ಅದೃಷ್ಟ ಹೋಗುತ್ತದಂತೆ!
‘ನಿಮ್ಮ ಬಟ್ಟೆಯನ್ನು ತೊಡಲು ಯಾರಿಗೂ ಅವಕಾಶ ಕೊಡಬೇಡಿ. ಅವರು ಸಂಬಂಧಿಕರೇ ಆಗಿರಲಿ ಆಪ್ತರೇ ಆಗಿರಲಿ. ಹಾಗೊಮ್ಮೆ ಮಾಡಿದರೆ ನಿಮ್ಮ ಅದೃಷ್ಟವೆಲ್ಲ ಸೋರಿ ಹೋಗುತ್ತದೆ. ಅಷ್ಟೇ ಅಲ್ಲ ಅದರಿಂದ ನಿಮ್ಮೊಳಗಿನ ಸಕಾರಾತ್ಮಕ ಧೋರಣೆಯನ್ನು ಬೇರೆಯವರಿಗೆ ಕೊಟ್ಟಂತೆ’ ಎಂದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಬಹಳ ಗಂಭೀರವಾಗಿ ಹೇಳುತ್ತಿದ್ದ ಮಾತು ಇನ್‌ಸ್ಟಾದ ಫೀಡ್‌ನಲ್ಲಿ ಕಾಣಿಸಿಕೊಂಡಿತ್ತು. ಅಕ್ಕನ, ಅಮ್ಮನ ಸೀರೆ ಉಡುವಾಗ ಸಿಗುವ ತೃಪ್ತ ಭಾವವನ್ನು ವರ್ಣಿಸುವುದು ಹೇಗೆ? ಅಜ್ಜಿ– ಅಮ್ಮನ ಹರಿದ ಸೀರೆಗಳೇ ಕೌದಿಗಳಾಗಿ ಮನೆಮಕ್ಕಳ ಮೈ ಮನಸ್ಸನ್ನು ಬೆಚ್ಚಗಿಡುತ್ತವಲ್ಲದೆ, ಸಂಬಂಧಗಳ ಬಿಸುಪನ್ನೂ ಉಳಿಸುತ್ತವೆ ಎಂಬುದನ್ನು ಈ ಇನ್‌ಸ್ಟಾ ಕೂಸುಗಳಿಗೆ ಹೇಳುವವರು ಯಾರು?