ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಂದ ₹ 1,490 ಕೋಟಿ ಬಂಡವಾಳ ಸಂಗ್ರಹ: ಓಲಾ ಎಲೆಕ್ಟ್ರಿಕ್

Last Updated 24 ಜನವರಿ 2022, 14:24 IST
ಅಕ್ಷರ ಗಾತ್ರ

ನವದೆಹಲಿ: ಹೂಡಿಕೆದಾರರಿಂದ ₹ 1,490 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಓಲಾ ಎಲೆಕ್ಟ್ರಿಕ್‌ ಕಂಪನಿಯು ಸೋಮವಾರ ತಿಳಿಸಿದೆ. ಇದರಿಂದಾಗಿ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 37 ಸಾವಿರ ಕೋಟಿಗೆ ತಲುಪಿದೆ.ಬೈಕ್‌ ಮತ್ತು ಕಾರುಗಳನ್ನು ಕೂಡ ಮಾರುಕಟ್ಟೆಗೆ ಪರಿಚಯಿಸುವ ಆಲೋಚನೆ ಕಂಪನಿಗೆ ಇದೆ.

ಟೆಕ್ನೆ ಪ್ರೈವೇಟ್‌ ವೆಂಚರ್ಸ್‌, ಅಲ್ಪೈನ್‌ ಆಪರ್ಚುನಿಟಿ ಫಂಡ್‌, ಎಡೆಲ್ವಿಸ್‌ ಮತ್ತು ಇತರೆ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಿರುವುದಾಗಿ ಕಂಪನಿ ಹೇಳಿದೆ.

ಫಾಲ್ಕನ್‌ ಎಡ್ಜ್‌, ಸಾಫ್ಟ್‌ಬ್ಯಾಂಕ್‌ ಮತ್ತು ಇತರೆ ಹೂಡಿಕೆದಾರರಿಂದ ಇಷ್ಟೇ ಪ್ರಮಾಣದ ಬಂಡವಾಳ ಸಂಗ್ರಹ ಮಾಡಿರುವುದಾಗಿಕಂಪನಿಯು 2021ರ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು. ಆಗ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 22,272 ಕೋಟಿಗಳಷ್ಟಾಗಿತ್ತು.

‘ಓಲಾ ಎಸ್‌1 ಮೂಲಕ ಸ್ಕೂಟರ್‌ ಉದ್ಯಮವನ್ನು ಸಂಪೂರ್ಣವಾಗಿ ಬದಲಾಯಿಸಿದ್ದೇವೆ. ಬೈಕ್‌ ಮತ್ತು ಕಾರು ವಿಭಾಗದಲ್ಲಿಯೂ ನಮ್ಮ ಉತ್ಪನ್ನಗಳನ್ನು ಪರಿಚಯಿಸುವ ಆಲೋಚನೆಯಲ್ಲಿ ಇದ್ದೇವೆ. ಹೂಡಿಕೆದಾರರು ನೀಡಿರುವ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ಭಾರತದಿಂದ ಇ.ವಿ. (ವಿದ್ಯುತ್ ಚಾಲಿತ ವಾಹನ) ಕ್ರಾಂತಿಯನ್ನು ಆರಂಭಿಸಲು ಇನ್ನೂ ಹೆಚ್ಚಿನ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಓಲಾ ಸ್ಥಾಪಕ ಭವಿಷ್‌ ಅಗರ್‌ವಾಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT