ಶನಿವಾರ, ಜನವರಿ 16, 2021
28 °C

ಹೋಂಡಾ: ಕಾಯಂ ನೌಕರರಿಗಾಗಿ ವಿಆರ್‌ಎಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಹೋಂಡಾದ ಸ್ಕೂಟರ್‌ ಬಿಡುಗಡೆ ಸಂದರ್ಭ–ಸಾಂದರ್ಭಿಕ ಚಿತ್ರ

ನವದೆಹಲಿ: ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ತನ್ನ ಕಾಯಂ ನೌಕರರಿಗಾಗಿ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಜಾರಿಗೊಳಿಸಿದೆ.

ಜನವರಿ 5ರಿಂದ 23ರವರೆಗೆ ಇದು ಲಭ್ಯವಿರಲಿದೆ. 10 ವರ್ಷಗಳ ಸೇವಾವಧಿ ಪೂರೈಸಿರುವ ಅಥವಾ 40 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕಾಯಂ ನೌಕರರು ಇದಕ್ಕೆ ಅರ್ಹರಾಗಲಿದ್ದಾರೆ. ಯೋಜನೆಯ ಅಡಿಯಲ್ಲಿ ನೌಕರರು ಗರಿಷ್ಠ ₹ 72 ಲಕ್ಷ ಪಡೆಯಬಹುದು. ವಿಆರ್‌ಎಸ್‌ ಆಯ್ಕೆ ಮಾಡಿಕೊಳ್ಳುವ ಮೊದಲ 400 ನೌಕರರಿಗೆ ಹೆಚ್ಚುವರಿಯಾಗಿ ₹ 5 ಲಕ್ಷ ಸಿಗಲಿದೆ.

ದೇಶದ ಆಟೊಮೊಬೈಲ್‌ ಉದ್ಯಮವು ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕ ಕುಸಿತದ ಕಾರಣದಿಂದಾಗಿ ವಾಹನಗಳ ಮಾರಾಟ ಕಡಿಮೆ ಆಗಿದೆ ಎಂದು ಕಂಪನಿಯು ತನ್ನ ಮಾನೇಸರ ಘಟಕದ ನೌಕರರಿಗೆ ಕಳುಹಿಸಿರುವ ಸಂದೇಶದಲ್ಲಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು