ಬುಧವಾರ, ಸೆಪ್ಟೆಂಬರ್ 29, 2021
20 °C

2021–22ರಲ್ಲಿ ಆಟೊಮೊಬೈಲ್‌ ಉದ್ದಿಮೆ ಬೆಳವಣಿಗೆ ಹೆಚ್ಚಳ: ನೊಮುರ

ಪಿಟಿಐ Updated:

ಅಕ್ಷರ ಗಾತ್ರ : | |

Automobile

ನವದೆಹಲಿ: 2021–22ನೇ ಆರ್ಥಿಕ ವರ್ಷದಲ್ಲಿ ಭಾರತದ ಆಟೊಮೊಬೈಲ್‌ ಉದ್ದಿಮೆಯು ಹೆಚ್ಚಿನ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ನೊಮುರ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ವಿದ್ಯುತ್ ಚಾಲಿತ ವಾಹನಗಳು, ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು, ಕೂಡ ಹೆಚ್ಚಿನ ಮಾರಾಟವನ್ನು ಕಾಣಲಿವೆ ಎಂದು ಅದು ಹೇಳಿದೆ.

ವೈಯಕ್ತಿಕ ಉಪಯೋಗಕ್ಕೆ ಬಳಸುವ ವಾಹನಗಳ ವಿಭಾಗದಲ್ಲಿ 2018–19ರಲ್ಲಿ ಕಂಡಿದ್ದ ಮಾರಾಟ ಪ್ರಮಾಣವನ್ನು ಉದ್ದಿಮೆ ಮತ್ತೆ ಕಾಣುವುದು 2022–23ರಲ್ಲಿ ಎಂದು ಅದು ಅಂದಾಜು ಮಾಡಿದೆ. 2018–19ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇಕಡ 2.7ರಷ್ಟು ಹೆಚ್ಚಳ ಆಗಿತ್ತು ಎಂದು ಭಾರತೀಯ ಆಟೊಮೊಬೈಲ್‌ ತಯಾರಕರ ಸಂಘ (ಸಿಯಾಮ್) ಮಾಹಿತಿ ನೀಡಿದೆ.

‘ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಕೋಶಗಳ ತಯಾರಿಕೆ ಭಾರತದಲ್ಲಿ ಆರಂಭವಾಗುತ್ತಿದೆ. 2021–22ರಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟದ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಕಾಣಸಿಗಲಿದೆ’ ಎಂದು ಎನ್‌ಆರ್‌ಐ ಕನ್ಸಲ್ಟಿಂಗ್ ಆ್ಯಂಡ್‌ ಸಲ್ಯೂಷನ್ಸ್‌ ಇಂಡಿಯಾ ಕಂಪನಿಯ ಆಶಿಮ್‌ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು