ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪೀಳಿಗೆಯ ಜೀಪ್‌ ವ್ರ್ಯಾಂಗ್ಲರ್ ಬಿಡುಗಡೆ

Last Updated 21 ಆಗಸ್ಟ್ 2019, 14:36 IST
ಅಕ್ಷರ ಗಾತ್ರ

ಫಿಯಟ್ ಕ್ರಿಸ್ಲರ್‌ ಆಟೊಮೊಬೈಲ್‌ (ಎಫ್‌ಸಿಎ) ಕಂಪನಿಯು ಭಾರತದ ಮಾರುಕಟ್ಟೆಗೆ ಮುಂದಿನ ಪೀಳಿಗೆಯ ಜೀಪ್‌ ವ್ರ್ಯಾಂಗ್ಲರ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹ 63.94 ಲಕ್ಷದಿಂದ ಆರಂಭವಾಗಲಿದೆ.

ದೇಶದಾದ್ಯಂತ ಇರುವ ಕಂಪನಿಯ 10 ಮಳಿಗೆಗಳಲ್ಲಿ ಈ ಜೀಪ್‌ ಖರೀದಿಗೆ ಲಭ್ಯವಾಗಲಿದೆ.

ಇದು 4 ಸಿಲಿಂಡರ್‌, 2 ಲೀಟರ್‌ ಟರ್ಬೊ ಚಾರ್ಜ್ಡ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. 8 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಇದೆ. 8.4 ಇಂಚು ಟಚ್‌ಸ್ಕ್ರೀನ್‌ ಇರುವ ಆ್ಯಪಲ್‌ ಕಾರ್‌ ಪ್ಲೇ, ಆಂಡ್ರಾಯ್ಡ್‌ ಆಟೊ ಮತ್ತು ಬಿಲ್ಟ್‌ ಇನ್‌, ಪಿಂಚ್‌ ಟು ಜೂಮ್‌ ನ್ಯಾವಿಗೇಷನ್‌ ಸೌಲಭ್ಯಗಳನ್ನು ಒಳಗೊಂಡಿದೆ.

ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಆ್ಯಂಟಿ ಬ್ರೇಕಿಂಗ್‌ ಸಿಸ್ಟಂ ಮತ್ತು ಬ್ರೇಕ್‌ ಅಸಿಸ್ಟ್‌, ಆಲ್‌ ಸ್ಪೀಡ್‌ ಟ್ರ್ಯಾಕ್ಷನ್ ಕಂಟ್ರೋಲ್‌, ಸುಧಾರಿತ ಮಲ್ಟಿ ಸ್ಟೇಜ್‌ ಏರ್‌ಬ್ಯಾಗ್ಸ್‌ ಮತ್ತು ಫ್ರಂಟ್‌ ಸೀಟ್‌ ಮೌಂಟೆಡ್‌ ಸೈಡ್‌ ಏರ್‌ಬ್ಯಾಗ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT