ಗುರುವಾರ , ಆಗಸ್ಟ್ 18, 2022
26 °C

ಭಾರತದಲ್ಲಿ ಹೈಬ್ರಿಡ್‌ ಎಸ್‌ಯುವಿ: ಟೊಯೋಟ, ಸುಜುಕಿ ಸಿದ್ಧತೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ನವದೆಹಲಿ: ಟೊಯೋಟ ಮೋಟರ್‌ ಕಾರ್ಪ್‌ ಮತ್ತು ಸುಜುಕಿ ಮೋಟರ್‌ ಕಾರ್ಪ್‌ ಕಂಪನಿಗಳು ಜೊತೆಗೂಡಿ ಭಾರತದಲ್ಲಿ ಹೈಬ್ರಿಡ್‌ ವಾಹನ ತಯಾರಿಸಲಿವೆ.

ದಕ್ಷಿಣ ಭಾರತದಲ್ಲಿ ಇರುವ ಟೊಯೋಟ ಘಟಕದಲ್ಲಿ ಸುಜುಕಿ ಅಭಿವೃದ್ಧಿಪಡಿಸಿರುವ ಹೈಬ್ರಿಡ್‌ ಎಸ್‌ಯುವಿ ತಯಾರಿಕೆಯು ಆಗಸ್ಟ್‌ನಲ್ಲಿ ಆರಂಭ ಆಗಲಿದೆ ಎಂದು ಟೊಯೋಟ ಮತ್ತು ಸುಜುಕಿ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಎರಡೂ ಕಂಪನಿಗಳ ಮಧ್ಯೆ 2017ರಲ್ಲಿ ನಡೆದಿರುವ ಪಾಲುದಾರಿಕೆಯ ಭಾಗವಾಗಿ ಹೈಬ್ರಿಡ್ ವಾಹನವನ್ನು ರೂಪಿಸಲಾಗುತ್ತಿದೆ. ಭಾರತದಲ್ಲಿ ಮಾರಾಟ ಮಾಡುವುದಷ್ಟೇ ಅಲ್ಲದೆ, ಆಫ್ರಿಕಾ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು