ಸೋಮವಾರ, ಆಗಸ್ಟ್ 8, 2022
22 °C

ಟಿಎಎಫ್ಇ ಕೃಷಿ ಮತ್ತು ಸಾಗಾಣಿಕೆಗೆ ನೆರವಾಗುವ ಕ್ರಾಂತಿಕಾರಿ ಡೈನಾಟ್ರಾಕ್ ಸರಣಿಯನ್ನು ಬಿಡುಗಡೆ ಮಾಡಿದೆ.

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಜೂನ್ 12, 2021 |  ಬೆಂಗಳೂರು: ವಿಶ್ವದ ಮೂರನೇ ಅತಿದೊಡ್ಡ ಟ್ರಾಕ್ಟರ್ ಮೇಜರ್, TAFE (ಟಿಎಎಫ್ಇ) - ಟ್ರ್ಯಾಕ್ಟರ್ಸ್ ಮತ್ತು ಫಾರ್ಮ್ ಎಕ್ವಿಪ್ ಮೆಂಟ್ ಲಿಮಿಟೆಡ್, ಮ್ಯಾಸ್ಸಿ ಫರ್ಗುಸೊಂಟ್ರಾಕ್ಟರ್ಸ್ ತಯಾರಕರು ಅದರ ಹೊಸ ಡೈನಾಟ್ರಾಕ್ ಸರಣಿಯನ್ನು ಬಿಡುಗಡೆ ಮಾಡಿದೆ – ಇದರ ಕ್ರಿಯಾತ್ಮಕ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಪ್ರಯೋಜನ ಮತ್ತು ಬಹೂಪಯೋಗಗಳನ್ನು ನೀಡುವ ಟ್ರಾಕ್ಟರುಗಳನ್ನು ಹಲವು ಸುಧಾರಣೆಯೊಂದಿಗೆ ಶಕ್ತಿಯುತ ಟ್ರ್ಯಾಕ್ಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಟಿಎಎಫ್ಇ  60 ವರ್ಷಗಳಿಗಿಂತಲೂ ಹೆಚ್ಚು ಅನುಭವ ಹೊಂದಿರುವ, ಎಂಜಿನಿಯರಿಂಗ್ ಪರಿಣತಿಯುಳ್ಳ, ಭಾರತೀಯ ಕೃಷಿಯ ಬಗ್ಗೆ ಆಳವಾದ ಜ್ಞಾನ ಮತ್ತು ತಿಳುವಳಿಕೆಯುಳ್ಳ, ಕೃಷಿ ಮತ್ತು ಸಾಗಾಣಿಕೆ ಎರಡಕ್ಕೂ ರಾಜಿ ಮಾಡಿಕೊಳ್ಳದ ಪ್ರೀಮಿಯಂ ಶ್ರೇಣಿಯ ಟ್ರಾಕ್ಟರುಗಳನ್ನು ತಯಾರಿಸಿದೆ.

ಉತ್ತಮ ಮೈಲೇಜ್, ಬಾಳಿಕೆ ಮತ್ತು ಸೌಲಭ್ಯಗಳ ಖಾತ್ರಿಯೊಂದಿಗೆ ಹೆಚ್ಚಿನ ಉತ್ಪಾದಕತೆ ತಲುಪುವಂತೆ ಹೊಸ ಡೈನಾಟ್ರಾಕ್ ಸೀರೀಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡೈನಾಟ್ರಾಕ್‌ನ ಡೈನಾಲಿಫ್ಟ್ ® ಹೈಡ್ರಾಲಿಕ್ಸ್ ವ್ಯವಸ್ಥೆಯು ಟ್ರಾಕ್ಟರ್ ಅನ್ನು ತನ್ನ ವಿಭಾಗದ ಮೇಲ್ಭಾಗಕ್ಕೆ ಚಲಿಸುವಂತೆ ಮಾಡುತ್ತದೆ. ಇದು ಜೀವನಪೂರ್ತಿ ಉತ್ತಮ ಲಿಫ್ಟ್ ಸಾಮರ್ಥ್ಯ, ಉತ್ಪಾದಕತೆ ಮತ್ತು ವೇಗವನ್ನು ನೀಡುತ್ತದೆ.

ವರ್ಸಟೆಕ್ ™ ತಂತ್ರಜ್ಞಾನವನ್ನು ಬಳಸಿಕೊಂಡಿರುವ ವಿಶ್ವದ ಮೊದಲ ಟ್ರಾಕ್ಟರ್ ಇದಾಗಿದ್ದು, ಡೈನಾಟ್ರಾಕ್ ವಿಸ್ತರಿಸಬಹುದಾದ ವೀಲ್‌ಬೇಸ್ ಅನ್ನು ಒದಗಿಸುತ್ತದೆ. ಇದು ವರ್ಷವಿಡೀ ಕೃಷಿ, ಸಾಗಾಣಿಕೆ ಮತ್ತು ವಾಣಿಜ್ಯ ಬಳಕೆಗಾಗಿ ಉಪಯೋಗಿಸಿಕೊಳ್ಳಬಹುದು. ಇದು ಗರಿಷ್ಠ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ, ಇದು ಕೆಸರು ಗುಂಡಿ ಮತ್ತು ದಿಬ್ಬಗಳನ್ನು ಸುಲಭವಾಗಿ ದಾಟುತ್ತದೆ. ಎಲ್ಲಾ ಭೂಪ್ರದೇಶಗಳ ಕಾರ್ಯಾಚರಣೆಗಳಿಗೂ ಹೊಂದಿಕೊಳ್ಳುತ್ತದೆ. ಇದರ ಉದ್ದವಾದ ವ್ಹೀಲ್‌ಬೇಸ್ ಮತ್ತು ಸ್ಟೈಲಿಶ್ ಹೆವಿ-ಡ್ಯೂಟಿ ಫ್ರಂಟ್ ಬಂಪರ್ ಟ್ರಾಕ್ಟರ್‌ ಒಟ್ಟಾರೆಯಾಗಿ ವಾಹನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಿರತೆಯನ್ನು ನೀಡುತ್ತದೆ, ಲೋಡರ್ ಮತ್ತು ಡೋಜರ್‌ಗಳಂತಹ ಹೆವಿ ಡ್ಯೂಟಿ ಸಾಧನಗಳನ್ನು ಸುಲಭವಾಗಿ ನಿರ್ವಹಿಸುತ್ತದೆ.

“ಅತಿದೊಡ್ಡ ಆಲ್ ರೌಂಡರ್ ಟ್ರ್ಯಾಕ್ಟರ್” (ಸಬ್ಸೆ ಬಾಡಾ ಆಲ್ ರೌಂಡರ್) ಎಂದು ಸಾಬೀತಾಗಿರುವ ಸಿಂಪ್ಸನ್ ಎಂಜಿನ್ ಇದನ್ನು ನಿಯಂತ್ರಿಸುತ್ತದೆ, ಇದು ಶಕ್ತಿಯುತ ಮತ್ತು ಇಂಧನ-ಸಮರ್ಥ ಎಂಜಿನ್‌ಗಳ ಶ್ರೇಷ್ಠತೆಯ ಲಕ್ಷಣವಾಗಿದೆ. ಡೈನಾಟ್ರಾನ್ಸ್ ™ ಟ್ರಾನ್ಸ್ಮಿಶನ್ ಜೊತೆ, ಡ್ಯುಯಲ್ ಡಯಾಫ್ರಾಮ್ ಕ್ಲಚ್, ಸೂಪರ್ ಶಟಲ್ ™ ತಂತ್ರಜ್ಞಾನದೊಂದಿಗೆ 24 ಸ್ಪೀಡ್ ಕಾಮ್ಫಿಮೆಶ್ ಗೇರ್ ಬಾಕ್ಸ್ ಲಭ್ಯವಿದೆ. ಇದು ಉತ್ತಮ ಆಪರೇಟರ್ ಸೌಕರ್ಯ, ಉತ್ತಮ ದಕ್ಷತಾಶಾಸ್ತ್ರ ಮತ್ತು ಚಾಲನೆಯಲ್ಲಿರುವಾಗ ಪ್ರತಿ ಅಪ್ಲಿಕೇಶನ್‌ಗೆ ಸರಿಯಾದ ವೇಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ.

 ಡೈನಾಟ್ರಾಕ್ ಸರಣಿಯ ಉನ್ನತ ಮತ್ತು ಅತಿ ಜನಪ್ರಿಯವಾದ 4-ಇನ್ -1 ಕ್ವಾಡ್ರಾ ಪಿಟಿಒ, ಎಲ್ಲಾ ಸ್ಥಾಯಿ ಮತ್ತು ಕ್ರಿಯಾತ್ಮಕ ಬಳಕೆಗಾಗಿ ವರ್ಷಪೂರ್ತಿ ಟ್ರಾಕ್ಟರಿನ ಕಾರ್ಯವೈಖರಿಯನ್ನು ಹೆಚ್ಚಿಸುತ್ತದೆ ಮತ್ತು ಇದು ಹೆಚ್ಚು ಲಾಭದಾಯಕವಾಗಿದೆ.

ಡೈನಾಟ್ರಾಕ್ ಸರಣಿಯನ್ನು ಬಿಡುಗಡೆ ಮಾಡುತ್ತಾ ಮಾತನಾಡಿದ ಟಿಎಎಫ್ ನ ಸಿಎಂಡಿ - ಮಲ್ಲಿಕಾ ಶ್ರೀನಿವಾಸನ್, “ಟಿಎಎಫಿ ಯ ಡೈನಾಟ್ರಾಕ್ ಸರಣಿಯು ಟ್ರಾಕ್ಟರ್ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತದೆ, ಇದು ಸದಾ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತದೆ. ಇದು ಬಹುಮುಖ ಪ್ರಯೋಜನ, ಸೌಕರ್ಯ ಮತ್ತು ಸುರಕ್ಷತೆ, ಉತ್ಪಾದಕತೆ ಮತ್ತು ದಕ್ಷತೆಯನ್ನು ಒದಗಿಸುತ್ತದೆ. ಆಧುನಿಕ ರೈತರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಜೀವನ ಮತ್ತು ಜೀವನೋಪಾಯವನ್ನು ಮೇಲ್ದರ್ಜೆಗೇರಿಸಲು ಅನುಕೂಲ ಮಾಡಿ ಕೊಡುತ್ತದೆ.

ಡೈನಾಟ್ರಾಕ್ ಸರಣಿಯನ್ನು ಬಿಡುಗಡೆ ಮಾಡುವುದರೊಂದಿಗೆ, ಟಿಎಎಫ್ಇ ತನ್ನ ಮಾನದಂಡಗಳನ್ನು ಪುನರ್ ವ್ಯಾಖ್ಯಾನಿಸುತ್ತದೆ ಮತ್ತು ಭಾರತೀಯ ಎಂಜಿನಿಯರಿಂಗ್‌ನ ಅವಿಷ್ಕಾರವನ್ನು ಎತ್ತಿ ತೋರಿಸುತ್ತದೆ.

 

TAFE (ಟಿಎಎಫ್ಇ) ಬಗ್ಗೆ: tafe.com (ಟಿಎಎಫ್ಇ)

ವಿಶ್ವದ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕ ಮತ್ತು ವಾರ್ಷಿಕವಾಗಿ ಸುಮಾರು 180,000 ಟ್ರಾಕ್ಟರುಗಳ ಮಾರಾಟದೊಂದಿಗೆ ಭಾರತದಲ್ಲಿ ಎರಡನೇ ಅತಿದೊಡ್ಡ; 100 ಬಿಲಿಯನ್ ರೂ.ಗಳಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಭಾರತದಿಂದ ಟ್ರಾಕ್ಟರುಗಳನ್ನು ರಫ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ ಟಿಎಎಫ್ಇ ಕೂಡಾ ಒಂದು. ಇದು ಏರ್ ಕೂಲ್ಡ್ ಮತ್ತು ವಾಟರ್ ಕೂಲ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಟ್ರಾಕ್ಟರುಗಳನ್ನು ತಯಾರಿಸುತ್ತದೆ. ಅವುಗಳನ್ನು ನಾಲ್ಕು ಸಾಂಪ್ರದಾಯಿಕ ಬ್ರಾಂಡ್‌ಗಳಾದ ಮಾಸ್ಸಿ ಫರ್ಗುಸನ್, TAFE, ಐಷರ್ ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಸೆರ್ಬಿಯನ್ ಟ್ರಾಕ್ಟರ್ ಮತ್ತು ಕೃಷಿ ಉಪಕರಣಗಳ ಬ್ರಾಂಡ್ - ಇಂಡಸ್ಟ್ರಿಜಾ ಮಾಸಿನೈ ಟ್ರ್ಯಾಕ್ಟೋರಾ ( IMT). ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಮೆಚ್ಚುಗೆ ಪಡೆದ ಟಿಎಎಫ್ಇ ಉತ್ಪನ್ನಗಳು ಮತ್ತು ಸೇವೆಗಳು ಯುರೋಪ್ ಮತ್ತು ಅಮೆರಿಕಾದಂಥ ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ.

ಟ್ರಾಕ್ಟರುಗಳು ಮತ್ತು ಕೃಷಿ ಯಂತ್ರೋಪಕರಣಗಳಲ್ಲದೆ, ಟಿಎಎಫ್ಇ ಡೀಸೆಲ್ ಎಂಜಿನ್, ಸೈಲೆಂಟ್ ಜೆನ್ಸೆಟ್, ಕೃಷಿ ಎಂಜಿನ್, ಬ್ಯಾಟರಿ, ಹೈಡ್ರಾಲಿಕ್ ಪಂಪ್ ಮತ್ತು ಸಿಲಿಂಡರ್, ಗೇರ್ಸ್ ಮತ್ತು ಟ್ರಾನ್ಸ್ಮಿಶನ್ ಪ್ರಸರಣ ಘಟಕಗಳನ್ನು ತಯಾರಿಸುತ್ತದೆ ಮತ್ತು ವೆಹಿಕಲ್ ಫ್ರಾಂಚೈಸಿಗಳು ಮತ್ತು ತೋಟಗಳಲ್ಲಿ ವ್ಯಾಪಾರ ಆಸಕ್ತಿಯನ್ನು ಹೊಂದಿದೆ. ಟೋಟಲ್ ಕ್ವಾಲಿಟಿ ಮೂವ್ ಮೆಂಟ್ (ಟಿಕ್ಯೂಎಂ) ಟಿಎಎಫ್ಇ ಬದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಟಿಎಎಫ್ಇಯ ವಿವಿಧ ಉತ್ಪಾದನಾ ಘಟಕಗಳು ಜಪಾನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಮೆಂಟಿನೆನ್ಸ್ (ಜೆಐಪಿಎಂ) ಯಿಂದ ಹಲವು ಬಾರಿ ‘ಟಿಪಿಎಂ ಎಕ್ಸಲೆನ್ಸ್ ಪ್ರಶಸ್ತಿ’ಯನ್ನು ಗಳಿಸಿದೆ. ಜೊತೆಗೆ ಟಿಪಿಎಂ ಉತ್ಕೃಷ್ಟತೆಗಾಗಿ ಹಲವಾರು ಪ್ರಾದೇಶಿಕ ಪ್ರಶಸ್ತಿಗಳನ್ನು ಗಳಿಸಿವೆ. ‘ಎಂಟರ್‌ಪ್ರೈಸ್ ಇಂಟಿಗ್ರೇಷನ್ ಮತ್ತು ಟೆಕ್ನಾಲಜಿ ಲೀಡರ್‌ಶಿಪ್ ಅವಾರ್ಡ್’ಮತ್ತು ಎರಡು ‘ಸಪ್ಲೈ ಚೈನ್ ಲೀಡರ್‌ಶಿಪ್ ಅವಾರ್ಡ್ಸ್’  ಗಳಿಸಿ 2018 ರಲ್ಲಿ ಫ್ರಾಸ್ಟ್ ಮತ್ತು ಸುಲ್ಲಿವಾನ್ ಗ್ಲೋಬಲ್ ಮ್ಯಾನ್ಯೂಫ್ಯಾಕ್ಚರಿಂಗ್ ಲೀಡರ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಟ್ರಾಕ್ಟರ್ ತಯಾರಕರು ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಎಂಜಿನಿಯರಿಂಗ್ ರಫ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, ಟಿಎಎಫ್ಇ ಯನ್ನು 21 ನೇ ಬಾರಿಗೆ ಭಾರತದ 40 ನೇ ಎಂಜಿನಿಯರಿಂಗ್ ರಫ್ತು ಪ್ರಚಾರ ಮಂಡಳಿ - ದಕ್ಷಿಣ ವಲಯ ಪ್ರಶಸ್ತಿಗಳಲ್ಲಿ (2015-16) 'ಸ್ಟಾರ್ ಪರ್ಫಾರ್ಮರ್ - ದೊಡ್ಡ ಉದ್ಯಮ (ಕೃಷಿ ಟ್ರ್ಯಾಕ್ಟರ್)' ಎಂದು ಗುರುತಿಸಿದೆ. ಜಪಾನ್‌ನ ಟೊಯೋಟಾ ಮೋಟಾರ್ ಕಂಪನಿಯಿಂದ ಗುಣಮಟ್ಟದ ಸರಬರಾಜಿಗಾಗಿ 'ಪ್ರಾದೇಶಿಕ ಕೊಡುಗೆದಾರ ಪ್ರಶಸ್ತಿ' ಮತ್ತು 2013 ರಲ್ಲಿ ಅದರ ಪೂರೈಕೆ ಸರಪಳಿ ಪರಿವರ್ತನೆಗಾಗಿ ಎರಡನೇ ಏಷ್ಯಾ ಉತ್ಪಾದನಾ ಪೂರೈಕೆ ಸರಪಳಿ ಶೃಂಗಸಭೆಯಲ್ಲಿ 'ಉತ್ಪಾದನಾ ಪೂರೈಕೆ ಸರಪಳಿ ಕಾರ್ಯಾಚರಣಾ ಶ್ರೇಷ್ಠತೆ - ಆಟೋಮೊಬೈಲ್ಸ್ ಪ್ರಶಸ್ತಿ' ಯನ್ನು ಟಿಎಎಫ್ಇಗೆ ನೀಡಲಾಗಿದೆ. ಇದರ ಟ್ರಾಕ್ಟರ್ ಪ್ಲಾಂಟ್‌ಗಳನ್ನು ಸಮರ್ಥ ಗುಣಮಟ್ಟದ ನಿರ್ವಹಣಾ ವ್ಯವಸ್ಥೆಗಳಿಗಾಗಿ ಐಎಸ್‌ಒ 9001 ಮತ್ತು ಪರಿಸರ ಸ್ನೇಹಿ ಕಾರ್ಯಾಚರಣೆಗಳಿಗೆ ಐಎಸ್‌ಒ 14001 ಅಡಿಯಲ್ಲಿ ಪ್ರಮಾಣೀಕರಿಸಲಾಗಿದೆ.