ಬುಧವಾರ, ಮೇ 25, 2022
26 °C

ಜನವರಿಯಿಂದ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೋಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಳವನ್ನು ಸರಿದೂಗಿಸುವ ಸಲುವಾಗಿ ಜನವರಿಯಿಂದ ತನ್ನ ಎಲ್ಲ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಟೊಯೋಟ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಬುಧವಾರ ಹೇಳಿದೆ.

ಕಚ್ಚಾ ಸರಕುಗಳನ್ನೂ ಒಳಗೊಂಡು ತಯಾರಿಕೆಗೆ ಸಂಬಂಧಿಸಿದ ಎಲ್ಲಾ ರೀತಿಯ ವೆಚ್ಚಗಳಲ್ಲಿಯೂ ಏರಿಕೆ ಆಗಿದೆ. ಹೀಗಿದ್ದರೂ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್‌, ಮರ್ಸಿಡಿಸ್‌ ಬೆಂಜ್‌ ಮತ್ತು ಹೋಂಡಾ ಸೇರಿದಂತೆ ಹಲವು ಕಂಪನಿಗಳು ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು