ಶುಕ್ರವಾರ, ಮಾರ್ಚ್ 5, 2021
30 °C

ಟಾಟಾ ಮೋಟರ್ಸ್‌ನ ಆಲ್ಟ್ರೋಜ್‌ ಐ–ಟರ್ಬೊ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಲ್ಟ್ರೋಜ್‌ನ ಐ–ಟರ್ಬೊ ಪೆಟ್ರೋಲ್‌ ಆವೃತ್ತಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಇದರ ಪರಿಚಯಾತ್ಮಕ ಬೆಲೆಯು ಹಾಲಿ ಇರುವ ಪೆಟ್ರೋಲ್‌ ಎಂಜಿನ್‌ ಆವೃತ್ತಿಗಿಂತಲೂ ₹ 60 ಸಾವಿರ ಹೆಚ್ಚಿಗೆ ಇರಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯ, ಪೆಟ್ರೋಲ್‌ ಎಂಜಿನ್‌ ಆವೃತ್ತಿಯ ಎಕ್ಸ್‌ ಷೋರೂಂ ಬೆಲೆ ದೆಹಲಿಯಲ್ಲಿ ₹ 5.7 ಲಕ್ಷದಿಂದ ₹ 8.86 ಲಕ್ಷದವರೆಗಿದೆ.

ಟಾಟಾ ಮೋಟರ್ಸ್‌ನ ಕನೆಕ್ಟೆಡ್ ಕಾರ್‌ ತಂತ್ರಜ್ಞಾನದಲ್ಲಿ iRA ಸೌಲಭ್ಯ ಅಲ್ಲದೇ 27 ಹೊಸ ವೈಶಿಷ್ಟ್ಯಗಳು ಹಾಗೂ ಹಿಂದಿ, ಇಂಗ್ಲಿಷ್‌ ಮತ್ತು ಹಿಂಗ್ಲಿಷ್‌ ಭಾಷೆಗಳಲ್ಲಿ ವಾಯ್ಸ್‌ ಕಮಾಂಡ್‌ ಗುರುತಿಸುವ ವ್ಯವಸ್ಥೆಯನ್ನೂ ಒಳಗೊಂಡಿದೆ.

ಆಲ್ಟ್ರೋಜ್ ಐ–ಟರ್ಬೊ 1.2 ಲೀಟರ್‌ ಪೆಟ್ರೋಲ್‌ ಐ–ಟರ್ಬೊ ಎಂಜಿನ್‌ ಮತ್ತು 1.2 ಲೀಟರ್ ಎಲ್‌ ರೆವಟ್ರಾನ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. 110ಎಚ್‌ಪಿ ಮತ್ತು 140ಎನ್‌ಎಂ ಟಾರ್ಕ್‌ ಹಾಗೂ 5 ಸ್ಪೀಡ್‌ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಒಳಗೊಂಡಿದೆ. ಎಕ್ಸ್‌ಪ್ರೆಸ್‌ ಕೂಲ್‌ ಸೌಲಭ್ಯ ಹೊಂದಿದ್ದು, ಶೇ 70ರಷ್ಟು ವೇಗವಾಗಿ ಕೂಲಿಂಗ್‌ ಆಗಲಿದೆ. ಪ್ರತಿ ಗಂಟೆಗೆ 100 ಕಿ.ಮೀ ವೇಗ ತಲುಪಲು 11.9 ಸೆಕೆಂಡ್‌ ತೆಗೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ

iRA ಆ್ಯಪ್‌ (ಇಂಟೆಲಿಜೆಂಟ್‌ ರಿಯಲ್‌ ಟೈಮ್‌ ಅಸಿಸ್ಟ್‌): ಈ ಆ್ಯಪ್‌ನಲ್ಲಿ 5 ಹಂತದ ಸಂಪರ್ಕ  (ರಿಮೋಟ್‌ ಕಮಾಂಡ್‌, ವೆಹಿಕಲ್‌ ಸೆಕ್ಯುರಿಟಿ, ಲೊಕೇಷನ್‌ ಬೇಸ್ಡ್‌ ಸರ್ವೀಸಸ್‌, ಗೇಮಿಫಿಕೇಷನ್‌ ಹಾಗೂ ಲೈವ ವೆಹಿಕಲ್‌ ಡಯಾಗ್ನಸಿಸ್‌) ಹೊಂದಿದ್ದು, ಒಟ್ಟಾರೆ 27 ವೈಶಿಷ್ಟ್ಯಗಳಿಂದ ಕೂಡಿದೆ. ಆಲ್ಟ್ರೋಜ್‌ಗೆ ನ್ಯೂ ಹಾರ್ಬರ್‌ ಬ್ಲೂ ಕಲರ್‌ ಸೇರ್ಪಡೆಯಾಗಿದೆ. ಆಲ್ಟ್ರೋಜ್‌ನ ಎಕ್ಸ್‌ಎಂಪ್ಲಸ್‌ ಹಾಗೂ ಅದಕ್ಕಿಂತ ಮೇಲ್ಮಟ್ಟದ ಎಲ್ಲಾ ಆವೃತ್ತಿಗಳಲ್ಲಿ ಈ ಬಣ್ಣದ ಆಯ್ಕೆ ನೀಡಲಾಗಿದೆ. ಇಂಧನ ಟ್ಯಾಕ್‌ ಸಾಮರ್ಥ್ಯ 37 ಲೀಟರ್‌ ಇದೆ.

ಐ–ಟರ್ಬೊ ಪೆಟ್ರೋಲ್‌ ಮತ್ತು ನ್ಯೂ ಎಕ್ಸ್‌ಜೆಡ್‌ ಪ್ಲಸ್‌ ಆವೃತ್ತಿಗಳೊಂದಿಗೆ ಆಲ್ಟ್ರೋಜ್‌ನ ಮೊದಲ ವಾರ್ಷಿಕೋತ್ಸವದ ಸಂಭ್ರಮ ಆಚರಿಸುತ್ತಿರುವುದು ಹೆಚ್ಚಿನ ಸಂತೋಷಕ್ಕೆ ಕಾರಣವಾಗಿದೆ. 2020ರ ಜನವರಿಯಲ್ಲಿ ಬಿಡುಗಡೆ ಆದಾಗಿನಿಂದಲೂ ಸುರಕ್ಷತೆ, ಹೊಸ ವಿನ್ಯಾಸ ಮತ್ತು ಉತ್ತಮ ಕಾರ್ಯಕ್ಷಮತೆಯ ದೃಷ್ಟಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 202–21ರಲ್ಲಿ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನಮ್ಮ ಮಾರುಕಟ್ಟೆ ಪಾಲು ಶೇ 5.4ರಷ್ಟು ಹೆಚ್ಚಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ನಮ್ಮ ಮಾರುಕಟ್ಟೆ ಪಾಲು ಶೇ 17ರಷ್ಟಾಗಿದೆ’ ಎಂದು ಕಂಪನಿಯು ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಶೈಲೇಶ್‌ ಚಂದ್ರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು