ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಡ್‌ನ ಸಾನಂದ ಘಟಕ ಸ್ವಾಧೀನ ಮಾಡಿಕೊಳ್ಳಲಿರುವ ಟಾಟಾ

Last Updated 8 ಆಗಸ್ಟ್ 2022, 13:14 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನ ಸಾನಂದದಲ್ಲಿ ಇರುವ ಫೋರ್ಡ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಐಪಿಎಲ್‌) ಘಟಕವನ್ನು ₹ 725.7 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವಒಪ್ಪಂದಕ್ಕೆ ಟಾಟಾ ಮೋಟರ್ಸ್‌ ಸಹಿಮಾಡಿದೆ.

ಪ್ರಯಾಣಿಕ ವಾಹನಗಳ ತಯಾರಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ಸ್ವಾಧೀನ ಪ್ರಕ್ರಿಯೆಯನ್ನು ಕಂಪನಿ ಕೈಗೊಂಡಿದೆ.

ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಎಫ್‌ಐಪಿಎಲ್‌ ಜೊತೆ ಟಾಟಾ ಮೋಟರ್ಸ್‌ನ ಅಂಗಸಂಸ್ಥೆ ಆಗಿರುವ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (ಟಿಪಿಇಎಂಎಲ್‌) ‘ಯುನಿಟ್‌ ಟ್ರಾನ್ಸ್‌ಫರ್‌ ಅಗ್ರಿಮೆಂಟ್‌’ಗೆ ಸಹಿ ಮಾಡಿದೆ.

‘ಈ ಒಪ್ಪಂದದಿಂದಾಗಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಟಾಟಾ ಮೋಟರ್ಸ್‌ನ ಮಾರುಕಟ್ಟೆ ಸ್ಥಾನವು ಇನ್ನಷ್ಟು ಬಲಗೊಳ್ಳಲಿದೆ. ಇದರ ಜೊತೆಗೆ ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ನಾಯಕತ್ವದ ಸ್ಥಾನ ಹೊಂದಲು ಅನುಕೂಲ ಆಗಲಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT