ಶನಿವಾರ, ಅಕ್ಟೋಬರ್ 16, 2021
22 °C

ಟಿವಿಎಸ್‌ ಜುಪಿಟರ್‌ 125ಸಿಸಿ ಸ್ಕೂಟರ್‌ ಬಿಡುಗಡೆ, ಇಲ್ಲಿದೆ ಬೆಲೆ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಿವಿಎಸ್‌ ಮೋಟರ್‌ ಕಂಪನಿಯು ತನ್ನ ಜುಪಿಟರ್‌ ಸ್ಕೂಟರ್‌ನ 125 ಸಿಸಿ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 73,400ರಿಂದ ಆರಂಭ ಆಗುತ್ತದೆ.

ಸೆಮಿ ಡಿಜಿಟಲ್‌ ಸ್ಪೀಡೊಮೀಟರ್‌, ಸೀಟಿನ ಅಡಿಯಲ್ಲಿ 33 ಲೀಟರ್‌ ಸಾಮರ್ಥ್ಯದ ಅತ್ಯಧಿಕ ಸಂಗ್ರಹಣಾ ಸ್ಥಳಾವಕಾಶ, ಎರಡು ಹೆಲ್ಮೆಟ್‌ ಇಡುವಷ್ಟು ಜಾಗ, ದೊಡ್ಡದಾದ ಸೀಟ್, ಆಕರ್ಷಕ ವಿನ್ಯಾಸ ಮತ್ತು ಸರಿಸಾಟಿಯಿಲ್ಲದ ಮೈಲೇಜ್ ಹೊಂದಿದೆ ಎಂದು ಕಂಪನಿಯು ಹೇಳಿದೆ.

‘ಹೊಸ ಸ್ಕೂಟರ್‌ ದೃಢವಾಗಿದ್ದು, ಹೆಚ್ಚುವರಿಯಾಗಿ ವಿವಿಧ ಸೌಲಭ್ಯಗಳನ್ನು ಹೊಂದಿದೆ’ ಎಂದು ಟಿವಿಎಸ್ ಮೋಟರ್ ಕಂಪನಿಯ ಸಿಇಒ ಕೆ.ಎನ್. ರಾಧಾಕೃಷ್ಣನ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು