ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್‌ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ

Published 10 ಮೇ 2024, 12:54 IST
Last Updated 10 ಮೇ 2024, 12:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಫೋರ್ಡ್‌ ಕಂಪನಿಯ 2,10,960 ವಾಹನಗಳ ಡೀಸೆಲ್ ಟ್ಯಾಂಕ್‌ಗಳು ಸೋರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ. ಈ ಕುರಿತು ಅಮೆರಿಕದ ವಾಹನ ಸುರಕ್ಷತಾ ಪ್ರಾಧಿಕಾರವು ಪ್ರಾಥಮಿಕ ತನಿಖೆಯನ್ನು ಶ್ರುಕವಾರ ಆರಂಭಿಸಿದೆ.

ಡೀಸೆಲ್ ಟ್ಯಾಂಕುಗಳು ಸೋರುವ ಸಮಸ್ಯೆ ಕುರಿತು 27 ಅರ್ಜಿಗಳು ಬಂದಿದ್ದವು. ಇದರಲ್ಲಿ 12 ದೂರುಗಳಲ್ಲಿ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು ಹಾಗೂ ನಾಲ್ವರು ಗಾಯಗೊಂಡಿದ್ದರು ಎಂದೆನ್ನಲಾಗಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ ಹೇಳಿದೆ. 

ಈ ದೂರಿನ ಅನ್ವಯ 2015ರಿಂದ 2021ರ ಅವಧಿಯಲ್ಲಿ ತಯಾರಾದ ಫೋರ್ಡ್‌ ಕಂಪನಿಯ 6.7ಲೀಟರ್ ಡೀಸೆಲ್ ಎಂಜಿನ್‌ ಸಾಮರ್ಥ್ಯದ ವಾಹನಗಳಾದ ಎಫ್‌–250, 350, 450 ಮತ್ತು 550 ಸೂಪರ್ ಡ್ಯೂಟಿಗಳಲ್ಲಿ ಈ ಸಮಸ್ಯೆ ತಲೆದೋರಿತ್ತು. ವಾಹನದ 2ನೇ ಇಂಧನ ಫಿಲ್ಟರ್‌ನಲ್ಲಿ ಉಂಟಾಗಿದ್ದ ಸಮಸ್ಯೆಯಿಂದಾಗಿ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು ಎಂದೆನ್ನಲಾಗಿದೆ.

ಫಿಲ್ಟರ್ ಅಭಿವೃದ್ಧಿಪಡಿಸಲು ಅಲ್ಲೆವಾರ್ಡ್‌ ಸೊಗೆಫಿ ಕಂಪನಿಗೆ ಫೋರ್ಡ್ ಗುತ್ತಿಗೆ ನೀಡಿತ್ತು. ಆದರೆ ಈ ಕುರಿತು ಪ್ರತಿಕ್ರಿಯೆಗೆ ಫೋರ್ಡ್‌ ಮತ್ತು ಅಲ್ಲೆವಾರ್ಡ್‌ ಸೊಗೆಫಿ ಕಂಪನಿಗಳ ಪ್ರತಿನಿಧಿಗಳು ಲಭ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

‘ತನಿಖಾ ಸಂಸ್ಥೆಯು ನಡೆಸುತ್ತಿರುವ ಪ್ರಾಥಮಿಕ ವರದಿಯ ಮುಖ್ಯ ಉದ್ದೇಶ ಸದ್ಯದ ಅಪಾಯವನ್ನು ತಪ್ಪಿಸುವುದಾಗಿದೆ. ನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಹೊರತು, ತನಿಖೆ ಪೂರ್ಣಗೊಳ್ಳುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಎಚ್ಚೆತ್ತಿರುವ ಫೋರ್ಡ್‌, 42 ಸಾವಿರ ಎಸ್‌ಯುವಿಗಳನ್ನು ಹಿಂದಕ್ಕೆ ಪಡೆದಿದೆ. ಇವುಗಳಲ್ಲೂ ಇಂಧನ ಟ್ಯಾಂಕ್ ಸೋರುವ ಅನುಮಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT