ನವದೆಹಲಿ: ಆಗಸ್ಟ್ ತಿಂಗಳ ಅಂತ್ಯದೊಳಗೆ ದೇಶದ 100 ನಗರಗಳಿಗೆ ವಹಿವಾಟು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಸ್ಕೋಡಾ ಕಂಪನಿ ಮಂಗಳವಾರ ಹೇಳಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕುಶಾಕ್ ಮೂಲಕ ಹೆಚ್ಚಿನ ಗ್ರಾಹಕರನ್ನು ಹೊಂದಲು ಕಂಪನಿ ಬಯಸುತ್ತಿದೆ. ಕಂಪನಿಯ ಪ್ರಕಾರ, ಕುಶಾಕ್ ಬಿಡುಗಡೆಯು ಮಾರಾಟ ಜಾಲವನ್ನು ವಿಸ್ತರಿಸುವ ಕಾರ್ಯತಂತ್ರದ ಒಂದು ಪ್ರಮುಖ ಭಾಗವಾಗಿದೆ.

ಆಗಸ್ಟ್ ಕೊನೆಯೊಳಗೆ ನೂರಕ್ಕೂ ಹೆಚ್ಚಿನ ನಗರಗಳಲ್ಲಿ ಸ್ಕೋಡಾ ಬ್ರ್ಯಾಂಡ್ ಕಾಣಿಸಿಕೊಳ್ಳಲಿದ್ದು, ಭಾರತದ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಅತಿಹೆಚ್ಚಿನ ವ್ಯಾಪ್ತಿಯನ್ನು ತಲುಪಿದಂತಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ಮೂಲಕ ಕಂಪನಿಯು ಮಾರಾಟ ಮತ್ತು ಮಾರಾಟದ ನಂತರದ ಸೇವೆಗಳನ್ನೂ ಒಳಗೊಂಡು, ಭಾರತದಲ್ಲಿ 170ಕ್ಕೂ ಅಧಿಕ ಗ್ರಾಹಕ ಸಂಪರ್ಕ ಕೇಂದ್ರಗಳನ್ನು ಹೊಂದಲಿದೆ. ಮುಂದಿನ ವರ್ಷದೊಳಗೆ 225 ಮಳಿಗೆಗಳನ್ನೂ ಹೊಂದುವ ಗುರಿ ಇಟ್ಟುಕೊಂಡಿದೆ. ಸದ್ಯ ದೇಶದ 85 ನಗರಗಳಲ್ಲಿ ಕಂಪನಿ ವಹಿವಾಟು ನಡೆಸುತ್ತಿದೆ.

‘ಕುಶಾಕ್ ಬಿಡುಗಡೆಯು ಭಾರತದಲ್ಲಿ ಕಂಪನಿಗೆ ಹೊಸ ಯುಗದ ಆರಂಭವಾಗಿದೆ. ಈ ವಿಶ್ವ ದರ್ಜೆಯ ಎಸ್‌ಯುವಿಯ ಮೂಲಕ ಸ್ಕೋಡಾ ಬ್ರ್ಯಾಂಡ್ ಅನ್ನು ದೇಶಾದ್ಯಂತ ಹೊಸ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಆಲೋಚನೆ ಹೊಂದಿದ್ದೇವೆ. ಮುಂಬರುವ ತಿಂಗಳಿಂದ ನಾವು 100ಕ್ಕೂ ಹೆಚ್ಚು ನಗರಗಳಲ್ಲಿ ಇರಲಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ’ ಎಂದು ಸ್ಕೋಡಾ ಆಟೊ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಜಾಕ್ ಹೊಲಿಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.