಗಳು ಗಮನ ಸೆಳೆಯುತ್ತವೆ. 

ಎಸ್‌ಯುವಿ ರೀತಿಯ ವಿನ್ಯಾಸ ಮತ್ತು ವಿಶಾಲವಾದ ಒಳಾಂಗಣ ಹೊಂದಿರುವ ಹೊಸ ಇಗ್ನಿಸ್‌ ಗ್ರಾಹಕರನ್ನು ಸೆಳೆಯಲಿದೆ ಎಂದು ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಅಯುಕಾವಾ ಹೇಳಿದ್ದಾರೆ. 

ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌ನಲ್ಲಿ ಡೆಲ್ಟಾ, ಝೆಟಾ ಹಾಗೂ ಆಲ್ಫಾ ಸೇರಿದಂತೆ ನಾಲ್ಕು ಮಾದರಿಗಳಲ್ಲಿ ಲಭ್ಯವಿರುವ ಕಾರಿನ ಬೆಲೆ ₹4.89–6.73 ಲಕ್ಷ. ಆಟೋ ಗೇರ್‌ ಶಿಫ್ಟ್ ಕಾರುಗಳ ಬೆಲೆ ₹6.13–7.19 ಲಕ್ಷ ಇದೆ ಎಂದು ಕಂಪನಿ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು