ಭಾನುವಾರ, ಸೆಪ್ಟೆಂಬರ್ 19, 2021
24 °C

ಹೊಸ ಟಿಯಾಗೊ ಎನ್‌ಆರ್‌ಜಿ ಬಿಡುಗಡೆ, ಇದರ ಬೆಲೆಯೆಷ್ಟು ಗೊತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ದೇಶದ ಮಾರುಕಟ್ಟೆಗೆ ಬುಧವಾರ ಹೊಸ ‘ಟಿಯಾಗೊ ಎನ್‌ಆರ್‌ಜಿ’ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಿದೆ. ಇದರ ಎಕ್ಸ್‌ಷೋರೂಂ ಬೆಲೆ ₹ 6.57 ಲಕ್ಷದಿಂದ ಆರಂಭವಾಗುತ್ತದೆ.

ಸುರಕ್ಷತೆ ವಿಚಾರದಲ್ಲಿ ‘ಜಿಎನ್‌ಸಿಎಪಿ’ಯಿಂದ ‘4 ಸ್ಟಾರ್’ ರೇಟಿಂಗ್ ಪಡೆದಿರುವ ಈ ಕಾರು ಫಾರೆಸ್ಟಾ ಗ್ರೀನ್, ಫೈರ್ ರೆಡ್, ಸ್ನೋ ವೈಟ್ ಮತ್ತು ಕ್ಲೌಡಿ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬುಧವಾರದಿಂದಲೇ ಎಲ್ಲಾ ಷೋರೂಂಗಳಲ್ಲಿಯೂ ಖರೀದಿಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ವರ್ಚುವಲ್ ವೇದಿಕೆಯ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬಾ, ‘ಇದು ಬಲಿಷ್ಠವಾಗಿರುವುದಷ್ಟೇ ಅಲ್ಲದೆ ಒಳಗಾಂಣದಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಗರ ಮತ್ತು ಒರಟಾದ ರಸ್ತೆಗಳಲ್ಲಿ ಚಲಾಯಿಸಲು ಸುಲಭ ಆಗುವಂತೆ ರೂಪಿಸಲಾಗಿದೆ. ಗ್ರಾಹಕರು ಹೊಸ ಟಿಯಾಗೊ ಎನ್‌ಆರ್‌ಜಿಯನ್ನು ಇಷ್ಟಪಡುವ ವಿಶ್ವಾಸವಿದೆ’ ಎಂದು ಹೇಳಿದರು.

1.2 ಲೀಟರ್ ರಿವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮ್ಯಾನುಯಲ್ ಮತ್ತು ಎಎಂಟಿ ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ. ಪುಷ್ ಸ್ಟಾರ್ಟ್ ಬಟನ್, ರಿಯರ್ ಪಾರ್ಕಿಂಗ್ ಸೆನ್ಸರ್, ಆಟೊಫೋಲ್ಡ್ ಒಆರ್‌ವಿಎಂ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು