ಈ ವರ್ಷ ಮಾರ್ಚ್ 4ರಂದು ದೇಶದಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜನರು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅನೇಕರು ಬಣ್ಣದ ಓಕುಳಿ ಆಡುವ ಮೂಲಕ ಆಚರಿಸುತ್ತಾರೆ.

ಸಾಮಾನ್ಯವಾಗಿ ಹೋಳಿ ಬಣ್ಣ ಆಡಿದ ಬಳಿಕ ಎಷ್ಟೇ ತಿಕ್ಕಿ, ತೊಳೆದರು ಅದು ಅಷ್ಟು ಸುಲಭವಾಗಿ ನಮ್ಮ ಮುಖದ ಮೇಲಿಂದ ಹೋಗುವುದಿಲ್ಲ. ಅಂತ ಪರಿಸ್ಥಿತಿಯಲ್ಲಿ ರಾಸಾಯನಿಕಗಳಿಂದ ಕೂಡಿದ ಬಣ್ಣವು ನಮ್ಮ ಮುಖದ ಮೇಲೆ ಕಲೆಗಳು, ಮೊಡವೆ ಮತ್ತು ಅಲರ್ಜಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಖಕ್ಕೆ ಅಂಟಿಕೊಂಡ ಬಣ್ಣವನ್ನು ತೆಗೆದುಹಾಕುವುದು ಮುಖ್ಯ.

ಎಲ್ಲರ ಚರ್ಮವು ಒಂದೇ ರೀತಿ ಇರುವುದಿಲ್ಲ. ಕೆಲವರು ಹೋಳಿ ಹಬ್ಬ ಆಚರಣೆ ಬಳಿಕ ತೆಂಗಿನ ಎಣ್ಣೆ ಬಳಸಿ ಬಣ್ಣ ತೆಗೆಯಲು ಮುಂದಾದರೆ, ಇನ್ನೂ ಕೆಲವರು ಸನ್ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಮೊರೆಹೋಗುತ್ತಾರೆ.

ಚರ್ಮವು ಸಾಮಾನ್ಯ ಅಥವಾ ಒಣ ಚರ್ಮವಾಗಿದ್ದರೆ, ತೆಂಗಿನ ಎಣ್ಣೆ ಬಳಕೆ ಮಾಡುವುದು ಉತ್ತಮ. ಮುಖ ಸೇರಿದಂತೆ ದೇಹಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ. ಆದರೆ ನಿಮಗೆ ಏನಾದ್ರೂ ಚರ್ಮದ ಸಮಸ್ಯೆ ಇದ್ದರೆ, ತೆಂಗಿನ ಎಣ್ಣೆಯನ್ನು ಬಳಕೆಯಿಂದ ದೂರ ಇರಬೇಕು. ಬದಲಾಗಿ ಸೆರಾಮೈಡ್ ಆಧಾರಿತ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಸಾಕಷ್ಟು ಜನ ಮುಖದ ಮೇಲಿನ ಬಣ್ಣ ತೆಗೆಯಲು ಸೋಪ್ ಅಥವಾ ರಾಸಾಯನಿಕ ಉತ್ಪನ್ನಗಳ ಮೊರೆಹೋಗುತ್ತಾರೆ. ಆದರೆ ಅಂತ ಸಂದರ್ಭಗಳಲ್ಲಿ ಮೊದಲು ಮುಖವನ್ನು ಚೆನ್ನಾಗಿ ನೀರಿನಿಂದ ಒದ್ದೆ ಮಾಡಬೇಕು. ನಂತರ ನೀವು ಮನೆಯಲ್ಲಿ ಉಪಯೋಗಿಸುವ ಸೋಪ್ ಬಳಸಿ. ಆದರೆ ಅಪ್ಪಿ ತಪ್ಪಿಯೂ ಅತಿಯಾದ ಸ್ಕ್ರಬ್ಬಿಂಗ್ ಮಾಡಬೇಡಿ. ಏಕೆಂದರೆ ಇದು ಚರ್ಮದ ಹಾನಿಗೆ ಕಾರಣವಾಗಬಹುದು.

ಹೋಳಿ ಹಬ್ಬ ಆಚರಿಸಿದ ನಂತರ ತುರಿಕೆ, ಕಿರಿಕಿರಿ, ದದ್ದುಗಳು ಕಂಡುಬಂದರೆ ಆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಹಬ್ಬದ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆಗೆ ಮೊದಲು ಆದ್ಯತೆ ನೀಡುವ ಮೂಲಕ ಸಮಸ್ಯೆಯಿಂದ ದೂರ ಇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.