ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌ನಿಂದ ಹೊಸ ಇಂಟ್ರಾ ವಿ70 ಪಿಕಪ್

Published 8 ಡಿಸೆಂಬರ್ 2023, 7:52 IST
Last Updated 8 ಡಿಸೆಂಬರ್ 2023, 7:52 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ಇಂಟ್ರಾ ವಿ70, ಇಂಟ್ರಾ ವಿ20 ಗೋಲ್ಡ್‌ ಮತ್ತು ಏಸ್‌ ಎಚ್‌ಟಿ+ ಪಿಕಪ್‌ಗಳನ್ನು ಬಿಡುಗಡೆ ಮಾಡಿದೆ. 

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿಯೂ ಇದನ್ನು ಬಳಸಬಹುದು. ಹಲವು ರೀತಿಯ ಸರಕುಗಳ ಸಾಗಣೆಗೆ ಉಪಯುಕ್ತವಾಗಿವೆ. ಭಾರವಾದ ಸರಕುಗಳನ್ನು ಹೆಚ್ಚಿನ ದೂರದವರೆಗೆ ಸಾಗಿಸಬಹುದು. ಕಂಪನಿಯ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್ ಆರಂಭ ಆಗಿದೆ ಎಂದು ಕಂಪನಿಯು ತಿಳಿಸಿದೆ.

ಇಂಧನ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚಿನ ಭಾರವನ್ನು ದೂರದ ಸ್ಥಳಗಳಿಗೆ ಕೊಂಡೊಯ್ಯಲು ಆಗುವಂತೆ ಈ ವಾಹನಗಳು ಸಿದ್ಧಪಡಿಸಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ನಿರ್ದೇಶಕ ಗಿರೀಶ್‌ ವಾಘ್ ತಿಳಿಸಿದರು.

ಇಂಟ್ರಾ ವಿ70 ಪಿಕಪ್‌ ಗರಿಷ್ಠ 1,700ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್‌, 220ಎನ್‌ಎಂ ಟಾರ್ಕ್ ಒಳಗೊಂಡಿದೆ. 

ಇಂಟ್ರಾ ವಿ20 ಗೋಲ್ಡ್‌ ಗರಿಷ್ಠ 1,200ಕೆ.ಜಿಗೆ ಸಾಮರ್ಥ್ಯ ಇದ್ದು, ಗರಿಷ್ಠ 800 ಕಿಲೋ ಮೀಟರ್ ಸಾಮರ್ಥ್ಯ ಹೊಂದಿದೆ.

ಏಸ್‌ ಎಚ್‌ಟಿ+ ಗರಿಷ್ಠ 900 ಕೆ.ಜಿ ಸಾಮರ್ಥ್ಯ, 800ಸಿಸಿ ಡೀಸೆಲ್‌ ಎಂಜಿನ್‌, 85ಎನ್‌ಎಂ ಟಾರ್ಕ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT