ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಸೀಟುಗಳ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ‘ಹೆಕ್ಟರ್‌ ಪ್ಲಸ್‌’

Last Updated 27 ಜುಲೈ 2020, 19:30 IST
ಅಕ್ಷರ ಗಾತ್ರ

ಎಂಜಿ ಮೋಟರ್ ಇಂಡಿಯಾದ ಬಹು ನಿರೀಕ್ಷಿತ 6-ಸೀಟಿನ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ‘ಹೆಕ್ಟರ್‌ ಪ್ಲಸ್‌’ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಂಪನಿಯು ಹೊಸ ತಂತ್ರಜ್ಞಾನ ಮತ್ತು ಐಷಾರಾಮದ ಮಿಶ್ರಣದ ರೂಪದಲ್ಲಿ ಇದನ್ನು ಪರಿಚಯಿಸಿದೆ.

ಹೆಕ್ಟರ್‌ನಲ್ಲಿನ ಐದು ಸೀಟುಗಳ ಬದಲಿಗೆ ಇದರಲ್ಲಿ ವಯಸ್ಕರಿಗೆ ನಾಲ್ಕು ಮತ್ತು ಇಬ್ಬರು ಮಕ್ಕಳಿಗೆ ಎರಡು ಸೀಟುಗಳನ್ನು ಅಳವಡಿಸಲಾಗಿದೆ. ಈ ಉದ್ದೇಶಕ್ಕೆ ಕಾರ್‌ ಒಳಗಿನ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಸನ್‌ರೂಫ್‌ ಹೊಂದಿರುವ ದೇಶದ ಮೊದಲ 6 ಆಸನಗಳ ‘ಎಸ್‌ಯುವಿ’ ಪ್ಲಸ್ ಇದಾಗಿದೆ. ಮಧ್ಯದ ಸಾಲಿನಲ್ಲಿ ಐಷಾರಾಮಿ ಮತ್ತು ಆರಾಮದಾಯಕ ಕ್ಯಾಪ್ಟನ್ ಆಸನಗಳಿವೆ. ಒಳಭಾಗದಲ್ಲಿ ಹಲವಾರು ವಿಶಿಷ್ಟ ಸೌಲಭ್ಯಗಳನ್ನು ಒಳಗೊಂಡಿದೆ. ಪೆಟ್ರೋಲ್‌ ಅವತರಣಿಕೆಯು 6 ಸ್ಪೀಡ್‌ ಮ್ಯಾನುಅಲ್‌ ಮತ್ತು 7 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್ಸ್‌ ಒಳಗೊಂಡಿದೆ. ಡೀಸೆಲ್‌ ಚಾಲಿತ ‘ಎಸ್‌ಯುವಿ’ ಕೇವಲ ಮ್ಯಾನುಅಲ್‌ ಟ್ರಾನ್ಸ್‌ಮಿಷನ್‌ ಒಳಗೊಂಡಿದೆ.

‘ನಾಲ್ವರು ವಯಸ್ಕರು ಮತ್ತು ಇಬ್ಬರು ಮಕ್ಕಳ ಕುಟುಂಬದ ಬಳಕೆಗೆ ಹೆಕ್ಟರ್‌ ಪ್ಲಸ್‌ ‘ಎಸ್‌ಯುವಿ’ ಅತ್ಯಂತ ಸೂಕ್ತವಾಗಿದೆ’ ಎಂದು ಕಂಪನಿಯ ಸಿಇಒ ರಾಜೀವ್‌ ಸಿ. ಹೇಳಿದ್ದಾರೆ.

1.5 ಲೀಟರ್‌ ಪೆಟ್ರೋಲ್‌ ಚಾಲಿತ ‘ಎಸ್‌ಯುವಿ’ನ ಬೆಲೆ ₹13.49 ಲಕ್ಷದಿಂದ ₹ 18.21 ಲಕ್ಷದವರೆಗೆ ಇದೆ. 2 ಲೀಟರ್‌ಗಳ ಡೀಸೆಲ್‌ನ ಬೆಲೆ ₹14.44 ಲಕ್ಷದಿಂದ ₹18.54 ಲಕ್ಷದವರೆಗೆ ಇದೆ.

ಕಂಪನಿಯ ಅಧಿಕೃತ ಡೀಲರ್ಸ್‌ ಬಳಿ ಇಲ್ಲವೆ ಇಂಟರ್‌ನೆಟ್‌ ತಾಣ www.mgmotor.co ದಲ್ಲಿ ಅಥವಾ ಎಂಜಿ ಮೊಬೈಲ್‌ ಅಪ್ಲಿಕೇಷನ್‌ ಬಳಸಿ ಬುಕಿಂಗ್‌ ಮಾಡಬಹುದು. ಹೆಕ್ಟರ್ ಪ್ಲಸ್‌ನ ಮರುಮಾರಾಟ ಮೌಲ್ಯ ಹೆಚ್ಚಳವಾಗುವ ಬಗ್ಗೆ ಕಂಪನಿಯು ಮತ್ತಷ್ಟು ಭರವಸೆ ನೀಡಿದೆ. ಕ್ಲಾಸಿಕ್ ಪ್ಯಾಕೇಜ್‌ನಲ್ಲಿ 3 ವರ್ಷಗಳ ಕಾಲ ಅತ್ಯುತ್ತಮ ಪ್ರಿಪೇಯ್ಡ್ ನಿರ್ವಹಣಾ ಸೌಲಭ್ಯ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT