ಭಾನುವಾರ, ಆಗಸ್ಟ್ 9, 2020
21 °C

ಔಡಿ ಆರ್‌ಎಸ್7 ಸ್ಪೋರ್ಟ್‌ಬ್ಯಾಕ್ ಬುಕಿಂಗ್‌ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯು ತನ್ನ ಹೊಸ ಆರ್‌ಎಸ್7 ಸ್ಪೋರ್ಟ್‌ಬ್ಯಾಕ್‌ ಎಸ್‌ಯುವಿಗೆ ಬುಕಿಂಗ್‌ ಆರಂಭಿಸಿದೆ. ಆಗಸ್ಟ್‌ನಿಂದ ಗ್ರಾಹಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ.

ಐದು ಆಸನಗಳ ಎರಡನೇ ಪೀಳಿಗೆಯ ಈ ಎಸ್‌ಯುವಿ, ಆನ್‌ಲೈನ್‌ ಅಥವಾ ಡೀಲರ್‌ಶಿಪ್‌ಗಳಲ್ಲಿ ಆರಂಭಿಕ ₹ 10 ಲಕ್ಷ ನೀಡಿ ಕಾಯ್ದಿರಿಸಬಹುದು.

‘ಕಂಪನಿಯ ಡೀಲರ್‌ಶಿಪ್‌ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗುತ್ತಿದ್ದು, ಗ್ರಾಹಕರು ಯಾವುದೇ ಆತಂಕ ಇಲ್ಲದೆ ಭೇಟಿ ನೀಡಬಹುದು. ಕಂಪನಿಯ ಅಧಿಕೃತ ಜಾಲತಾಣದಲ್ಲಿಯೂ ಆಗ್ಮೆಂಟೆಡ್‌ ರಿಯಾಲಿಟಿಯ ಮೂಲಕ ಕಾರ್‌ನ ಅನುಭವ ಪಡೆಯಬಹುದು’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು