ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಾಗಲಿದ್ದಾರೆ ಮಿಸೆಸ್ ಇಂಡಿಯಾ ಆಮ್ ಪವರ್ಫುಲ್ ಕರ್ನಾಟಕ?

Last Updated 1 ಅಕ್ಟೋಬರ್ 2020, 6:20 IST
ಅಕ್ಷರ ಗಾತ್ರ
ADVERTISEMENT
"ನಂದಿನಿ ನಾಗರಾಜ್‌"

ಬೆಂಗಳೂರು: ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ 2020ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ನಡೆದಿರುವ ಆಡಿಷನ್‍ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಭರವಸೆಯೊಂದಿಗೆ ಮಿಸೆಸ್ ಸೌತ್ ಇಂಡಿಯಾದ ಅಂತಿಮ ಹಂತಕ್ಕೆ ಆಯ್ಕೆಯಾಗಲಿದ್ದಾರೆ.

ಅಕ್ಟೋಬರ್ 3 ರಂದು ಆರಂಭವಾಗುವ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ "ಮಿಸೆಸ್ ಕರ್ನಾಟಕ, "ಮಿಸೆಸ್ ಆಂಧ್ರಪ್ರದೇಶ, ಮಿಸೆಸ್ ತಮಿಳುನಾಡು" ಹಾಗೂ ಮಿಸೆಸ್ ಕರ್ವಿ ಸ್ಪರ್ಧೆಯಲ್ಲಿ ರೂಪದರ್ಶಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

ನಂದಿನಿ ನಾಗರಾಜ್

ಮೂರನೇ ಆವೃತ್ತಿಯ ಫೈನಲ್ ಸ್ಪರ್ಧೆಯಲ್ಲಿ ರ್ಯಾಂಪ್ ವಾಕ್ ಮಾಡಲು 21 ರೂಪದರ್ಶಿಯರು ಸಜ್ಜಾಗಿದ್ದಾರೆ. ಆಡಿಷನ್‍ನಲ್ಲಿ ಭಾಗವಹಿಸಿದ್ದ 60 ಜನರಲ್ಲಿ 21 ರೂಪದರ್ಶಿಗಳನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿತ್ತು.

ಮಿಸೆಸ್ ಕರ್ನಾಟದಲ್ಲಿ ಒಬ್ಬರು ವಿಜೇತರು ಹಾಗೂ ನಾಲ್ವರು ರನ್ನರ್ ಅಪ್‍ಗಳು, ಮಿಸೆಸ್ ಆಂಧ್ರಪ್ರದೇಶದಲ್ಲಿ ಒಬ್ಬರು ವಿಜೇತರು, ಮಿಸೆಸ್ ತಮಿಳುನಾಡಿನಲ್ಲಿ ಒಬ್ಬರು ವಿಜೇತರನ್ನು ಆಯ್ಕೆಮಾಡಲಾಗುತ್ತದೆ. ಮಿಸೆಸ್ ಕರ್ವಿ ಕರ್ನಾಟಕ ಸ್ಪರ್ದೆ ಕೂಡ ನಡೆಯಲಿದೆ. ಇದರಲ್ಲಿ ಒಬ್ಬರು ವಿನ್ನರ್ ಹಾಗೂ ಇಬ್ಬರು ರನ್ನರ್ ಅಪ್ ಆಯ್ಕೆಯಾಗಲಿದ್ದಾರೆ.

ಅಂತಿಮ ಸುತ್ತಿನಲ್ಲಿ ಸಾಂಪ್ರದಾಯಿಕ ಉಡುಗೆಯ ಸುತ್ತು ಜೊತೆಗೆ ಗೌನ್ ಸುತ್ತು ಕೂಡ ಇರಲಿದೆ. ಪ್ರಶ್ನೋತ್ತರ ಸುತ್ತಿನಲ್ಲಿ ವಿಜೇತರನ್ನು ಆಯ್ಕೆಮಾಡಲಾಗುತ್ತದೆ.

ಈಗಾಗಲೇ ನಡೆದಿರುವ ಟ್ಯಾಲೆಂಟ್ ರೌಂಡ್ ಪಾಯಿಂಟ್ಸ್ ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

"ಇಲ್ಲಿ ಗೆದ್ದವರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ನಡೆಯುವ ಮಿಸಸ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಗೆದ್ದವರು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.

"ಇದು ಮೂರನೇ ಆವೃತ್ತಿಯ ಸ್ಪರ್ಧೆ. ಕಳೆದ ಬಾರಿ ಕೂಡ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತು' ಎಂದು ನಂದಿನಿ ನಾಗರಾಜ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT