ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಸುಧಾರಿತ ರೇಂಜ್‌ ರೋವರ್ ಸ್ಪೋರ್ಟ್ ಎಸ್‌ವಿಆರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಾಗ್ವಾರ್‌ ಲ್ಯಾಂಡ್‌ ರೋವರ್ (ಜೆಎಲ್ಆರ್‌) ಇಂಡಿಯಾ ಕಂಪನಿಯು ಸುಧಾರಿತ ರೇಂಜ್‌ ರೋವರ್‌ ಸ್ಪೋರ್ಟ್‌ ಎಸ್‌ವಿಆರ್‌ ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 2.19 ಕೋಟಿ ಇದೆ.

ಈ ಎಸ್‌ಯುವಿ 5 ಲೀಟರ್‌ ಸೂಪರ್‌ಚಾರ್ಜ್ಡ್‌ ವಿ8 ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಕೇವಲ 4.5 ಸೆಕೆಂಡ್‌ಗಳಲ್ಲಿ ಈ ಎಸ್‌ಯುವಿ ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಬಲ್ಲದು ಎಂದು ಕಂಪನಿ ಹೇಳಿದೆ.

ಬ್ರಿಟಿಷ್ ವಿನ್ಯಾಸ ಮತ್ತು ಎಂಜಿನಿಯರಿಂಗ್‌ ತಂತ್ರಜ್ಞಾನದಿಂದ ಸಿದ್ಧಪಡಿಸಿರುವ ಇದನ್ನು ಎಸ್‌ಯುವಿ ಉತ್ಸಾಹಿಗಳು ಇಷ್ಟಪಡುವ ವಿಶ್ವಾಸವಿದೆ ಎಂದು ಜೆಎಲ್‌ಆರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು