ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಪ್ರಕೃತಿಯ ಮಡಿಲಲ್ಲಿ ಜೈನ್‍ಫಾಮ್ರ್ಸ್‍ನೊಂದಿಗೆ ಜೀವಿಸಿ

Last Updated 19 ಮಾರ್ಚ್ 2021, 5:24 IST
ಅಕ್ಷರ ಗಾತ್ರ

ಸಮಾಜ ಅಂದರೆ ಮನುಷ್ಯ ಮಾತ್ರ ಬದುಕೋದಲ್ಲ.  ಮನುಷ್ಯನೊಂದಿಗೆ ಪ್ರಕೃತಿಯು ಬದುಕಬೇಕು.  ಪ್ರಕೃತಿಯಲ್ಲಿರೋ ಸಕಲ ಜೀವರಾಶಿಗಳು ಬದುಕಬೇಕು.  ಅದರರ್ಥ ಪ್ರಕೃತಿಯಲ್ಲಿ ಮನುಷ್ಯ ಬದುಕಬೇಕು.

ನಾವು ಪ್ರಕೃತಿಯ ಮಧ್ಯೆ ಹೋದಾಗ ನಮ್ಮೆಲ್ಲಾ ಕಷ್ಟಗಳನ್ನು ದುಃಖಗಳನ್ನು ಮರೆಯುತ್ತಾ ಹೋಗ್ತಿವಿ. ಕಾರಣ ಪ್ರಕೃತಿ.

ಹಾಗಾದ್ರೆ ಪ್ರಕೃತಿ ಅಂದ್ರೆ ಏನು?

ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆಮಾಡಿ ಶರೀರ ಮತ್ತು ಮನಸ್ಸನ್ನು ನೆಮ್ಮದಿಯಾಗಿಡುವ ಸ್ಥಳ ಅಥವಾ ಪರಿಸರ.

ಅಲ್ಲಿ ಹಿತವಾದ ಗಾಳಿಬೀಸುತ್ತೆ.  ಪಾದಗಳು ಮಣ್ಣನ್ನು ಸ್ಪರ್ಷಮಾಡುತ್ತೆ,  ಸುತ್ತಲೂ ಹಕ್ಕಿಗಳ ಕಲರವ ಕಿವಿಗೆ ಇಂಪಾಗಿ ಕೇಳ್ತಾಇರುತ್ತೆ,  ಮತ್ತೆಲ್ಲೋ ನೀರಿನ ಝರಿ ಜುಳುಜುಳು ಹರಿಯತಾಇರುತ್ತೆ, ವಿಜ್ಞಾನ ಕೂಡ ಹೇಳುತ್ತೆ ಪರಿಸರದೊಂದಿಗೆ ಬೆರೆತ ಮನುಷ್ಯನ ಮಾನಸಿಕತೆ ತುಂಬಾ ಗಟ್ಟಿಯಾಗಿರುತ್ತೆ ಮತ್ತು ಆರೋಗ್ಯಕೂಡ ತುಂಬಾ ಚೆನ್ನಾಗಿರುತ್ತದೆ.

ಅದರರ್ಥ ಪ್ರಕೃತಿಯಲ್ಲಿ ಮುನುಷ್ಯ ಜೀವಿಸಬೇಕು. ಪ್ರಕೃತಿಯಲ್ಲಿ ಬೆರೆತ ಮನುಷ್ಯನಿಗೆ ಹೃದಯ ಸಂಬಂದಿಖಾಯಿಲೆಗಳು ಬರುವದು ಕಡಿಮೆ.  ಜೊತೆಗೆ ಬೊಜ್ಜು, ಅಸ್ತಮಾ, ಮಾನಸಿಕ ಒತ್ತಡದ ಖಾಯಿಲೆಗಳು ಬರುವದು ಕಡಿಮೆ.

ಪ್ರಕೃತಿ ಮನಸ್ಸಿಗೆ ಆನಂದ ಕೊಡುವುದರ ಜೊತೆಗೆ ನಮ್ಮ ಚಿಂತೆನೆಗಳನ್ನು ನಮ್ಮ ಯೋಚನೆಗಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಸ್ಪೂರ್ತಿ ಕೊಡುತ್ತದೆ.

ಈಗ ವೇಗವಾಗಿ ಬೆಳೆಯುತ್ತಿರುವ ಸಿಟಿಗಳಲ್ಲಿ ಪ್ರಕೃತಿ ಅಂದ್ರೆ ಪಾರ್ಕ್.  ಆದರೆ ಪಾರ್ಕ್ ಒಂದು ಹಿತವಾದ ಆನಂದ ಕೊಡುತ್ತಾ.  ಮನಸ್ಸಿಗೆ ನೆಮ್ಮದಿ ಕೊಡುತ್ತಾ.  ಖಂಡಿತ ಕೊಡಲ್ಲ.  ಅದು ಸಿಟಿಮದ್ಯೆ ಒಂದು ಸ್ಥಳ ಅಷ್ಟೆ.

“ಸಂತೆಯೊಳಗೆ ನಿಂತು ದ್ಯಾನಮಾಡೋದು ಒಂದೆ, ಪಾರ್ಕ್‍ಲ್ಲಿ ನೆಮ್ಮದಿಯನ್ನು ಹುಡುಕೋದು ಒಂದೆ’.

ಆದರೇ ನಮಗೆ ಸಮಯಸಿಕ್ಕರೆ ಹೊರಗಡೆ ಹೋಗೋಣ ಅಲ್ಲಿ ಕಾಲಕಳೆಯೋಣ, ಎಲ್ಲರ ಜೊತೆ ಬೆರೆಯೋಣ ಅಂತ ಆಸೆ ಇರುತ್ತೆ ಅಲ್ವಾ?

ನಾವು ಸಿಟಿಗಳಲ್ಲಿ ಜೀವನ ಮಾಡ್ತಿದೀವಿ, ಸಿಟಿಗೆ ಹತ್ತಿರದಲ್ಲೇ ಎಲ್ಲಾದ್ರು ಫಾರ್ಮ್‍ಲ್ಯಾಂಡ್ ತಗೋಳೋಣ ಅಲ್ಲಿ ನಾವು ಬಯಸಿದಂತೆ ಒಂದು ಫಾರ್ಮ್ ಹೌಸ್ ಕಟ್ಕೊಂಡು, ರಜಾದಿನಗಳಲ್ಲಿ ವಾರಾಂತ್ಯದಲ್ಲಿ ಕುಟುಂಬ ಸಮೇತ ಹೋಗಿಬರೋಣ ಅಂತ ಆಸೆ ಇರುತ್ತೆ ಅಲ್ವಾ?

ಈ ರೀತಿ ಆಸೆ ಪಡೋರಲ್ಲಿ ತುಂಬಾ ಜನರಿಗೆ ಕೆಲವೊಂದು ಪ್ರಶ್ನಗಳು ಹುಟ್ಟುತ್ತೆ.

ಫಾರ್ಮ್‍ಲ್ಯಾಂಡ್ ತೊಗೊಳೋದು ಸರಿ, ತೆಗೊಂಡರೆ ಅಲ್ಲಿ ಮೈಂಟೆನೆನ್ಸ್, ನೋಡ್ಕೋಳೋರು ಯಾರು?  ಯಾರಾದರೂ ಒತ್ತುವರಿ ಮಾಡಿದ್ರೆಹೆಂಗೆ, ಅಲ್ಲಿ ಯಾವಾಗಲೂ ನಾವು ಕಾಯ್ಕೊಂಡು ಕುತ್ಕೊಳಕ್ಕೆ ಆಗಲ್ಲ.  ಇನ್ನು ಡಾಕ್ಯುಮೆಂಟ್ಸ್ ಸರಿ ಇರುತ್ತೋ ಇಲ್ವೊ, ಯಾಕೆ ರಿಸ್ಕ್ ತಗೋಬೇಕು.

ಫಾರ್ಮ್‍ಲ್ಯಾಂಡಲ್ಲಿ ಯಾವತರ ಗಿಡ ಬೆಳಸಬೇಕು, ಹೆಂಗೆ ಬೆಳಸಬೇಕು, ದಿನಾ ನಾವು ಹೋಗಿ ನೀರು, ಗೊಬ್ಬರ ಹಾಕಿ ಗಿಡ ಬೆಳಸಕಾಗುತ್ತಾ?  ಅನ್ನೋದು ಅವರ ಸಮಸ್ಯೆ.

ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಫಾರ್ಮ್‍ಲ್ಯಾಂಡ್ ಅನ್ನೋದು ಬರೀ ಒಂದು ಜಾಗ ಆಗಬಾರದು.  ಅದು ನಮ್ಮ ಮನೆ ಆಗ್ಬೇಕು, ಅದು ನಾವು ಬಯಸಿದಾಗ ಹೋಗಿ ಬರುವಂತಿರಬೇಕು.  ಅದಕ್ಕೆ ನಾವೇ ಮಾಲೀಕರು ಆಗಿರಬೇಕು. ಅಲ್ಲಿಗೆ ಕಾಲಿಟ್ಟರೆ ನಮ್ಮ ಚಿಕ್ಕಂದಿನ ನೆÉನಪುಗಳೆಲ್ಲಾ ಮರುಕಳಿಸುವಂತಿರಬೇಕು.  ಅದು ನಮ್ಮ ಜೀವನದ ಒಂದು ಭಾಗವಾಗಬೇಕು. ಹೀಗೆಂದು ಬಯಸಿದವರು ಬೆಂಗಳೂರಿನ ಜೈನ್‍ಫಾಮ್ರ್ಸ್‍ಅವರು. 

ಸುಮಾರು 25 ವರ್ಷಗಳ ಹಿಂದೆ ಇಂಥದೊಂದು ಕನಸನ್ನು ಕಂಡವರು ಜೈನ್‍ಫಾಮ್ರ್ಸ್ ಕಂಪನಿಯ ರುವಾರಿ ಶ್ರೀಯುತ ಮಂಗಲ್‍ಚಂದ್ ಜೈನ್ ಅವರು.

ಅವರ ಉದ್ದೇಶ ಇಷ್ಟೆ.  ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ನೀವು ಯಾವುದೇ ಜಂಜಾಟಗಳಿಲ್ಲದೇ ನಿಮ್ಮ ಕುಟುಂಬದ ಜೊತೆ ಕಾಲಕಳಿಯಬೇಕು ಅನ್ನೋದು.

ಈ ಉದ್ದೇಶವನ್ನಿಟ್ಟುಕೊಂಡು ಸುಂದರ ಪ್ರಕೃತಿಯ ಮಡಿಲಲ್ಲಿ ಜೈನ್‍ಫಾರ್ಮ್‍ಲ್ಯಾಂಡನ್ನು ಅತ್ಯಾಕರ್ಷಕದರದಲ್ಲಿ ಸುಮಾರು 25 ವರ್ಷಗಳಿಂದ ಜನರಿಗೆ ಕೊಡ್ತಾಬಂದಿದ್ದಾರೆ.

ಮಂಗಲ್‍ಚಂದ್ ಜೈನ್ ಅವರು ಮೂಲತಃ ಪ್ರಕೃತಿ ಪ್ರಿಯರು ಹಾಗಾಗಿ ಪ್ರಕೃತಿಯ ಮಧ್ಯೆ ಒಂದು ಫಾರ್ಮ್‍ಲ್ಯಾಂಡ್ ಕಟ್ಟಲು ಹೋದಾಗ ಕಾನೂನಾತ್ಮಕವಾಗಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಯ್ತು.  ಇದನ್ನು ಅರಿತ ಅವರು ಗೇಟೆಡ್ ಕಮ್ಯುನಿಟಿಯ ಫಾರ್ಮ್‍ಲ್ಯಾಂಡ್ ತೆರೆಯಲು ನಿರ್ಧರಿಸುವರು.

ಆ ಫಾರ್ಮ್‍ಲ್ಯಾಂಡ್ ಪರಿಸರ ಸ್ನೇಹಿಯಾಗಿರಬೇಕು.  ಅಲ್ಲಿ ಉತ್ತಮವಾದ ಕ್ಲಬ್‍ಹೌಸ್ ಇರಬೇಕು.   ಗ್ರಾಹಕರಿಗೆ ಒಳ್ಳೆಯ ಸರ್ವಿಸ್ ಒದಗಿಸುವ ಟೀಮ್ ಇರಬೇಕು ಎಂದು ಆದಿನಗಳಲ್ಲಿಯೇ ಕನಸು ಕಂಡು ಬೆಂಗಳೂರಿನ ಭಾಗಲೂರಿನಲ್ಲಿ ಸುಮಾರು 700 ಎಕರೆ ಜಾಗ ತೆಗೆದುಕೊಂಡು ಮೇಲೆ ಹೇಳಿರೋ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ.

ನೀವು ಒಂದು ಸಾರಿ ಜೈನ್ ಫಾಮ್ರ್ಸ್‍ಗೆ ಭೇಟಿಕೊಟ್ಟರೇ ಇದೆಲ್ಲದರ ಪರಿಚಯ ನಿಮಗಾಗಲಿದೆ.

ಒಬ್ಬ ವ್ಯಕ್ತಿ 10000 ಚದರ ಅಡಿಯಿಂದ ಹಿಡಿದು ಎಕರೆ ಗಟ್ಟಲೇ ಜಾಗ ಜೈನ್‍ಫಾಮ್ರ್ಸ್‍ನಲ್ಲಿ ಖರೀದಿಸಬಹುದು.

ಪ್ರಾಪರ್ಟಿ ಕೊಳ್ಳುವಾಗ ಕೆಲವೊಂದು ಭಯವಿರುತ್ತದೆ.  ಡಾಕ್ಯುಮೆಂಟ್ಸ್ ಸರಿ ಇರುತ್ತೋ ಇರಲ್ವೊ ಅಂತ.  ಆದರೆ ಇಲ್ಲಿ ಡಾಕ್ಯುಮೆಂಟ್ಸ್, ರಿಜಿಸ್ಟ್ರೇಷನ್ ಎಲ್ಲಾ ಕಾನೂನಾತ್ಮಕವಾಗಿರುತ್ತದೆ.  ಜೊತೆಗೆ ಸಿಟಿ ಒತ್ತಡದಿಂದ ಮುಕ್ತಿಪಡೆಯಬಹುದು.

ಇದರಜೊತೆಗೆ ಜೈನ್‍ಫಾಮ್ರ್ಸ್ ಅವರು ಕೊಡೈಕೆನಾಲ್ ಅಲ್ಲಿ ಸುಮಾರು 150 ಎಕರೆ, ಹೈದ್ರಾಬಾದ್ ಅಲ್ಲಿ 150 ಎಕರೆ, ಜೈಪುರದಲ್ಲಿ 150 ಎಕರೆ, ಫಾರ್ಮ್‍ಲ್ಯಾಂಡ್ ಜಾಗಗಳನ್ನು ಹೊಂದಿದ್ದಾರೆ.

ಅದರರ್ಥ ನೀವು ನಿಮ್ಮಿಷ್ಟದ ಊರಲ್ಲಿ ಫಾರ್ಮ್‍ಲ್ಯಾಂಡ್ ಹೊಂದಬಹುದು.  ಜೈನ್‍ಫಾರ್ಮ್ ಅವರು ಬರೀ ಫಾರ್ಮ್‍ಲ್ಯಾಂಡ್ ಸೇಲ್ ಮಾಡ್ತಿಲ್ಲ, ಜೊತೆಗೆ ಸೆಕ್ಯೂರಿಟಿ, ತೋಟಗಾರಿಕೆ, ಫಾರ್ಮ್ ಹೌಸ್ ಮೈಂಟೆನೆನ್ಸ್  ರಿಕ್ರಿಯೇಷನ್ಸ್ ಸೌಲಭ್ಯವನ್ನು ಸತತವಾಗಿ 25 ವರ್ಷಗಳಿಂದ ಕೊಡ್ತಾ ಬಂದಿದ್ದಾರೆ.

ಕಾಡಿನಿಂದ ನಾಡು-ನಾಡಿನಿಂದ ಜೀವನ, ಒಂದು ದೇಶದ ವಿಶಿಷ್ಠ ಸಂಪತ್ತು ಅಂದರೆ ಅದು ಕಾಡು. ಕಾಡಿದ್ದರೆ ಮಾತ್ರ ಸಕಲ ಜೀವರಾಶಿಗಳೂ ಸಂತೋಷದಿಂದಿರಲು ಸಾಧ್ಯ ಎಂಬುದನ್ನು ಅರಿತು ಸುಮಾರು 2 ಲಕ್ಷ ಗಿಡಗಳನ್ನು ಇದೇ ಫಾರ್ಮ್‍ಲ್ಯಾಂಡ್‍ಗಳಲ್ಲಿ ಬೆಳೆಸಿದ್ದಾರೆ.  ಇನ್ನೂ 3 ವರ್ಷದಲ್ಲಿ 3 ಲಕ್ಷ ಗಿಡಗಳನ್ನು ಬೆಳೆಸೋಗುರಿ ಹೊಂದಿದ್ದಾರೆ.

ಕಾಂಕ್ರೀಟ್ ಕಾಡಿನನಡುವೆ, ಟ್ರಾಫಿಕ್ ಕಿರಿಕಿರಿನಡುವೆ, ಒತ್ತಡದ ಜೀವನವನ್ನು ಅನುಭವಿಸಿ ಆರೋಗ್ಯದಲ್ಲಿ ಏರುಫೇರು ಮಾಡಿಕೊಂಡು ಆಸ್ಪತ್ರೆಗಳಿಗೆ ಅಲೆಯುವದಕ್ಕಿಂತ ಆಗಾಗ ಪರಿಸರದೊಂದಿಗೆ ಬೆರೆತರೆ ಆರೋಗ್ಯಕರ ಜೀವನವನ್ನು ಮಾಡಬಹುದು.

ಈ ಎಲ್ಲಾ ಸದುದ್ದೇಶಗಳಿಗಾಗಿ ಸಕಲೇಶಪುರದಲ್ಲಿ ಜೈನ್ ಫಾಮ್ರ್ಸ್ ಅವರು ಕಾಫಿ ಎಸ್ಟೇಟ್ ಅನ್ನು ಪರಿಚರಿಸುತ್ತಿದ್ದಾರೆ.  ಇದು ಕೂಡ ಕಾನೂನಾತ್ಮಕವಾಗಿದ್ದು, ಮೇಲೆ ಹೇಳಿದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

ಒಟ್ಟಿನಲ್ಲಿ ಜೈನ್‍ಫಾಮ್ರ್ಸ್ ಒಂದು ಪರಿಸರ ಸ್ನೇಹಿ,  ಆರೋಗ್ಯಕರ ಜೀವನದ ಸಂಕೇತ ಎನ್ನಬಹುದು.

ಜೈನ್‍ಫಾಮ್ರ್ಸ್ ಕುಟುಂಬದಲ್ಲಿ ನೀವು ಒಬ್ಬರಾಗಬೇಕೆ ! ಹಾಗಾದರೆ ಸಂಪರ್ಕಿಸಿ.

ಮೊ: +91-9008651824

ಇಮೇಲ್:  nature@jainfarms.com, or www.jainfarms.com ಗೆ ಭೇಟಿನೀಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT