ಇ–ಸ್ಕೂಟರ್‌ ನವೋದ್ಯಮ‘ಅವನ್‌ ಮೋಟರ್ಸ್‌’

ಬುಧವಾರ, ಏಪ್ರಿಲ್ 24, 2019
24 °C

ಇ–ಸ್ಕೂಟರ್‌ ನವೋದ್ಯಮ‘ಅವನ್‌ ಮೋಟರ್ಸ್‌’

Published:
Updated:
Prajavani

‘ವಿದ್ಯುತ್‌ ಚಾಲಿತ ವಾಹನ ಉದ್ಯಮವು ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲಿಯೇ ಬೆಳವಣಿಗೆ ಸಾಧಿಸಬೇಕು ಎನ್ನುವುದು ಅವನ್‌ ಮೋಟರ್ಸ್‌ ಆಶಯ. ಈ ನಿಟ್ಟಿನಲ್ಲಿ ಉದ್ಯಮದ ಬೆಳವಣಿಗೆಗೆ ಎಲ್ಲರೂ ಒಟ್ಟಾಗಿ ಪ್ರಯತ್ನ ನಡೆಸಬೇಕಾಗಿದೆ’ ಎಂದು ಕಂಪನಿಯ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ ತಿಳಿಸಿದ್ದಾರೆ.

‘ಮಾರಾಟ ಮತ್ತು ಬ್ರ್ಯಾಂಡ್‌ ದೃಷ್ಟಿಯಿಂದ ಒಂದು ವರ್ಷದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳ ಸಾಲಿನಲ್ಲಿ ನಿಲ್ಲುವ ಗುರಿಯನ್ನು ಅವನ್‌ ಮೋಟರ್ಸ್‌ ಹೊಂದಿದೆ. ಎಲ್ಲಾ ವಯೋಮಾನದವರನ್ನೂ ಸೆಳೆಯುವಂತಹ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದ್ದೇವೆ. ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ಸಾಮರ್ಥ್ಯದ ಮಾನದಂಡಗಳಿಗೆ ಅನುಗುಣವಾಗಿ ಹೊಸ ವೈಶಿಷ್ಟ್ಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

‘ಭಾರತದ ರಸ್ತೆಗಳಿಗೆ ಹೊಂದುವಂತಹ ಸಾಮರ್ಥ್ಯದ ಇ–ಸ್ಕೂಟರ್‌ ನೀಡುವುದು ನಮ್ಮ ಆದ್ಯತೆ. ಇದು ಪ್ರತಿಸ್ಪರ್ಧಿಗಳಿಂದ ನಮ್ಮನ್ನು ಪ್ರತ್ಯೇಕವಾಗಿರಿಸಿದೆ. ಪರಿಸರ ಸ್ನೇಹಿ ಗುರಿಯ ಆಧುನಿಕ ತಂತ್ರಜ್ಞಾನ, ವಿನ್ಯಾಸ, ಕೈಗೆಟುಕುವ ಬೆಲೆ, ಮಾರಾಟದ ನಂತರದ ಸೇವೆಗಳು, ಬಿಡಿ ಭಾಗಗಳ ಲಭ್ಯತೆ ಮತ್ತು ಉತ್ತಮ ಗ್ರಾಹಕ ಸಂಪರ್ಕ ವ್ಯವಸ್ಥೆಗಳಿಂದಾಗಿ ವಿದ್ಯುತ್‌ ಚಾಲಿತ ವಾಹನ ಉದ್ಯಮದಲ್ಲಿ ಅವನ್‌ ಮೋಟರ್ಸ್‌ ತನ್ನದೇ ಆದ ಸ್ಥಾನ ಕಾಯ್ದುಕೊಂಡಿದೆ.

‘ಕ್ಸೀರೊ ಬ್ರ್ಯಾಂಡ್‌ನಡಿ ನಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದ್ದೇವೆ. ಮಾಲಿನ್ಯರಹಿತ, ಶಬ್ದ ರಹಿತ, ನಿರ್ವಹಣಾ ವೆಚ್ಚವಿಲ್ಲದ ಅಂತಿಮವಾಗಿ ಗ್ಯಾಸೋಲಿನ್‌ ಸ್ಕೂಟರ್‌ಗಳಿಗೆ ಹೋಲಿಸಿದರೆ ಗ್ರಾಹಕರಿಗೆ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳುವ ತತ್ವಕ್ಕೆ ಬದ್ಧರಾಗಿರುವುದರಿಂದ ಬ್ರ್ಯಾಂಡ್‌ಗೆ ‘ಕ್ಸೀರೊ’ ಹೆಸರಿಡಲಾಗಿದೆ. ಕ್ಸೀರೊ, ಕ್ಸೀರೊ ಪ್ಲಸ್‌, ಟ್ರೆಂಡ್‌ ಇ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸುತ್ತಾರೆ.

‘ದೇಶದ ವಿದ್ಯುತ್‌ ಚಾಲಿತ ವಾಹನ ಉದ್ಯಮವು ಸ್ಥಳೀಯ ತಯಾರಿಕೆ ಮತ್ತು ಮಾರಾಟ ಉತ್ತೇಜನ ನೀಡುವಂತಹ ಸ್ಪಷ್ಟವಾದ ನೀತಿಯ ಕೊರತೆ ಎದುರಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ವಿದ್ಯುತ್‌ ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಉತ್ತೇಜನ ನೀಡಲು ‘ಫೇಮ್‌–2’ ಯೋಜನೆ ಘೋಷಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಬಲಗೊಳ್ಳಲಿದೆ. ಚಾರ್ಜಿಂಗ್‌ ಕೇಂದ್ರಗಳು, ಬ್ಯಾಟರಿ ಸ್ವ್ಯಾಪಿಂಗ್‌ ಆಯ್ಕೆಗಳು ಹಾಗೂ ತರಬೇತಿ ಪಡೆದ ಕಂಪನಿಯ ಮೆಕ್ಯಾನಿಕ್‌ಗಳು ಗ್ರಾಹಕರಲ್ಲಿ ಇಂತಹ ವಾಹನಗಳನ್ನು ಬಳಸುವ ವಿಶ್ವಾಸ ಹೆಚ್ಚಿಸಲಿವೆ. ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಿಂದ ತಯಾರಿಕೆ ಮತ್ತು ಮಾರಾಟ ವೆಚ್ಚದಲ್ಲಿ ಕಡಿಮೆಯಾಗಲಿದೆ’ ಎಂದೂ ಪಂಕಜ್‌ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !