ಶೇಕಡ 1.9ರವರೆಗೆ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ

ನವದೆಹಲಿ: ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ ಹೊರತುಪಡಿಸಿ ಇತರ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಗರಿಷ್ಠ ಶೇಕಡ 1.9ರವರೆಗೆ ಹೆಚ್ಚಿಸಿರುವುದಾಗಿ ಸೋಮವಾರ ಹೇಳಿದೆ. ಬೆಲೆ ಹೆಚ್ಚಳವು ತಕ್ಷಣದಿಂದ ಜಾರಿಗೆ ಬಂದಿದೆ.
ವಾಹನ ತಯಾರಿಕಾ ವೆಚ್ಚ ಹೆಚ್ಚಳ ಆಗಿರುವುದರ ಪರಿಣಾಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಮಾರುತಿ ಸುಜುಕಿಯು ಈ ವರ್ಷದಲ್ಲಿ ಮೂರನೆಯ ಬಾರಿ ಬೆಲೆ ಹೆಚ್ಚಳ ಮಾಡಿದೆ.
ಜನವರಿ ಮತ್ತು ಏಪ್ರಿಲ್‌ನಲ್ಲಿ ಕಂಪನಿಯು ಕಾರು ಬೆಲೆ ಹೆಚ್ಚಿಸಿತ್ತು. ಮೂರನೆಯ ಬಾರಿಗೆ ಆಗಿರುವ ಹೆಚ್ಚಳದಿಂದಾಗಿ ಒಟ್ಟು ಶೇ 3.5ರಷ್ಟು ಬೆಲೆ ಏರಿಕೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.