ಚಿತ್ರ, ವಿಚಿತ್ರ ಕಣ್ರೆಪ್ಪೆ!

7

ಚಿತ್ರ, ವಿಚಿತ್ರ ಕಣ್ರೆಪ್ಪೆ!

Published:
Updated:
Deccan Herald

ಮುಖದ ಅಲಂಕಾರದಲ್ಲಿ ಕಣ್ಣಿಗೆ ಪ್ರಾಮುಖ್ಯತೆ ಜಾಸ್ತಿ. ಇತ್ತೀಚೆಗೆ ಸ್ಮೋಕಿ ಐ ಟ್ರೆಂಡ್‌ ಆಗಿತ್ತು. ಕಣ್ಣು, ಹುಬ್ಬಿನ ಸೌಂದರ್ಯಕ್ಕೆ ಪ್ರಾಮುಖ್ಯ ಹೆಚ್ಚುತ್ತಿದೆ. ಅದರ ಮೇಲೆ ಚಿತ್ರವಿಚಿತ್ರ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈಗ ಕಣ್ಣಿನ ರೆಪ್ಪೆ ಮೇಲೆ ಬಹುವರ್ಣದ ಹಾಗೂ ವಿಭಿನ್ನ ವಿನ್ಯಾಸಗಳ ಕೃತಕ ಕಣ್ರೆಪ್ಪೆ ಬಳಕೆ (ಫೇಕ್‌ ಐ ಲ್ಯಾಶಸ್‌) ಟ್ರೆಂಡ್‌ ಆಗಿದೆ. 

ಇದು ಪ್ರಯೋಗಗಳ ಯುಗ. ಫ್ಯಾಷನ್‌ ಪ್ರಿಯರು ಬಗೆ ಬಗೆಯಾಗಿ, ವಿಭಿನ್ನವಾಗಿ ಮೇಕಪ್‌ ಮಾಡಿಕೊಂಡು, ಆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಈ ಕೃತಕ ಕಣ್ರೆಪ್ಪೆಗಳಲ್ಲಿ ಚಿಟ್ಟೆಯ ರೆಕ್ಕೆಯಂತೆ, ಹೂವಿನ ದಳದಂತೆ, ಹಕ್ಕಿ ಪುಕ್ಕ...ಹೀಗೆ ನಾನಾ ವಿಧದ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.  

ಸದ್ಯ ಇಂತಹ ಕಣ್ರೆಪ್ಪೆ ಫ್ಯಾಷನ್‌ ಷೋಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ರೂಪದರ್ಶಿಯರು ತಾವು ಧರಿಸಿದ ಬಟ್ಟೆ ಹಾಗೂ ಕಣ್ಣು ಆಕರ್ಷಕವಾಗಿ ಕಾಣಲು ಈ ಐಲ್ಯಾಶಸ್‌ಗಳನ್ನು ಬಳಸುತ್ತಾರೆ. ಹಾಲಿವುಡ್‌ ಸಿನಿಮಾಗಳಲ್ಲೂ ಈ ಟ್ರೆಂಡ್‌ ಇದೆ. ಸಿನಿಮಾ ನಟಿಯರು ತಾವು ವಿಭಿನ್ನವಾಗಿ ಕಾಣಲು ಫೇಕ್‌ ಐಲ್ಯಾಶಸ್‌ ಬಳಸುವುದುಂಟು. ವಿಶೇಷ ಅಂದ್ರೆ ಇದರಲ್ಲಿ ತ್ರೀಡಿ ಕೃತಕ ಕಣ್ರೆಪ್ಪೆಗಳೂ ಲಭ್ಯ. 

ಈ ರೀತಿ ಅಲಂಕಾರ ಮಾಡಿಕೊಳ್ಳುವುದು ಸುಲಭ. ಕಣ್ಣಿಗೆ ಐಲೈನರ್‌,  ಐಶ್ಯಾಡೋ ಹಚ್ಚಿಕೊಂಡ ನಂತರ ಕಣ್ಣಿನ ರೆಪ್ಪೆಗಳಿಗೆ ಮಸ್ಕರಾ ಹಚ್ಚಿ. ನಂತರ ಕಣ್ಣಿನ ಕೆಳಗೆ ಕಾಡಿಗೆ ಎದ್ದು ಕಾಣುವಂತೆ 2–3 ಬಾರಿ ಕಾಜಲ್‌ ಹಚ್ಚಬೇಕು. ಆಗ ಕಣ್ಣು ಡಾರ್ಕ್‌ ಆಗಿ ಎದ್ದು ಕಾಣುತ್ತದೆ. ಕಣ್ಣಿನ ಮೇಲ್ಭಾಗಕ್ಕೂ ಸ್ವಲ್ಪ ದಪ್ಪವಾಗಿ ಕಾಜಲ್‌ ಹಚ್ಚಬೇಕು. ಅನಂತರ ವಿಭಿನ್ನವಾಗಿ ಕಣ್ಣಿನ ರೆಪ್ಪೆಯ ಅಲತೆಗೆ ತಕ್ಕಂತೆ ಕೃತಕ ಕಣ್ರೆಪ್ಪೆಗಳನ್ನು ಕತ್ತರಿಸಿಕೊಂಡು ಅಂಟಿಸಿಕೊಳ್ಳಬೇಕು. ಬಳಿಕ ಅವು ಕಣ್ಣು ಹಾಗೂ ಮುಖಕ್ಕೆ ಸರಿಹೊಂದಿಕೆಯಾಗುವಂತೆ ಮಸ್ಕರಾದಿಂದ ಮೇಕಪ್‌ ಮಾಡಿಕೊಳ್ಳಬೇಕು. 

ವಿಭಿನ್ನವಾಗಿ ಕಾಣಿಸಿಕೊಳ್ಳಲು ಇಷ್ಟಪಡುವವರು ಈ ರಿತಿ ಐಮೇಕಪ್‌ ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !