ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾಂಡ್‌ ವಿಟಾರಾ ಸೀಟ್‌ ಬೆಲ್ಟ್‌ ಪಟ್ಟಿಲ್ಲಿ ದೋಷ

Last Updated 23 ಜನವರಿ 2023, 15:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗ್ರ್ಯಾಂಡ್ ವಿಟಾರಾ ಮಾದರಿಯ 11,177 ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡು, ಅವುಗಳ ಹಿಂದಿನ ಆಸನದ ಸೀಟ್‌ ಬೆಲ್ಟ್‌ ಅಳವಡಿಸುವ ಪಟ್ಟಿಯಲ್ಲಿ ಲೋಪ ಇದೆಯೇ ಎಂಬುದನ್ನು ಪರಿಶೀಲಿಸಲಿದೆ.

2022ರ ಆಗಸ್ಟ್‌ 8ರಿಂದ ನವೆಂಬರ್‌ 15ರ ನಡುವೆ ತಯಾರಾದ ಕಾರುಗಳನ್ನು ಕಂಪನಿ ಹಿಂದಕ್ಕೆ ಕರೆಸಿಕೊಳ್ಳಲಿದೆ. ‘ಹಿಂದಿನ ಆಸನದ ಸೀಟ್ ಬೆಲ್ಟ್ ಅಳವಡಿಸುವ ಪಟ್ಟಿಯಲ್ಲಿ ಲೋಪ ಇರಬಹುದು ಎಂಬ ಅನುಮಾನ ಇದೆ. ಈ ಲೋಪವು ದೀರ್ಘಾವಧಿಯಲ್ಲಿ ಸೀಟ್‌ ಬೆಲ್ಟ್‌ನ ಕಾರ್ಯದ ಮೇಲೆ ಪರಿಣಾಮ ಬೀರಬಹುದು’ ಎಂದು ಕಂಪನಿಯು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಹೇಳಿದೆ.

ಈ ಕುರಿತು ವಾಹನದ ಮಾಲೀಕರಿಗೆ ಕಂಪನಿಯ ಡೀಲರ್‌ಗಳಿಂದ ಪ್ರತ್ಯೇಕವಾಗಿ ಸಂದೇಶ ಬರಲಿದೆ. ಕಂಪನಿಯು ಕೆಲವು ಮಾದರಿಯ ಕಾರುಗಳನ್ನು ಹಿಂದಕ್ಕೆ ಕರೆಸಿಕೊಂಡು, ಅವುಗಳ ಏರ್‌ಬ್ಯಾಗ್‌ ನಿಯಂತ್ರಣ ವ್ಯವಸ್ಥೆಯಲ್ಲಿ ಇರಬಹುದಾದ ದೋಷವನ್ನು ಪರಿಶೀಲಿಸಿಕೊಡುವುದಾಗಿ ಹಿಂದಿನ ವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT