ಬೆಳೆಯುತ್ತಿದೆ ಮಾರುಕಟ್ಟೆ
ಪುರುಷರು ಈಗ ಹೆಚ್ಚು ಹೆಚ್ಚು ಆಭರಣ ಖರೀದಿ ಮಾಡುತ್ತಿದ್ದಾರೆ. ಇದು ದೊಡ್ಡ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಮೊದಲೆಲ್ಲ ಹುಟ್ಟಿದ ಹೆಣ್ಣುಮಕ್ಕಳಿಗೆ ಬಂಗಾರ ಖರೀದಿ ಮಾಡುತ್ತಿದ್ದರು. ಈಗ ಗಂಡುಮಕ್ಕಳಿಗೂ ವಿವಿಧ ವಿನ್ಯಾಸದ ಆಭರಣಗಳನ್ನು ಜನ ಖರೀದಿಸುತ್ತಿದ್ದಾರೆ. ಯುವಕರು ಹೆಚ್ಚು ಹಗುರವಾದ ಒಡವೆಗಳನ್ನು ಇಷ್ಟಪಡುತ್ತಿದ್ದಾರೆ. ಸಾಮಾನ್ಯವಾಗಿ ಉಳಿತಾಯದ ಆಲೋಚನೆಯಲ್ಲಿಯೇ ಬಂಗಾರವನ್ನು ಜನ ಕೊಳ್ಳುತ್ತಾರೆ. ಆದರೆ, ಯುವಕರು ಫ್ಯಾಷನ್‌ಗಾಗಿಯೂ ಒಡವೆಗಳನ್ನು ಖರೀದಿಸುತ್ತಿದ್ದಾರೆ. ಪುರುಷರ ಆಭರಣಪ್ರಿಯತೆ ಕುರಿತು ಭಾರತದಲ್ಲಿ ಅಷ್ಟೊಂದು ಅಂಕಿ–ಅಂಶಗಳು ಲಭ್ಯವಿಲ್ಲ ಮತ್ತು ಈ ಕುರಿತು ಸಮೀಕ್ಷೆಗಳೂ ನಡೆಯುತ್ತಿಲ್ಲ.
ರಾಹುಲ್ ಜೈನ್, ಅರ್ಜುನ್ ಜುವೆಲರ್ಸ್ ಜಯನಗರ, ಬೆಂಗಳೂರು