ಭಾನುವಾರ, ಅಕ್ಟೋಬರ್ 24, 2021
23 °C

₹ 2,500 ಕೋಟಿ ಹೂಡಿಕೆ ಮಾಡಲಿರುವ ಎಂಜಿ ಮೋಟರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಗುಜರಾತ್‌ನಲ್ಲಿ ಇರುವ ತನ್ನ ಹಲೋಲ್‌ ಘಟಕದ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು 2022ರ ಅಂತ್ಯದೊಳಗೆ ₹ 2,500 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ಭಾರತದ ನಿರ್ದೇಶಕ ರಾಜೀವ್ ಛಾಬಾ ತಿಳಿಸಿದ್ದಾರೆ.

‘ಈಗಾಗಲೇ ₹ 3 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ಮುಂದಿನ ವರ್ಷದ ಅಂತ್ಯದೊಳಗೆ ₹2,500 ಕೋಟಿ ಹೂಡಿಕೆ ಮಾಡಲಿದ್ದೇವೆ. ಒಟ್ಟಾರೆ ಹೂಡಿಕೆಯು ₹ 5,500 ಕೋಟಿಗಳಷ್ಟಾಗಲಿದೆ’ ಎಂದು ಅವರು ಹೇಳಿದ್ದಾರೆ.

ದೀಪಾವಳಿಗೆ ಮಾರುಕಟ್ಟೆಗೆ ಬರಲಿರುವ ಮಧ್ಯಮ ಗಾತ್ರದ ಎಸ್‌ಯುವಿ ಆಸ್ಟರ್‌ ಸೇರಿದಂತೆ ತನ್ನ ಹೊಸ ಮಾದರಿಗಳ ಬೇಡಿಕೆಗಳನ್ನು ಈಡೇರಿಸಲು ಈ ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಚ್ಚಾ ಸರಕುಗಳ ಪೂರೈಕೆಯ ಆಧಾರದ ಮೇಲೆ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರತಿ ತಿಂಗಳಿಗೆ 7 ಸಾವಿರ ವಾಹನ ತಯಾರಿಸುವ ನಿರೀಕ್ಷೆ ಇದೆ. ಸದ್ಯ ತಿಂಗಳಿಗೆ 4 ಸಾವಿರದಿಂದ 4,500 ವಾಹನಗಳನ್ನಷ್ಟೇ ತಯಾರಿಸಲಾಗುತ್ತಿದೆ ಎಂದಿದ್ದಾರೆ.

ಸೆಮಿಕಂಡಕ್ಟರ್‌ ಕೊರತೆಯು ಉದ್ಯಮದ ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದು, ಈ ಸಮಸ್ಯೆಯು ಕನಿಷ್ಠ ಇನ್ನೂ ಆರು ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿಯೂ ಈ ವರ್ಷದಲ್ಲಿ ವಾಹನ ಮಾರಾಟವು ಶೇಕಡ 100ರವರೆಗೆ ಬೆಳವಣಿಗೆ ಕಾಣುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು