ರ‍್ಯಾಂಪ್ ಮೇಲೆ ಹೆಜ್ಜೆ ಹಾಕಬೇಕು ಎಂದು ಬಹಳ ದಿನಗಳ ಆಸೆ. ಆದರೆ, ಕುಟುಂಬದ ಜವಾಬ್ದಾರಿ ಹೊತ್ತ ಮೇಲೆ ನಮಗೆಲ್ಲಿಯ ಪುರುಸೊತ್ತು? ಅಥವಾ ಕಾರ್ಯಕ್ರಮ ಆಯೋಜಿಸುವುದಾದರೂ ಯಾರು? ಹೀಗೆ ಯೋಚಿಸುತ್ತಲೇ ಕಾಯುತ್ತಿದ್ದೆವು.

ಹೌದು ಯಾರನ್ನೋ ಕಾಯುವ ಬದಲು ನಮ್ಮ ಕನಸುಗಳನ್ನು ನಾವೇ ಸಾಕಾರಗೊಳಿಸಿಕೊಳ್ಳೋಣ ಎಂದು ಮುಂದಡಿಯಿಟ್ಟೆವು... ದೀಪಾವಳಿ ಸಮೀಪಅರಳಿದ ಪರಿಕಲ್ಪನೆಯೇ ‘ದೀಪಾಂಬರ’.

ಹೀಗೆ ಮತ್ತೆ ರೂಪದರ್ಶಿಗಳಾಗಿ ಕಾಣಿಸಿ ಫೋಟೋಶೂಟ್ ಮಾಡಿಕೊಂಡ ಖುಷಿ ಹಂಚಿಕೊಂಡರು ಮಿಸೆಸ್ ಇಂಡಿಯಾ ಗೆಲಾಕ್ಸಿಯ ರನ್ನರ್ ಅಪ್ ಪ್ರಿಯಾ ಪ್ರಶಾಂತ್.

‘ರೂಪದರ್ಶಿಯರು, ಅಕ್ಕಪಕ್ಕದ ಗೆಳತಿಯರು, ಬಂಧುಗಳು, ಕಿಟ್ಟಿಪಾರ್ಟಿಗೆ ಸೇರುತ್ತಿದ್ದವರೆಲ್ಲಾ ನಮ್ಮ ಸಂಸ್ಥೆ ‘ಪ್ರಿಯಾಸ್ ಫ್ಯಾಷನ್’ವೇದಿಕೆ ಅಡಿ ಅಂದು ಸೇರಿದರು. ಒಂದಿಷ್ಟು ಆಭರಣಗಳನ್ನು ತರಿಸಿಕೊಂಡೆವು. ದೀಪಾಂಬರ ಪರಿಕಲ್ಪನೆಯನ್ನು ವಿವರಿಸುವಂತೆ ಸಾಂಪ್ರದಾಯಿಕ ಉಡುಪುಗಳನ್ನು ಆಯ್ಕೆ ಮಾಡಿಕೊಂಡೆವು. ಆದರೆ, ಬಟ್ಟೆಯ ವಿನ್ಯಾಸ, ಬಣ್ಣಗಳ ಆಯ್ಕೆ, ಸ್ಥಳೀಯತೆ ಮತ್ತು ಸೌಂದರ್ಯಕ್ಕೆ ಸರಿಯಾದ ಆದ್ಯತೆ ನೀಡಿದ್ದೆವು.

‘ಇದಕ್ಕೆ ಯಾವುದೇ ಪ್ರಾಯೋಜಕರಿಲ್ಲ. ಬರಬರುತ್ತಾ ದುಬಾರಿಯೆನಿಸಿತಾದರೂ ಎಲ್ಲರೂ ಕೈಜೋಡಿಸಿದರು. ಕೊನೆಯಲ್ಲಿ ಕಂಡ ಖುಷಿಗೆ ಹೋಲಿಸಿದರೆ ಆ ಖರ್ಚು ಗೌಣವೆನಿಸಿತು’ ಎಂದು ಖುಷಿಯ ನಿಟ್ಟುಸಿರುಬಿಟ್ಟರು ಪ್ರಿಯಾ.

ಏನಿದು ದೀಪಾಂಬರ?

‘ದೀಪದಂತೆಯೇ ನಮ್ಮ ಮೈಮನ, ವಸ್ತ್ರ, ಬದುಕು ಬೆಳಗಬೇಕು. ದೀಪ ಎಂದರೆ ಬೆಳಕು. ಅಂಬರ ಎಂದರೆ ಬಟ್ಟೆ ಅದೂ ನಮ್ಮ ಹಬ್ಬ ಹರಿದಿನ ಸಂಸ್ಕೃತಿಗೆ ತಕ್ಕಂತಿರಬೇಕು. ನಮ್ಮ ಮುಂದಿನ ತಲೆಮಾರಿಗೂ ಪರಿಚಯ ಆಗಬೇಕು ಎನ್ನುವ ರೀತಿಯ ಉಡುಪುಗಳನ್ನು ಇಲ್ಲಿ ಬಳಸಿದ್ದೇವೆ. ಸೀರೆ, ಲಂಗದಾವಣಿ, ಪುಟ್ಟಮಕ್ಕಳ ಉಡುಗೆ, ಸಲ್ವಾರ್ ಹೀಗೆ ಎಲ್ಲರಿಗೂ ಹೊಂದುವ ಉಡುಪುಗಳನ್ನು ಪ್ರದರ್ಶನದಲ್ಲಿ ಬಳಸಿದ್ದೇವೆ’ ಎಂದರು ಪ್ರಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.