ಬುಧವಾರ, ಫೆಬ್ರವರಿ 8, 2023
18 °C

ಬಜಾಜ್‌ ಚೇತಕ್‌ ಇವಿ: ನಾಗ್ಪುರದಲ್ಲಿ ಬುಕಿಂಗ್ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ನಾಗ್ಪುರದಲ್ಲಿ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಬಜಾಜ್‌ ಚೇತಕ್‌ ಬುಕಿಂಗ್‌ ಅನ್ನು ಶುಕ್ರವಾರದಿಂದಲೇ ಆರಂಭ ಮಾಡಲಾಗಿದೆ ಎಂದು ಬಜಾಜ್ ಆಟೊ ಕಂಪನಿ ಶನಿವಾರ ತಿಳಿಸಿದೆ.

ತಡೆರಹಿತ ಮತ್ತು ಸುಲಭವಾದ ಬುಕಿಂಗ್ ಅನುಭವ ನೀಡುವ ಉದ್ದೇಶದಿಂದ ₹ 2 ಸಾವಿರಕ್ಕೆ www.chetak.com ನಲ್ಲಿ ಆನ್‌ಲೈನ್‌ ಬುಕಿಂಗ್‌ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ಪುಣೆ ಮತ್ತು ಬೆಂಗಳೂರಿನಲ್ಲಿ ಇ–ಸ್ಕೂಟರ್ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. 48 ಗಂಟೆಗಳ ಒಳಗೆ ಎಲ್ಲವೂ ಬುಕಿಂಗ್‌ ಆಗಿವೆ. ನಾಗ್ಪುರದಲ್ಲಿಯೂ ಇದೇ ತರಹದ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಬೆಂಗಳೂರು ಮತ್ತು ಪುಣೆಯಲ್ಲಿ ನಮಗೆ ದೊರೆತಿರುವ ಉತ್ತಮ ಪ್ರತಿಕ್ರಿಯೆಯ ನಂತರ ನಾಗ್ಪುರದಲ್ಲಿ ಚೇತಕ್‌ ಬುಕಿಂಗ್‌ ಆರಂಭಿಸಲು ಸಂತೋಷ ಆಗಿದೆ. ಇತರೆ ನಗರಗಳಲ್ಲಿಯೂ ಶೀಘ್ರವೇ ಬುಕಿಂಗ್‌ ಆರಂಭಿಸಲಾಗುವುದು ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್‌ ಶರ್ಮಾ ತಿಳಿಸಿದ್ದಾರೆ.

‘ಚೇತಕ್ ಇವಿ’ ಸ್ಕೂಟರ್‌ ಪ್ರೀಮಿಯಂ ಮತ್ತು ಅರ್ಬೇನ್ ಮಾದರಿಗಳಲ್ಲಿ ಲಭ್ಯವಿದೆ. ನಾಗ್ಪುರದಲ್ಲಿ ಇದರ ಎಕ್ಸ್‌ ಷೊರೂಂ ಬೆಲೆ ₹ 1.42 ಲಕ್ಷದಿಂದ ಆರಂಭವಾಗಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು