ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ಈ ಬಾರಿಯ ಹಬ್ಬದ ಋತುವಿನಲ್ಲಿ ತನ್ನ ಹೊಸ ಮಿನಿ ಎಸ್ಯುವಿ ‘ಪಂಚ್’ ಬಿಡುಗಡೆ ಮಾಡುವುದಾಗಿ ಸೋಮವಾರ ತಿಳಿಸಿದೆ.

ಕಂಪನಿಯು 2020ರ ವಾಹನ ಮೇಳದಲ್ಲಿ ಪ್ರದರ್ಶಿಸಿದ್ದ ಎಚ್2ಎಕ್ಸ್ ಕಾನ್ಸೆಪ್ಟ್ ಕಾರಿನ ಆಧಾರದ ಮೇಲೆ ‘ಪಂಚ್’ ಎಸ್ಯುವಿ ರೂಪಿಸಲಾಗಿದೆ. ದೀಪಾವಳಿ ವೇಳೆಗೆ ಇದು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಹೆಸರೇ ಸೂಚಿಸುವಂತೆ ‘ಟಾಟಾ ಪಂಚ್’ ಶಕ್ತಿಯುತ ವಾಹನವಾಗಿರಲಿದೆ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ಎಎಲ್ಎಫ್ಎ–ಎಆರ್ಸಿ (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್ ಆರ್ಕಿಟೆಕ್ಚರ್ನಿಂದ ಸಿದ್ಧಪಡಿಸಿರುವ ಕಂಪನಿಯ ಮೊದಲ ಎಸ್ಯುವಿ ಇದಾಗಿದೆ. ಎಸ್ಯುವಿ ಲಕ್ಷಣಗಳನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ಸಿಟಿ ಕಾರ್ ಬಯಸುವ ಗ್ರಾಹಕರಿಗೆ ಹೇಳಿ ಮಾಡಿಸಿದ್ದಾಗಿದೆ. ಕಂಪನಿಯ ಎಸ್ಯುವಿ ಕುಟುಂಬಕ್ಕೆ ನಾಲ್ಕನೇ ಸೇರ್ಪಡೆಯಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.