ಶನಿವಾರ, ಜನವರಿ 29, 2022
23 °C

ಸ್ಕೋಡಾ ಕೋಡಿಯಾಕ್‌ನ ಹೊಸ ಆವೃತ್ತಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಕೋಡಾ ಕಂಪನಿಯು ತನ್ನ ಪ್ರೀಮಿಯಂ ಎಸ್‌ಯುವಿ ಕೋಡಿಯಾಕ್‌ನ ಹೊಸ ಆವೃತ್ತಿಯನ್ನು ದೇಶದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 34.99 ಲಕ್ಷದಿಂದ ₹ 37.49 ಲಕ್ಷದವರೆಗೆ ಇದೆ.

ಏಳು ಆಸನಗಳ ಹೊಸ ಆವೃತ್ತಿಯು 2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

‘ವಿಶೇಷ ವೈಶಿಷ್ಟ್ಯಗಳು ಮತ್ತು ಸಾಟಿಯಿಲ್ಲದ ಸುರಕ್ಷತೆಯ ಕಾರಣದಿಂದ ನಿತ್ಯದ ಸವಾರಿಗೆ ಅಥವಾ ಆಫ್‌ ರೋಡ್‌ ಸಾಹಸಗಳಿಗಾಗಿ ಈ ಎಸ್‌ಯುವಿ ಪರಿಪೂರ್ಣವಾದ ವಾಹನವಾಗಿದೆ’ ಎಂದು ಸ್ಕೋಡಾ ಆಟೊ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಜಾಕ್‌ ಹಾಲಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

9 ಏರ್‌ಬ್ಯಾಗ್‌, ಅಡಾಪ್ಟಿವ್‌ ಫ್ರಂಟ್‌ ಹೆಡ್‌ಲೈಟ್ಸ್‌, ಎಲೆಕ್ಟ್ರಾನಿಕ್‌, ಮೆಕ್ಯಾನಿಕಲ್‌ ಮತ್ತು ಹೈಡ್ರಾಲಿಕ್‌ ಬ್ರೇಕ್‌ ಅಸಿಸ್ಟ್‌, ಪಾರ್ಕ್‌ ಅಸಿಸ್ಟ್‌ ವಿತ್ ಹ್ಯಾಂಡ್‌ಫ್ರೀ ಪಾರ್ಕಿಂಗ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು