ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TVS X: ನೂತನ ದ್ವಿಚಕ್ರ ‘ಟಿವಿಎಸ್‌ ಎಕ್ಸ್‌’ ಬಿಡುಗಡೆ

Published 24 ಆಗಸ್ಟ್ 2023, 16:49 IST
Last Updated 24 ಆಗಸ್ಟ್ 2023, 16:49 IST
ಅಕ್ಷರ ಗಾತ್ರ

ದುಬೈ: ಮಿಲೆನಿಯಲ್‌ಗಳು ಹಾಗೂ ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗುರಿಯಾಗಿಸಿಕೊಂಡು ಟಿವಿಎಸ್‌ ಮೋಟರ್ ಕಂಪನಿಯು ಹೊಸ ವಿದ್ಯುತ್ ಚಾಲಿತ (ಇ.ವಿ) ದ್ವಿಚಕ್ರ ವಾಹನ ‘ಟಿವಿಎಸ್‌ ಎಕ್ಸ್‌’ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ವಾಹನದ ಪರಿಚಯಾತ್ಮಕ ಬೆಲೆ ₹2.5 ಲಕ್ಷ. ನಿಲುಗಡೆಯ ಸ್ಥಿತಿಯಿಂದ ಗಂಟೆಗೆ 40 ಕಿ.ಮೀ. ವೇಗವನ್ನು ಇದು 2.6 ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ಇದು ಗಂಟೆಗೆ ಗರಿಷ್ಠ 105 ಕಿ.ಮೀ. ವೇಗದಲ್ಲಿ ಸಾಗಬಲ್ಲದು.

ಬ್ಯಾಟರಿಯನ್ನು ಟಿವಿಎಸ್ ಕಂಪನಿಯು ತಾನೇ ಅಭಿವೃದ್ಧಿಪಡಿಸಿದ್ದು, ಸುರಕ್ಷಿತವಾಗಿದೆ ಹಾಗೂ ಹೆಚ್ಚು ಅವಧಿಗೆ ಬಾಳಿಕೆ ಬರುವಂತಿದೆ ಎಂದು ತಿಳಿಸಿದೆ.

ಕಂಪನಿಯ ವೆಬ್‌ಸೈಟ್‌ ಮೂಲಕ ಈ ವಾಹನ ಬುಕ್ ಮಾಡಬಹುದು. ನವೆಂಬರ್‌ನಿಂದ ಇದನ್ನು ಗ್ರಾಹಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಲಿದೆ. ಈ ವಾಹನಕ್ಕೆ ಫೇಮ್ ಯೋಜನೆಯ ಅಡಿಯಲ್ಲಿ ಯಾವುದೇ ಸಬ್ಸಿಡಿ ಸಿಗುವುದಿಲ್ಲ.

1981ರಿಂದ 1996ರ ನಡುವೆ ಜನಿಸಿದವರನ್ನು ಮಿಲೆನಿಯಲ್‌ಗಳು ಎಂದು, 1996ರ ನಂತರ ಜನಿಸಿದವರನ್ನು ಜೆನ್‌ ಜೆಡ್‌ ಎಂದು ಗುರುತಿಸಲಾಗುತ್ತಿದೆ. ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲು ಕಂಪನಿಯು ₹250 ಕೋಟಿ ಹೂಡಿಕೆ ಮಾಡಿದೆ.

ಈ ವಾಹನವನ್ನು ಬಾಂಗ್ಲಾದೇಶ, ನೇಪಾಳ, ಯುರೋಪ್‌, ಲ್ಯಾಟಿನ್ ಅಮೆರಿಕಕ್ಕೆ ರಫ್ತು ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT