ಬುಧವಾರ, ಮಾರ್ಚ್ 29, 2023
23 °C
ಬಿಚ್ಚೋಲೆ ಗೌರಮ್ಮ ನಿಗಿಂತ ಉಟ್ಟು ತೊಟ್ಟು ಮಾಡುವ ಪುಟ್ಟಕ್ಕನೇ ಚಂದ

ಫ್ಯಾಷನ್: ಗ್ರ್ಯಾಂಡ್‌ ಲುಕ್‌ನ ಆರ್ಟಿಫಿಶಿಯಲ್‌ ಆಭರಣ

ಜ್ಯೋತಿ ಸಂತೋಷ, ಜಿತೂರಿ Updated:

ಅಕ್ಷರ ಗಾತ್ರ : | |

Prajavani

ಹಿಂದೆಲ್ಲ ಸಾಲಂಕೃತ ವಧು ಎಂದರೆ ಚಿನ್ನದ ಒಡವೆ ಗಳಿಂದ ಆಭೂಷಿತಳಾದವಳೆಂದು ಅರ್ಥೈಸಲಾಗುತ್ತಿತ್ತು. ಈಗ ಬಡವ, ಬಲ್ಲಿದ ರಿಂದ ಉಳ್ಳವರ ವರೆಗೆ ಬಹುತೇಕ ಮದುವಣಗಿತ್ತಿಯರು ಚಿನ್ನದ ಎರಕ ಹೊಯ್ದ ಮ್ಯಾಚಿಂಗ್ ಆಭರಣಗಳನ್ನೇ ಧರಿಸಿ ಧಾರೆ, ಆರತಕ್ಷತೆ ಕಾರ್ಯಕ್ರಮಗಳಲ್ಲಿ ಝಗಮಗಿಸುತ್ತಾರೆ.

ಹಬದ ಆರ್ಕಷಣೆಗೆ ಆರ್ಟಿಫಿಶಿಯಲ್‌ ಆಭರಣ
ಕಾಲಿ ಆಕಾಶ ಇದ್ದರೆ ಹೆಂಗ್ರಿ? ಸ್ವಲ್ಪ ಕಣ್ಣು ಮಿಟುಕಿಸಿ ನೋಡುವಂಗ ಈ ಚುಕ್ಕಿ, ನಕ್ಷತ್ರ, ಆಗಾಗ ತೇಳುವಾಗಿ ಸಾಗುವ ಬೆಳ್ಳಿಮೊಡಗಳು ನೀಲಾಕಾಶವನ್ನು ಸುಂದರವಾಗಿ ಕಾಣುವಂಗ ಮಾಡ್ತಾವು. ಹಂಗ ಈ ಹೆಂಗಳೆಯರ ಅಂದವನ್ನು ಹೆಚ್ಚಿಸಲಿಕ್ಕೆ ಈ ಆಭರಣಗಳು ಬೇಕೆ ಬೇಕು. ಅದರಲ್ಲೂ ಹಬ್ಬದ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಇವುಗಳನ್ನು ಕಂಡರೆ ಪಂಚಪ್ರಾಣ. ಸಭೆ ಸಮಾರಂಭಗಳಲ್ಲೂ ಹೆಣ್ಣುಮಕ್ಕಳಿದ್ದರೆ ಅಲ್ಲಿ ಸಂತೋಷದ ಹೊನಲು ಹರಿಯುತ್ತದೆಯೋ, ಹಾಗೆ ಆಭರಣ ತೊಟ್ಟ ಮಹಿಳೆಯರಲ್ಲಿ ಸಂತೋಷದ ಚಿಲುಮೆ ಉಕ್ಕುತ್ತದೆ.

ಒಂದು ಗಾದೆ ಇದೆ. ಅದೇನೆಂದರೆ ಮಹಿಳೆಯನ್ನು ಖುಷಿ ಪಡಿಸಲು, ಅವರಿಗೆ ಒಂದು ಆಭರಣ ಉಡುಗೊರೆಯಾಗಿ ನೀಡಿ ನೋಡಿ. ಆಗ ಅವರ ಸಂತೋಷ ನೂರಪಟ್ಟು ಹೆಚ್ಚಾಗುತ್ತದೆ. ಸ್ತ್ರೀಯರು ಸೀರೆಯೊಂದಿಗೆ ಒಪ್ಪುವಂತಹ ಆಭರಣಗಳನ್ನು ಧರಿಸಿದರೆ ನೋಡಲು ಮತ್ತಷ್ಟು ಸುಂದರವಾಗಿ ಕಾಣುವರು. ಭಾರತದ ಮಹಿಳೆಯರು ಹೆಚ್ಚು ಆಭರಣ ಪ್ರೀಯರು. ಅವರು ತಮ್ಮ ಗಳಿಕೆಯ ಸ್ವಲ್ಪ ಹಣವನ್ನು, ಅಥವಾ ತಮ್ಮ ಗಂಡದಿರು ನೀಡಿರುವ ಹಣದಲ್ಲಿ ಸ್ವಲ್ಪ ಕೂಡಿಟ್ಟು ಅದನ್ನು ಆಭರಣ ಖರೀದಿಗೆ ವಿನಿಯೋಗಿಸುವರು.

ಇತ್ತೀಚಿನ ದಿನಗಳಲ್ಲಿ ಚಿನ್ನದ ಆಭರಣಗಳ ಬೆಲೆ ಗಗನಕ್ಕೇರಿದ್ದರಿಂದ ಅವುಗಳನ್ನು ಖರೀದಿಸಲು ಎಲ್ಲ ವರ್ಗದರಿಗೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಹಳಷ್ಟು ಜನ ಆರ್ಟಿಫಿಶಿಯಲ್‌ ಆಭರಣಗಳಿಗೆ ಮೊರೆಹೋಗುತ್ತಿದ್ದಾರೆ. ಆರ್ಟಿಫಿಶಿಯಲ್‌ ಆಭರಣಗಳು ಮಾರ್ಕೆಟ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಅವರವರ ಬಜೆಟ್‌ಗೆ ತಕ್ಕಂತೆ ಅವುಗಳನ್ನು ಖರೀದಿ ಮಾಡಬಹುದು. ಈಗೀಗ ಇವುಗಳ ಹಾವಳಿ ಹೆಚ್ಚಾಗಿದೆ. ಮ್ಯಾಟ್‌ ಫಿನಿಶ್‌, ಸ್ಟೋನ್‌, ಆ್ಯಂಟಿಕ್‌, ಬ್ಲಾಕ್‌ ಮೇಟಲ್‌ ಹೀಗೆ ಹಲವಾರು ತರಹದ್ದು ಸಿಗುತ್ತವೆ. ಆದರೆ ನಿಮ್ಮ ಆಯ್ಕೆ ನಿಮ್ಮ ದರದಲ್ಲಿ ಹೆಚ್ಚು ಭಾಳಿಕೆ ಬರುವಂತವುಗಳನ್ನು ಆಯ್ದುಕೊಂಡರೆ ಒಳ್ಳೆಯದು.

ಈ ಆಭರಣಗಳಲ್ಲಿ ಹಲವಾರು ವಿಧಗಳಿವೆ, ಶಾರ್ಟ್‌ ನೆಕ್ಲೇಸ್‌, ಲಾಂಗ್‌ ಚೈನ್‌, ಕಿವಿಯೊಲೆ, ಬಳೆ, ಚೋಕರ್‌, ರಾಣಿಹಾರ, ಸ್ಟೇಪ್‌ ಚೈನ್‌, ಹಿಪ್‌ ಬೆಲ್ಟ್‌, ಕಾಲ್ಗೆಜ್ಜೆ, ಮುಂತಾದವುಗಳು.

ಭಾರತೀಯರು ಮದುವೆ ಸಮಾರಂಭದಲ್ಲಿ ಮಧುಮಗಗಳು ಸೀರೆಯನ್ನು ಮುಖ್ಯ ಉಡುಪಾಗಿ ಧರಿಸುತ್ತಾರೆ . ಈ ಗ್ರ್ಯಾಂಡ್‌ ಸೀರೆಗಳಿಗೆ ದೊಡ್ಡ ನೆಕ್ಲೇಸ್ ಅಥವಾ ಚೋಕರ್ ಸುಂದರವಾಗಿ ಒಪ್ಪುತ್ತದೆ. ಆಭರಣದ ಬಣ್ಣ, ಲುಕ್ ಸ್ಟೈಲ್ ಇತ್ಯಾದಿಗಳ ಕಡೆಗೆ ನೀವು ಗಮನ ಕೊಡಬೇಕು. ನೀವು ನೆಕ್‌ಪೀಸ್ ಅನ್ನು ಆಯ್ಕೆಮಾಡುವಾಗ ಅದರ ಗಾತ್ರ ಮತ್ತು ಇದನ್ನು ಯಾವ ಸಂದರ್ಭಕ್ಕೆ ಧರಿಸುತ್ತಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.

ಈ ಆಭರಣ ದೀರ್ಘ ಭಾಳಿಕೆ ಬರಲು ಈ ಟಿಪ್ಸ್‌ ಅನುಸರಿಸಿ
1) ಇವುಗಳನ್ನು ಸ್ವಲ್ಪ ನಾಜೂಕಿನಿಂದ ಬಳಸಿ
2) ಬಿಸಿ ನೀರಿಗೆ ಹಾಕಬಾರದು. ಬೇಗನೆ ಹೊಳಪು ಕಳೆದುಕೊಳ್ಳುವ ಸಂಭವ ಹೆಚ್ಚು‌
3) ನಾವು ದಿನ ಉಪಯೋಗಿಸುವ ಸೋಪ್‌, ಪರ್ಫ್ಯೂಮ್‌ಗಳಿಂದ ದೂರವಿಡಬೇಕು
4) ಬೇರೆ ಬೇರೆ ಆಭರಣಗಳೊಂದಿಗೆ ಸೇರಿಸಬಾರದು. ಅದಕ್ಕೆಂದೆ ಬೇರೆ ಬಾಕ್ಸ್‌ನಲ್ಲಿ ಹಾಕಿಟ್ಟರೆ ಒಳ್ಳೆಯದು
5) ಇವುಗಳಿಗೆಂದೆ ಜಿಪ್‌ಲಾಕ್‌ ಬ್ಯಾಗ್‌ ಅಥವಾ ಪೌಚ್‌ಗಳನ್ನು ಬಳಸುವುದು ಉತ್ತಮ
6) ಸ್ವಚ್ಛಗೊಳಿಸಲು ಮೃದುವಾದ ಹತ್ತಿಯನ್ನು ಉಪಯೋಗಿಸಿ. ಇಲ್ಲಾ ಹತ್ತಿಬಟ್ಟೆಗಳನ್ನಾದರೂ ಬಳಸಿ
7) ನೀರಿನಿಂದ ಒದ್ದೆಯಾದ ಆಭರಣಗಳನ್ನು ಒಣಗಿಸಿ ನಂತರ ಪ್ಯಾಕ್‌ ಮಾಡಿ ಇಡಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು