ಭಾನುವಾರ, ಸೆಪ್ಟೆಂಬರ್ 22, 2019
25 °C

ಮಾರುತಿ ತಯಾರಿಕೆ ಕಡಿತ7ನೇ ತಿಂಗಳೂ ಮುಂದುವರಿಕೆ

Published:
Updated:

ನವದೆಹಲಿ (ಪಿಟಿಐ): ವಾಹನ ಮಾರಾಟ ಕುಸಿತದಿಂದ ಕಂಗೆಟ್ಟಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸತತ ಏಳನೇ ತಿಂಗಳಿನಲ್ಲಿಯೂ ತನ್ನ ತಯಾರಿಕೆ ಕಡಿತಗೊಳಿಸಿದೆ.

ಆಗಸ್ಟ್‌ನಲ್ಲಿ ಶೇ 33.99ರಷ್ಟು ತಯಾರಿಕೆಯನ್ನು ಕಡಿತಗೊಳಿಸಿದ್ದು, 1,11,370 ವಾಹನಗಳನ್ನು ತಯಾರಿಸಲಾಗಿದೆ. 2018ರ ಆಗಸ್ಟ್‌ನಲ್ಲಿ ತಯಾರಾದ ವಾಹನಗಳ ಸಂಖ್ಯೆ 1,68,725 ಇತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಜುಲೈನಲ್ಲಿ ತಯಾರಿಕೆಯನ್ನು ಶೇ 25.15ರಷ್ಟು ಕಡಿಮೆ ಮಾಡಲಾಗಿತ್ತು. ಕಂಪನಿಯ ಆಗಸ್ಟ್‌ ತಿಂಗಳ ಒಟ್ಟಾರೆ ಮಾರಾಟದ ಪ್ರಗತಿ ಶೇ 33ರಷ್ಟು ಇಳಿಕೆಯಾಗಿದೆ.

Post Comments (+)