ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆದ ಪುಟಾಣಿಗಳ ಬಳಕು ನಡಿಗೆ

Last Updated 6 ಸೆಪ್ಟೆಂಬರ್ 2021, 9:54 IST
ಅಕ್ಷರ ಗಾತ್ರ

ಕೊರೋನಾದಿಂದ ಸ್ತಬ್ಧವಾಗಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸುತ್ತಿದ್ದೆ. ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ರೂಪದರ್ಶಿಯರು ಹೆಜ್ಜೆ ಹಾಕುವ ಮೂಲಕ ಎಲ್ಲರ ಕಣ್ಮನ ತಣಿಸಿದರು.

ನಗರದ ದಿ ಸಂಭ್ರಮ್ ರೂಕ್ ರೆಸಾರ್ಟ್ನಲ್ಲಿ ನಡೆದ ಮಿಸ್ಟರ್, ಮಿಸ್, ಮಿಸೆಸ್, ಲಿಟಲ್ ಪ್ರಿನ್ಸ್, ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ -2021 ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು.

ಮಿಸ್ಟರ್ ಇಂಡಿಯಾ ಕಿರೀಟ ಅಕ್ಷಿತ್ ಪಾಲಿಗೆ ಒಲಿದರೆ, ಮಿಸ್ ಇಂಡಿಯಾ ಕಿರೀಟ ಶ್ರಾವ್ಯ ಪಡೆದರು. ಇನ್ನೂ ಮಿಸ್ ಟೀನ್ ಇಂಡಿಯಾ ವಿಭಾಗದಲ್ಲಿ ಪ್ರೀಯಾ, ಮಿಸ್ಟರ್ ಟೀನ್ ಇಂಡಿಯಾ ವಿಭಾಗದಲ್ಲಿ ಯಶವಂತ್ ಬಲ್ಲಾಳ್ ವಿಜೇಯರಾದರು.

ಲಿಟಲ್ ಪ್ರಿನ್ಸಸ್ ವಿಭಾಗದಲ್ಲಿ ಹಾನ್ಸಿ, ತೇಜೊ ಕುಂದಲವಾಲ ಹಾಗೂ ಸಾನಿಕ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡು. ಇನ್ನು ಲಿಖಿತಾ, ರಷ್ಮಿ ರನ್ನರ್ ಅಪ್ ಆದರೆ, ಪ್ರಿನ್ಸ್‌ ವಿಭಾಗದಲ್ಲಿ ಯಶವಂತ್ ಆರ್ಯ ನವೀನ್, ಮಿಸ್ ವಿಭಾಗದಲ್ಲಿ ಅಭಿನಯ ಜೆಸ್ಸಿ ಪುಣ್ಯಶ್ರೀ, ಮಿಸ್ಟರ್ ವಿಭಾಗದಲ್ಲಿ ನವೀನ್, ಸರ್ವೇಶ್ ರನ್ನರ್ ಅಪ್ ಆದರು.

ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಗೆ ಬಂದ ಮಕ್ಕಳು ಸಂಗೀತದ ನಾದಕ್ಕೆ ತಕ್ಕಂತೆ ಬಳುಕುವ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಮನ ಖುಷಿಗೊಳಿಸಿದರು. ವೆಸ್ಟರ್ನ್ ಸುತ್ತಿನಲ್ಲಿ ಮಾದಕ ನಡೆಯ ಮೂಲಕ ರ್ಯಾಂಪ್ ಮೇಲೆ ಬಂದ ತರುಣ ತರುಣಿಯರು ವಿಭಿನ್ನ ಉಡುಗೆಗಳಿಂದ ಫ್ಯಾಷನ್ ಶೋ ಮೆರುಗು ಹೆಚ್ಚಿಸಿದರು.

ಬಿಹಾರ, ತಮಿಳುನಾಡು, ಆಂಧ್ರಪ್ರದೇಶ.. ಹೀಗೆ ವಿವಿಧ ರಾಜ್ಯಗಳ ಸುಮಾರು 75 ಸ್ಪರ್ಧಿಗಳು ರ್ಯಾಂಪ್ ಮೇಲೆ ವಾಕ್ ಮಾಡಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯ ಶ್ರಮಹಾಕಿದ ಆಯೋಜಕ ಯಶ್, 'ಇಲ್ಲಿ ಗೆದ್ದರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ಮುಂದಿನ ಹಂತ ನಡೆಯಲಿದ್ದು, ಅಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಅಲ್ಲಿ ವಿಜೇತರಾದವರು ಮುಂದಿನ ಹಂತದಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ'ಎಂದು ಹೇಳಿದರು.

ವಿಜೇತರಾದವರಿಗೆ ಆಯೋಜಕ ಯಶ್ ಹಾಗೂ ಅತಿಥಿಗಳು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂತೋಷ್ ರೆಡ್ಡಿ, ಸೀಮಾ, ಶ್ವೇತ ನಿರಂಜನ್ ಇದ್ದರು.

ನ್ಯೂನ್ಯತೆ ಮರೆತು ಆತ್ಮವಿಶ್ವಸದ ಹೆಜ್ಜೆ ಹಾಕಿದ ರೂಪಿಣಿ
ಕಿವಿ ಕೇಳದ 25 ವರ್ಷದ ರೂಪಿಣಿ ನ್ಯೂನ್ಯತೆಯನ್ನು ಮೀರಿ ತನ್ನ ಕನಸುಗಳನ್ನು ಇಡೇರಿಸಿಕೊಳ್ಳಲು ಬೆಗರು ಕಂಗಳಲ್ಲಿ ಹೆಜ್ಜೆಹಾಕಿ ಎಲ್ಲರ ಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT