ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಹೀರೊ ಎಲೆಕ್ಟ್ರಿಕ್‌: ₹ 6 ಸಾವಿರದವರೆಗೆ ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೀರೊ ಎಲೆಕ್ಟ್ರಿಕ್‌ ಕಂಪನಿಯು ಸ್ವಾತಂತ್ರ್ಯ ದಿನದ ಪ್ರಯುಕ್ತ ‘ನಿಮ್ಮ ಸ್ವಾತಂತ್ರ್ಯವನ್ನು ಆಚರಿಸಿ’ ಎನ್ನುವ ಅಭಿಯಾನಕ್ಕೆ ಚಾಲನೆ ನೀಡಿದ್ದು, ತನ್ನ ಗ್ರಾಹಕರಿಗೆ ₹ 6 ಸಾವಿರದವರೆಗೂ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ.

ಈ ಅಭಿಯಾನವು ಈ ತಿಂಗಳ ಅಂತ್ಯದವರೆಗೂ ಲಭ್ಯವಿರಲಿದೆ.

ಹೀರೊ ಎಲೆಕ್ಟ್ರಿಕ್‌ ಹೈ ಸ್ಪೀಡ್‌ ಲೀಥಿಯಂ ಅಯಾನ್‌ ಬೈಕ್‌ ಖರೀದಿಸಿದರೆ ₹ 3 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. ಇದರ ಜತೆಗೆ ಹೊಸ ಗ್ರಾಹಕರಿಗೆ ₹ 2 ಸಾವಿರದವರೆಗೆ ವಿನಾಯಿತಿಯೂ ಇರಲಿದೆ. ಮೊದಲ ಬಾರಿಗೆ ಗ್ರಾಹಕರನ್ನು ಪರಿಚಯಿಸುವ ಹಾಲಿ ಗ್ರಾಹಕರಿಗೆ ₹ 1 ಸಾವಿರ ಮೌಲ್ಯದ ಅಮೆಜಾನ್‌ ವೋಚರ್‌ ಸಿಗಲಿದೆ.

‘ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡುವ ಹಣಕ್ಕೆ ಉತ್ತಮ ಮೌಲ್ಯ ಸಿಗಬೇಕು ಎಂದು ಬಯಸುವ ಗ್ರಾಹಕರಿಗೆ ಈ ಅಭಿಯಾನ ಪ್ರಯೋಜನಕಾರಿಯಾಗಿದೆ’ ಎಂದು ಕಂಪನಿಯ ಸಿಇಒ ಸೋಹಿಂದರ್‌ ಗಿಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು