ಶುಕ್ರವಾರ, ಆಗಸ್ಟ್ 14, 2020
26 °C

5ನೇ ಪೀಳಿಗೆಯ ಹೋಂಡಾ ಸಿಟಿ ಕಾರು ತಯಾರಿಕೆ ಆರಂಭ: ಜುಲೈನಲ್ಲಿ ರಸ್ತೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 5ನೇ ಪೀಳಿಗೆಯ ಹೋಂಡಾ ಸಿಟಿ ಮಾದರಿಯ ಕಾರ್‌ ತಯಾರಿಕೆ ಆರಂಭವಾಗಿದ್ದು, ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ ಹೋಂಡಾ ಕಾರ್ಸ್‌ ಇಂಡಿಯಾ ತಿಳಿಸಿದೆ.

ಬಿಎಸ್‌6 ಮಾನದಂಡಕ್ಕೆ ಪೂರಕವಾಗಿ, 1.5 ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಸಿಗಲಿವೆ.

ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾ ಘಟಕದಲ್ಲಿ ಈ ಕಾರ್‌ ತಯಾರಾಗುತ್ತಿವೆ. ಕೋವಿಡ್‌–19 ಅನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಳಿಸಿದೆ.

‘ಮಾರುಕಟ್ಟೆ ಸವಾಲುಗಳು ಹಲವಿದ್ದರೂ ಬಿಡುಗಡೆಗೂ ಮುನ್ನವೇ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಕಂಪನಿಯ ಉಪಾಧ್ಯಕ್ಷ ರಾಜೇಶ್‌ ಗೋಯಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು