ಭಾನುವಾರ, ಏಪ್ರಿಲ್ 18, 2021
32 °C

ಏಪ್ರಿಲ್ ಫೂಲ್ ಎಡವಟ್ಟುಮಾಡಿಕೊಂಡು ಕ್ಷಮೆ ಕೋರಿದ ಫೋಕ್ಸ್‌ವ್ಯಾಗನ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Credit: Reuters Photo

ಫ್ರಾಂಕ್‌ಫರ್ಟ್: ಕಂಪನಿ ಮತ್ತು ಬ್ರ್ಯಾಂಡ್ ಹೆಸರನ್ನು ಬದಲಾಯಿಸುವ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಕಾರು ತಯಾರಿಕ ಕಂಪನಿ, ಫೋಕ್ಸ್‌ವ್ಯಾಗನ್ ಏಪ್ರಿಲ್ ಫೂಲ್ ಫ್ರ್ಯಾಂಕ್ ಎಂದು ಎಡವಟ್ಟುಮಾಡಿಕೊಂಡಿದೆ.

ಪ್ರಚಾರದ ಉದ್ದೇಶಕ್ಕೆ ಪತ್ರಿಕಾ ಹೇಳಿಕೆ ನೀಡಿದ್ದ ಫೋಕ್ಸ್‌ವ್ಯಾಗನ್ ಬಳಿಕ ಸುದ್ದಿ ಏಜೆನ್ಸಿಗಳಿಂದ ಟೀಕೆಗೊಳಗಾಗಿದ್ದು, ಕ್ಷಮೆ ಕೋರಿದೆ.

ಎಲೆಕ್ಟ್ರಿಕ್ ಕಾರುಗಳ ಹೆಸರನ್ನು ಫೋಕ್ಸ್‌ವ್ಯಾಗನ್ ಬದಲು, ವೋಲ್ಟ್ಸ್‌ವ್ಯಾಗನ್ ಎಂದು ಬದಲಾಯಿಸುವುದಾಗಿ ಹೇಳಿತ್ತು. ಈ ಹೇಳಿಕೆ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಮತ್ತೆ ಹೇಳಿಕೆ ನೀಡಿರುವ ಕಂಪನಿ, ಇದೊಂದು ಮಾರುಕಟ್ಟೆ ವಿಭಾಗದವರ ತಂತ್ರವಾಗಿದ್ದು, ಏಪ್ರಿಲ್ ಫೂಲ್‌ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದೆ. ಬ್ರ್ಯಾಂಡ್ ಹೆಸರು ಬದಲಾಯಿಸುವ ಹೇಳಿಕೆ ಪ್ರಚಾರ ತಂತ್ರವಾಗಿತ್ತು, ಕಂಪನಿ ಹೆಸರನ್ನು ಬದಲಾಯಿಸುವ ಉದ್ದೇಶವಿಲ್ಲ ಎಂದು ಫೋಕ್ಸ್‌ವ್ಯಾಗನ್ ಸ್ಪಷ್ಟಪಡಿಸಿದೆ.

ಅಲ್ಲದೆ, ಪತ್ರಿಕಾ ಪ್ರಕಟಣೆ ನೀಡಿ ತಪ್ಪು ಮಾಹಿತಿ ನೀಡಿದ ಬಗ್ಗೆ ಫೋಕ್ಸ್‌ವ್ಯಾಗನ್ ಕಂಪನಿ ಕ್ಷಮೆಯಾಚಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು