ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣದ ಜಾಹೀರಾತಿಗೆ ಅರೆಬೆತ್ತಲೇ ಮಾರ್ಗ: ಟೀಕೆಗೆ ಗುರಿಯಾದ ಖ್ಯಾತ ವಸ್ತ್ರವಿನ್ಯಾಸಕ

Last Updated 29 ಅಕ್ಟೋಬರ್ 2021, 3:12 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರ ‘ಮಂಗಳ ಸೂತ್ರ’ ಆಭರಣದ ಜಾಹೀರಾತು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಪ್ಪು ಕುಪ್ಪಸ ಧರಿಸಿದ ಮಹಿಳೆಯೊಬ್ಬರು ಕತ್ತಿಗೆ ಆಭರಣ ಧರಿಸಿದ ಚಿತ್ರವನ್ನು ಜಾಹೀರಾತಿನ ರೂಪದಲ್ಲಿ ಸಬ್ಯಸಾಚಿ ಅವರು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಭರಣದ ಜಾಹೀರಾತಿಗಾಗಿ ಮಹಿಳೆಯನ್ನು ಅರೆನಗ್ನವಾಗಿ ಬಿಂಬಿಸಿದ್ದಕ್ಕಾಗಿ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

‘ಇದು ಯಾವುದೇ ಒಳ ಉಡುಪು ಅಥವಾ ಕಾಂಡೋಮ್‌ನ ಜಾಹೀರಾತು ಅಲ್ಲ. ಇದು ಸೃಜನಾತ್ಮಕ ದಿವಾಳಿತನ. ಮಂಗಳಸೂತ್ರದ ಜಾಹೀರಾತಿಗಾಗಿ ಅರೆ-ಬೆತ್ತಲೆ ಮಾಡೆಲ್‌ಗಳನ್ನು ಬಳಸಬೇಕೆ? ಎಂದು ಸಾಮಾಜಿಕ ತಾಣದಲ್ಲಿ ಪ್ರಶ್ನೆ ಮಾಡಲಾಗಿದೆ.

ಆಭರಣಗಳನ್ನು ಪ್ರದರ್ಶಿಸಲು ಬೇರೆ ಮಾರ್ಗವಿರಲಿಲ್ಲವೇ? ಎಂದು ಮತ್ತೊಬ್ಬರು ಪ್ರಶ್ನೆ ಕೇಳಿದ್ದಾರೆ. ಹಲವರು ಇದು ‘ಅಸಹ್ಯಕರ’ ಎಂದು ಕರೆದಿದ್ದಾರೆ.

ವಸ್ತ್ರ ವಿನ್ಯಾಸದಲ್ಲಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ಸಬ್ಯಸಾಚಿ ಮುಖರ್ಜಿ ಅವರಿಗೆ ಬಾಲಿವುಡ್‌ನ ಹಲವು ಸ್ಟಾರ್‌ಗಳು ಗ್ರಾಹಕರಾಗಿದ್ದಾರೆ.

ದೀಪಿಕಾ ಪಡುಕೋಣೆ ಅವರೂ ತಮ್ಮ ವಿವಾಹಕ್ಕೆ ಸಬ್ಯಸಾಚಿ ಮುಖರ್ಜಿ ಅವರಿಂದಲೇ ಸೀರೆಗೆ ವಿನ್ಯಾಸ ಮಾಡಿಸಿದ್ದರು.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT