ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೋಟ ಹೈಬ್ರಿಡ್‌ ಎಂಪಿವಿ ವೆಲ್‌ಫೈರ್‌

Last Updated 18 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ಸೆಲ್ಫ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿರುವಹೈಬ್ರಿಡ್‌ ಎಲೆಕ್ಟ್ರಿಕ್‌ ಐಷಾರಾಮಿ ಎಂಪಿವಿ ‘ವೆಲ್‌ಫೈರ್’ ಅನಾವರಣಗೊಳಿಸಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹79.5 ಲಕ್ಷ ಇದೆ.

ಇದು ಕಡಿಮೆ ಇಂಧನ ಬಳಕೆ ಮತ್ತು ಕಡಿಮೆ ಇಂಗಾಲ ಹೊರಸೂಸಲಿದ್ದು, ಈಗಾಗಲೇ 180 ಬುಕಿಂಗ್‌ ಆಗಿದೆ ಎಂದು ಕಂಪನಿ ತಿಳಿಸಿದೆ 2.5 ಲೀಟರ್‌ನ 4 ಸಿಲಿಂಡರ್‌ ಗ್ಯಾಸೊಲಿನ್‌ ಹೈಬ್ರಿಡ್‌ ಎಂಜಿನ್‌, ಎರಡು ಎಲೆಕ್ಟ್ರಾನಿಕ್‌ ಮೋಟರ್‌ ಮತ್ತು ಹೈಬ್ರಿಡ್‌ ಬ್ಯಾಟರಿಗಳ‌ನ್ನು ಒಳಗೊಂಡಿದೆ.

‘ದೇಶದಲ್ಲಿ ವಾಹನ ಉದ್ಯಮವು ತಂತ್ರಜ್ಞಾನ ಆಧಾರಿತ ಬದಲಾವಣೆಗೆ ಒಳಪಡುತ್ತಿದೆ. ನಮ್ಮ ಗ್ರಾಹಕರಿಗೆ ಅದ್ಭುತ ಮತ್ತು ಆರಾಮದಾಯಕ ಅನುಭವ ನೀಡುವ ಜತೆಗೆ ಪರಿಸರ ಕಾಳಜಿಯನ್ನೂ ಗಮನದಲ್ಲಿ ಇಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್‌ ತಿಳಿಸಿದ್ದಾರೆ.

ಸುಧಾರಿತ ತಂತ್ರಜ್ಞಾನ, ಆರಾಮದಾಯಕ ಮತ್ತು ಸುಸ್ಥಿರತೆಯ ನಿಟ್ಟಿನಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಚಾಲನಾ ಅನುಭವ ನೀಡಲಿದೆ. ಭವಿಷ್ಯದ ಪರಿಸರ ಸ್ನೇಹಿ ವಾಹನಗಳ ಸಾಲಿಗೆ ಐಷಾರಾಮಿ ಆಯ್ಕೆಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಸಕಜು ಯೊಶಿಮುರಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT