ಬೆಂಗಳೂರು: ಜಪಾನ್ನ ಸುಜುಕಿ ಮೋಟಾರ್ ಕಂಪನಿಯ ಭಾರತದ ಘಟಕವು ವಿದ್ಯುತ್ ಚಾಲಿತ (EV) ಸ್ಕೂಟರ್ ಇ–ಆಕ್ಸೆಸ್ ಅನ್ನು ಪರಿಚಯಿಸಿದೆ.

ಲಿಥಿಯಂ ಐರನ್ ಫಾಸ್ಪೇಟ್ (LFP) ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಈ ರಾಸಾಯನಿಕ ಮಿಶ್ರಿತ ಬ್ಯಾಟರಿಯು ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (NMC) ಬ್ಯಾಟರಿಗಿಂತ ನಾಲ್ಕು ಪಟ್ಟು ದೀರ್ಘ ಬಾಳಿಕೆಯದ್ದು ಎಂದು ಕಂಪನಿ ಹೇಳಿದೆ.

ಸ್ಕೂಟರ್ನ ಹಗುರವಾದ ಚಾಸೀಸ್ ಒಳಗೆ ಜೋಡಿಸಿರುವ ಬ್ಯಾಟರಿಗೆ ಅಲ್ಯುಮಿನಿಯಂ ಕವಚ ನೀಡಲಾಗಿದೆ. 4.1 ಕಿಲೋ ವಾಟ್ ಮೊಟಾರ್ ಹೊಂದಿರುವ ಸುಜುಕಿ ಇವಿ ಸ್ಕೂಟರ್ 15 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇಕೊ, ರೈಡ್ ಎ ಮತ್ತು ರೈಡ್ ಬಿ ಎಂಬ ಮೂರು ಮೋಡ್ಗಳನ್ನು ನೀಡಲಾಗಿದೆ. ರಿವರ್ಸ್ ಮೋಡ್ ಕೂಡಾ ಇದೆ. ಜತೆಗೆ ರಿಜನರೇಟಿವ್ ಬ್ರೇಕಿಂಗ್ ಕೂಡಾ ನೀಡಲಾಗಿದೆ. ಇದರಿಂದ ಬ್ರೇಕ್ ಹಿಡಿದಾಗ ಮೋಟಾರ್ ಮತ್ತೆ ಚಾರ್ಜ್ ಆಗಿ, ಬ್ಯಾಟರಿಯನ್ನು ಮರುಪೂರಣ ಮಾಡಲಿದೆ.

ಎಲ್ಇಡಿ ದೀಪ, ಟು ಟೋನ್ ಅಲಾಯ್ ವೀಲ್ ಮತ್ತು 7 ವರ್ಷ ಅಥವಾ 70 ಸಾವಿರ ಕಿಲೋ ಮೀಟರ್ವರೆಗೂ ಬಾಳಿಕೆ ಬರುವ ಡ್ರೈವ್ ಬೆಲ್ಟ್ ಇದರಲ್ಲಿ ಅಳವಡಿಸಲಾಗಿದೆ. ಸುಜುಕಿಯು ದೇಶದಾದ್ಯಂತ 1,200 ಮಳಿಗೆಗಳನ್ನು ಹೊಂದಿದ್ದು, ಇಲ್ಲಿ ಇ–ಆಕ್ಸೆಸ್ ಸ್ಕೂಟರ್ ಖರೀದಿ, ಸರ್ವೀಸ್ ಮತ್ತು ಚಾರ್ಜಿಂಗ್ ಸೌಲಭ್ಯವನ್ನೂ ಪಡೆಯಬಹುದು ಎಂದು ಕಂಪನಿ ಹೇಳಿದೆ.

ಸುಜುಕಿ ಇ–ಆಕ್ಸೆಸ್ಗೆ 7 ವರ್ಷಗಳ ವಾರೆಂಟಿ ಅಥವಾ 80 ಸಾವಿರ ಕಿಲೋಮೀಟರ್ವರೆಗೆ ವೆಚ್ಚವಿಲ್ಲ. 3 ವರ್ಷಗಳ ನಂತರ ಶೇ 60ರಷ್ಟು ದರಕ್ಕೆ ಮರಳಿ ಖರೀದಿಸುವ ಖಾತ್ರಿಯನ್ನೂ ಕಂಪನಿ ನೀಡುತ್ತಿದೆ. ಪ್ರಸ್ತುತ ಸುಜುಕಿ ಸ್ಕೂಟರ್ ಹೊಂದಿರುವವರಿಗೆ ₹10 ಸಾವಿರವರೆಗೆ ಬೋನಸ್, ಬೇರೆ ಕಂಪನಿಯ ಸ್ಕೂಟರ್ ಹೊಂದಿರುವವರಿಗೆ ₹7 ಸಾವಿರ ಬೋನಸ್ ನೀಡುವುದಾಗಿಯೂ ಕಂಪನಿ ಹೇಳಿದೆ.

24 ಗಂಟೆಗಳಿಂದ 3 ವರ್ಷಗಳವರೆಗೆ ಬಾಡಿಗೆ ರೂಪದಲ್ಲೂ ಇ–ಆಕ್ಸೆಸ್ ಹೊಂದಬಹುದು. ಸ್ಕೂಟರ್ ಖರೀದಿಗೆ ವಾಹನ ಸಾಲ ಪಡೆಯುವವರಿಗೆ ಶೇ 5.99 ಬಡ್ಡಿ ದರ ಸೌಲಭ್ಯವಿದೆ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ನ ಎಕ್ಸ್ ಶೋರೂಂ ಬೆಲೆ ₹1,88,490ಕ್ಕೆ ಕಂಪನಿ ನಿಗದಿಪಡಿಸಿದೆ. ಮಾರಾಟ ಆರಂಭವಾದ ನಂತರ ಸುಜುಕಿ ಇ–ಆಕ್ಸೆಸ್ ಅನ್ನು ಫ್ಲಿಪ್ಕಾರ್ಟ್ ಮೂಲಕವೂ ಖರೀದಿಸಬಹುದು ಎಂದು ಸುಜುಕಿ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಉಮೇಡಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.