ಬುಧವಾರ, ಆಗಸ್ಟ್ 10, 2022
21 °C

ವಿದ್ಯುತ್‌ಚಾಲಿತ ವಾಹನಗಳಿಗಾಗಿ ಇಬೈಕ್‌ಗೋದಿಂದ ಫ್ರಾಂಚೈಸಿ ಪಾಲುದಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ebike

 

ನವದೆಹಲಿ: ಪರಿಸರ ಸ್ನೇಹಿ ವಿದ್ಯುಚ್ಚಾಲಿತ ವಾಹನಗಳ ಈ ಕಾಲದಲ್ಲಿ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಹಾಗೂ ಯುವ ಉದ್ಯಮಿಗಳಿಗೆ ಅವಕಾಶ ಕಲ್ಪಿಸಲು ಇಬೈಕ್‌ಗೋ, ಈಗ ಫ್ರಾಂಚೈಸೀ ಪಾಲುದಾರ ಕಾರ್ಯಕ್ರಮವನ್ನು ಆರಂಭಿಸಿದೆ.

ದೆಹಲಿ, ಬೆಂಗಳೂರು ಮತ್ತು ಮುಂಬಯಿಗಳಲ್ಲಿ ಫ್ರಾಂಚೈಸಿ ಪಾಲುದಾರಿಕೆಯ ಮೂಲಕ, ಇಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಕೈಜೋಸುವ ಮೂಲಕ ಯುವ ಆಕಾಂಕ್ಷಿಗಳು ಈ ಉದ್ಯಮದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ಸಂಸ್ಥೆಯು ತಿಳಿಸಿದೆ.

ಫ್ರಾಂಚೈಸಿ ಹೆಚ್ಚಿಸಿದಷ್ಟು ಇ-ವಾಹನಗಳ ಲಭ್ಯತೆಯೂ ಹೆಚ್ಚಾಗುತ್ತದೆ. ಪರಿಸರ ಮಾಲಿನ್ಯ ಮಾಡದ ಈ ವಾಹನಗಳ ಬಳಕೆಯಿಂದ ಪರಿಸರ ರಕ್ಷಣೆಗೆ ನೆರವಾಗುತ್ತದೆಯಲ್ಲದೆ, ಫ್ರಾಂಚೈಸಿ ಉದ್ಯಮದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತದ ಕರೆಗೂ ಓಗೊಟ್ಟಂತಾಗುತ್ತದೆ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದ ಸಂಸ್ಥೆ ಇಬೈಕ್‌ಗೋ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಇಬೈಕ್‌ಗೋ ಸಂಸ್ಥಾಪಕ ಮತ್ತು ಸಿಇಒ ಟಿ.ಇರ್ಫಾನ್ ಅವರು, ಕೋವಿಡ್‌ನಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು, ಉದ್ಯಮ ನಷ್ಟ ಅನುಭವಿಸಿರುವ ಈ ಸಂಕಷ್ಟದ ಕಾಲದಲ್ಲಿ, ಫ್ರಾಂಚೈಸಿ ಕಾರ್ಯಕ್ರಮವು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಸ್ವಯಂ ಉದ್ಯೋಗಕ್ಕೆ ಇದೊಂದು ವೇದಿಕೆ ಎಂದಿದ್ದಾರೆ.

ಇಬೈಕ್‌ಗೋ ಫ್ರಾಂಚೈಸಿ ಪಾಲುದಾರಿಕೆಗೆ 20 ಲಕ್ಷದಿಂದ 1 ಕೋಟಿವರೆಗಿನ ಹೂಡಿಕೆಯ ಅಗತ್ಯವಿದ್ದು, ಶೇ.30ರಷ್ಟು ಲಾಭ ದೊರೆಯುವ ಅವಕಾಶವಿದೆ ಎಂದಿರುವ ಸಂಸ್ಥೆಯು, ಪ್ರಸ್ತುತ ಭಾರತದಲ್ಲಿ ಶೇ.0.5ರಷ್ಟು ಮಾತ್ರವೇ ಎಲೆಕ್ಟ್ರಿಕ್ ವಾಹನಗಳ ಪಾಲು ಇದ್ದರೆ ಚೀನಾದಲ್ಲಿ ಇದರ ಪ್ರಮಾಣ ಶೇ.30ರಷ್ಟಿದೆ. 2030ರವೇಳೆಗೆ ಭಾರತದಲ್ಲೂ 2.8 ಕೋಟಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಗುರಿ ಸಾಧನೆಗೆ ಫ್ರಾಂಚೈಸಿ ಮಾದರಿಯು ಕೊಡುಗೆ ನೀಡುತ್ತದೆ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು