ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜರ್ ಹಣ ಮರಳಿಸಲು ಏಥರ್ ಎನರ್ಜಿ ನಿರ್ಧಾರ: ಈ ಗ್ರಾಹಕರಿಗೆ ಸಿಗಲಿದೆ ಮರುಪಾವತಿ

Published 18 ಜುಲೈ 2023, 13:24 IST
Last Updated 18 ಜುಲೈ 2023, 13:24 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರಿ ಚಾಲಿತ ಇವಿ ಸ್ಕೂಟರ್‌ಗಳ ಚಾರ್ಜರ್‌ಗೆ ಗ್ರಾಹಕರಿಂದ ಪಡೆದ ಹಣವನ್ನು ಮರಳಿಸುವುದಾಗಿ ಏಥರ್ ಎನರ್ಜಿ ಹೇಳಿದೆ.

ಹೈಬ್ರಿಡ್ ಹಾಗೂ ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆ ಕುರಿತಂತೆ ಇರುವ ‘ಫೇಮ್‌ 2‘ ನ ಸಬ್ಸಿಡಿ ಮಾರ್ಗಸೂಚಿಯನ್ನು ಪಾಲಿಸದ ಕುರಿತು ಹಲವು ಗ್ರಾಹಕರಿಂದ ದೂರುಗಳು ಕೇಳಿಬಂದಿತ್ತು. ಹೀಗಾಗಿ ಬ್ಯಾಟರಿ ಚಾಲಿತ ವಾಹನಗಳ ತಯಾರಿಕಾ ಕಂಪನಿಗಳಿಗೆ ನೀಡಬೇಕಾದ ಸಬ್ಸಿಡಿ ಮೊತ್ತ ₹800 ಕೋಟಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿತ್ತು. ಹೀಗಾಗಿ ಚಾರ್ಜರ್‌ ಹಣವನ್ನು ಗ್ರಾಹಕರಿಗೆ ಮರಳಿಸಲು ಒಲಾ ಎಲೆಕ್ಟ್ರಿಕ್‌ ನಿರ್ಧರಿಸಿ, ಘೋಷಿಸಿತು. ಇದೀಗ ಏಥರ್‌ ಕೂಡಾ ಅದೇ ಕಾರ್ಯಕ್ಕೆ ಮುಂದಾಗಿದೆ.

ಈಗಾಗಲೇ ಹಿರೊ ಮೋಟೊಕಾರ್ಪ್‌ ಮತ್ತು ಟಿವಿಎಸ್‌ ಮೋಟಾರ್ಸ್‌ ಕೂಡಾ ಚಾರ್ಜರ್ ಹಣವನ್ನು ಗ್ರಾಹಕರಿಗೆ ಮರಳಿಸುವ ನಿರ್ಧಾರ ಕೈಗೊಂಡಿವೆ.

2023ರ ಏ. 12ಕ್ಕೂ ಪೂರ್ವದಲ್ಲಿ ಎಥರ್ ಎನರ್ಜಿಯಿಂದ ಖರೀದಿಸಲಾದ 450ಎಕ್ಸ್‌, 450 ಅಥವಾ 450 ಪ್ಲಸ್‌ ಸ್ಕೂಟರ್‌ಗಳನ್ನು ಖರೀದಿಸಿದ್ದಲ್ಲಿ, ಆ ಗ್ರಾಹಕರು ಮರುಪಾವತಿಗೆ ಅರ್ಹರು. ಅರ್ಹ ಗ್ರಾಹಕರಿಗೆ ಇಮೇಲ್ ಮೂಲಕ ಮರುಪಾವತಿ ಮಾಹಿತಿ ನೀಡಲಾಗುವುದು. ಇನ್‌ವಾಯ್ಸ್‌ನಲ್ಲಿ ನಮೂದಾಗಿರುವ ಚಾರ್ಜರ್ ಹಣವನ್ನು ಮರಳಿಸಲಾಗುವುದು ಎಂದು ಎಥರ್ ಏನರ್ಜಿ ಹೇಳಿರುವುದು ವರದಿಯಾಗಿದೆ.

ಗ್ರಾಹಕರಿಗೆ ನಿರ್ದಿಷ್ಟ ಮೊತ್ತ ಮರುಪಾವತಿ ಮಾಡುವ ಕುರಿತು ಏಥರ್‌ ಅಥವಾ ಒಲಾ ಕಂಪನಿಗಳು ಈವರೆಗೂ ಹೇಳಿಲ್ಲ. ಈ ಎರಡೂ ಕಂಪನಿಗಳು ಸುಮಾರು 1.9 ಕೋಟಿ ಗ್ರಾಹಕರಿಗೆ ಒಟ್ಟು ₹270 ಕೋಟಿ ಹಣ ಹಿಂದಿರುಗಿಸಲಿವೆ.

ಇನ್ನೂ ಕೆಲ ಗ್ರಾಹಕರಿಗೆ ಚಾರ್ಜರ್‌ ಮೊತ್ತವನ್ನು ನಮೂದು ಮಾಡಿದ ಅರ್ಜಿಗಳು ಆ್ಯಪ್‌ಗಳ ಮೂಲಕ ತಲುಪಿವೆ. ನಮೂದಾಗಿರುವ ಮೊತ್ತ ಸಮರ್ಪಕವಾಗಿದೆ ಎಂದು ದೃಢಪಡಿಸಲು ಕಂಪನಿಗಳು ಗ್ರಾಹಕರಿಗೇ ಹೇಳಿವೆ. ಈ ಕುರಿತು ಬಹಳಷ್ಟು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಹಾಗೂ ಕರೆ ಮಾಡಿ ಈ ಕುರಿತು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಶೋರೂಂನ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT