ಗುಂಡ್ಲುಪೇಟೆ: ನಾಡಹಬ್ಬ ದಸರಾ ಪ್ರಯುಕ್ತ ಸಾಲು ಸಾಲು ರಜೆಗಳು ಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿದ್ದಾರೆ.

ನೆಚ್ಚಿನ ಪ್ರವಾಸಿ ತಾಣಗಳಾದ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮೂರು ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಪರಿಸರ ಮತ್ತು ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಂಡಿದ್ದಾರೆ.

ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಹೊರದೇಶ ಮತ್ತು ರಾಜ್ಯಗಳಿಂದ ಲಕ್ಷಾಂತರಪ್ರವಾಸಿಗರು ಬರುತ್ತಾರೆ. ಅವರು ಅಕ್ಕಪಕ್ಕದ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡುತ್ತಾರೆ. ಅಲ್ಲದೇ ಸತತ ನಾಲ್ಕು ದಿನಗಳ ರಜೆ ಇರುವುದರಿಂದ ಸುತ್ತಮುತ್ತಲಿನ ಜಿಲ್ಲೆಯ ಮಂದಿಯೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ.

ಬಂಡೀಪುರದಲ್ಲಿ ಪ್ರವಾಸಿಗರ ದಂಡು:ಇತ್ತೀಚೆಗೆ ಸತತ ಮಳೆಯಾಗುತ್ತಿರುವುದರಿಂದ ಕಾಡು ಹಸಿರಾಗಿ ಪ್ರಾಣಿ ಪಕ್ಷಿಗಳು ರಸ್ತೆ ಬದಿಗಳಲ್ಲೇ ದರ್ಶನವಾಗುತ್ತಿದೆ. ಪ್ರವಾಸಿಗರು ತೆಗೆದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿವೆ. ಹಾಗಾಗಿ,ಹೆಚ್ಚಿನ ಪ್ರವಾಸಿಗರು ಬಂಡೀಪುರದತ್ತ ಆಗಮಿಸಲು ಕಾರಣವಾಗುತ್ತಿದೆ. ಅದರ ಜೊತೆಗೆ ರಜೆ ಇರುವುದರಿಂದಲೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಸಫಾರಿಗಾಗಿ ಬರುತ್ತಿದ್ದಾರೆ.

ಬಂಡೀಪುರದಲ್ಲಿರುವಅತಿಥಿಗೃಹಗಳು ಮುಂದಿನ ಮಂಗಳವಾರದವರೆಗೂ ಬುಕ್ ಆಗಿದ್ದು, ಅತಿಥಿಗಳಿಂದ ತುಂಬಿ ತುಳುಕುತ್ತಿವೆ. ಸಫಾರಿಗೆ ತೆರಳುವ ಪ್ರವಾಸಿಗರು ಹೆಚ್ಚಾಗಿದ್ದು, ಟಿಕೆಟ್ಗಾಗಿ ಉದ್ದನೆಯ ಸರತಿಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಟಿಕೆಟ್ ದೊರೆಯದೆ ಪ್ರವಾಸಿಗರು ನಿರಾಸೆಯಿಂದ ತೆರಳುತ್ತಿದ್ದ ದೃಶ್ಯವೂ ಕಂಡು ಬಂತು. ಎರಡು ದಿನಗಳ ಅವಧಿಯಲ್ಲಿ ಬಂಡೀಪುರದಲ್ಲಿ ₹4.5 ಲಕ್ಷಕ್ಕೂ ಹೆಚ್ಚಿನ ಆದಾಯ ಬಂದಿದೆ.

‘ರಜೆ ಇರುವ ಕಾರಣ ಕುಟುಂಬದೊಂದಿಗೆ ಬೆಂಗಳೂರಿನಿಂದ ಬಂದಿದ್ದೆ. ಪ್ರವಾಸಿಗರ ಸಾಲು ಮಾರುದ್ದ ಇದ್ದುದ್ದರಿಂದ ಟಿಕೆಟ್ ಸಿಗಲಿಲ್ಲ. ನಿರಾಸೆಯಿಂದ ತೆರಳುವಂತಾಯಿತು’ ಎಂದು ಬೆಂಗಳೂರಿನ ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದರು.

ಮಧ್ಯಾಹ್ನ 3.30ರ ಸಫಾರಿಗೆ ಟಿಕೆಟ್ ಪಡೆದುಕೊಳ್ಳಲು ಮಧ್ಯಾಹ್ನ 12 ಗಂಟೆಯಿಂದಲೇ ಬಿಸಿಲನ್ನು ಲೆಕ್ಕಿಸದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಫಾರಿಗೆ 8 ಬಸ್ ಹಾಗೂ ನಾಲ್ಕು ಜಿಪ್ಸಿಗಳಿದ್ದರೂ ಸಾಕಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಹೆಚ್ಚು ಪ್ರವಾಸಿಗರು ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎರಡು ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಫಾರಿಗೆ ಬಂದಿದ್ದಾರೆ. ಸಫಾರಿಗೆ ವಾಹನಗಳು ಸಾಲುತ್ತಿಲ್ಲ. ಅಷ್ಟೊಂದು ಜನರು ಬರುತ್ತಿದ್ದಾರೆ. ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ಹೆಚ್ಚುವರಿಯಾಗಿ ಜಂಗಲ್ ಲಾಡ್ಜ್ ವಾಹನಗಳನ್ನು ಬಳಕೆ ಮಾಡಿಕೊಂಡರೂ ಸಫಾರಿಗೆ ಕೊರತೆಯಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬಂಡೀಪುರ ಅರಣ್ಯ ಭಾಗದಲ್ಲಿರುವ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದಎಲ್ಲ ವಸತಿ ಗೃಹಗಳು ತುಂಬಿ ತುಳುಕುತ್ತಿವೆ. ಮುಂದಿನ ಬುಧವಾರದವರೆಗೆ ಬುಕ್ಕಿಂಗ್ ಆಗಿದೆ ಎಂದು ಖಾಸಗಿ ವಸತಿಗೃಹದ ಸಿಬ್ಬಂದಿಯೊಬ್ಬರು ತಿಳಿಸಿದರು.

ಭಕ್ತರ ಸಂಖ್ಯೆ ಹೆಚ್ಚಳ:ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಎಂದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದಾರೆ.

‘ಆಯುಧಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಸಾಲು ಸಾಲು ರಜೆಗಳು ಇರುವುದರಿಂದ ಬೆಟ್ಟಕ್ಕೆ ತೆರಳಲು ನಿರೀಕ್ಷೆಗೂ ಮೀರಿದ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ನೂಕುನುಗ್ಗಲುಂಟಾಗಿ ಪೊಲೀಸ್ ನೆರವು ಪಡೆದುಕೊಳ್ಳುವಂತಾಗಿತ್ತು. ಸೇವೆಯಲ್ಲಿದ್ದ 5 ಮಿನಿ ಬಸ್ಸುಗಳು ಸಾಲದೆ ಹೆಚ್ಚುವರಿಯಾಗಿ 4ರಿಂದ 5 ಸಾಮಾನ್ಯ ಸಾರಿಗೆ ಬಸ್ಸುಗಳನ್ನು ಬಳಕೆ ಮಾಡಬೇಕಾಯಿತು’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಎಚ್ಚರಿಕೆ ಸಂದೇಶ

ಬಂಡೀಪುರ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ವಾಹನಗಳ ಓಡಾಟ ಹೆಚ್ಚಾಗಿದೆ. ಕೆಲವರು ಪ್ರಾಣಿಗಳನ್ನು ನೋಡಲು ರಸ್ತೆಯ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಮೆಲುಕಾಮನಹಳ್ಳಿ ಚೆಕ್ಪೋಸ್ಟ್ ಬಳಿ ಅರಣ್ಯಇಲಾಖೆ ಸಿಬ್ಬಂದಿ, ವಾಹನಗಳನ್ನು ತಡೆದು, ‘ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಬಾರದು, ಪ್ಲಾಸ್ಟಿಕ್ ಎಸೆಯಬಾರದು, ಪ್ರಾಣಿಗಳ ಫೋಟೊಗಳನ್ನು ತೆಗೆಯಬಾರದು’ ಎಂದು ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.