ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ನನ್ನ ಫೋನ್ ಮುಟ್ಟಿದವರು ಯಾರು? ಗ್ಯಾಲಕ್ಸಿ ಎ51 ಮತ್ತು ಎ71ರಲ್ಲಿ ಈ ಆತಂಕ ನಿವಾರಣೆಗೆ ಕ್ವಿಕ್ ಸ್ವಿಚ್!

Last Updated 20 ಸೆಪ್ಟೆಂಬರ್ 2020, 7:56 IST
ಅಕ್ಷರ ಗಾತ್ರ

ಗ್ಯಾಲರಿ, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಹಾಗೂ ಸ್ನ್ಯಾಪ್‌ಚ್ಯಾಟ್‌, ಹೀಗೆ  ನೀವು ಅತಿ ಹೆಚ್ಚು ಬಳಸುವ ಆ್ಯಪ್‌ಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕವಾಗಿ ಬಳಸುವ ಸ್ಕ್ರೀನ್‌ಗೆ ಬದಲಿಸಿಕೊಳ್ಳಲು 'ಕ್ವಿಕ್‌ ಸ್ವಿಚ್‌' ಸಹಕಾರಿಯಾಗಿದೆ. ಅದೂ ಸಹ ಪವರ್‌ ಬಟನ್‌ನ್ನು ಎರಡು ಬಾರಿ ಒತ್ತಿದರೆ ಸಾಕು. ಇದು ಅದ್ಭುತ ಅನಿಸುತ್ತಿಲ್ಲವೇ?

ಈಗಂತೂ ಸ್ಮಾರ್ಟ್‌ಫೋನ್‌ಗಳು ನಮ್ಮ ನಿತ್ಯ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇನ್‌ಸ್ಟಾಗ್ರಾಂಗೆ ಚಿತ್ರಗಳನ್ನು ಅಪ್‌ಲೋಡ್‌ ಮಾಡುವುದರಿಂದ ಹಿಡಿದು ಟ್ವೀಟ್‌ ಮಾಡುವುದು ಅಥವಾ ನೋಟ್ಸ್‌ ಮಾಡಿಕೊಳ್ಳುವವರೆಗೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದೇವೆ. ಹೊಸ ತಲೆಮಾರಿನವರು ಮತ್ತು ಮಿಲೇನಿಯಲ್ಸ್‌ ತಮ್ಮ ಬಹುತೇಕ ಎಲ್ಲ ಕೆಲಸಗಳಿಗೂ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸುತ್ತಾರೆ. ಮಾಡಿದ ಕಾರ್ಯಗಳನ್ನು ಸಂಗ್ರಹಿಸುವುದು, ಉತ್ಸಾಹ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ನಡುನಡುವೆ ಖುಷಿ ಪಡಲು ಸ್ಮಾರ್ಟ್‌ಫೋನ್‌ ಇರಲೇಬೇಕು. ನೀವೂ ಅಂಥವರಲ್ಲಿ ಒಬ್ಬರಾಗಿದ್ದರೆ, ನಾವು ಹೇಳುತ್ತಿದ್ದೇವೆ ನಿಮಗೆ ಸರಿಯಾಗಿಯೇ ತಿಳಿದಿರುತ್ತದೆ.

ಊಹಿಸಿಕೊಳ್ಳಿ, ನೀವು ಈಗ ತುಂಬ ಜನರಿರುವ ಜಾಗದಲ್ಲಿ ಇರುತ್ತೀರಿ ಹಾಗೂ ಯಾರೋ ಒಬ್ಬ ವ್ಯಕ್ತಿಯು ನಿಮ್ಮ ಫೋನ್‌ನಲ್ಲಿ ಇಣುಕುತ್ತ ನೀವೇನು ಮಾಡುತ್ತಿರುವುದೆಂದು ನೋಡಲು ಪ್ರಯತ್ನಿಸುತ್ತಿದ್ದಾರೆ. ಅವರು ಗಮನಿಸುತ್ತಿರುವುದು ನಿಮಗೆ ಗೊತ್ತಾಗುತ್ತಿದ್ದಂತೆ, ಮತ್ತೊಂದು ಬದಿಗೆ ತಿರುಗುವಿರಿ ಅಥವಾ ಫೋನ್‌ನ್ನು ಅವರಿಂದ ಬಚ್ಚಿಟ್ಟುಕೊಳ್ಳುವಿರಿ. ಅಲ್ಲವೇ? ಇಂಥ ಅನುಭವ ಆಗಿರಬೇಕಲ್ಲವೇ?

ಇನ್ನೊಂದು ಸಂದರ್ಭ ನೆನಪು ಆಗುತ್ತಿರಬಹುದು, ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಸಹೋದ್ಯೋಗಿಗಳು ನಿಮ್ಮ ಫೋನ್‌ ನೋಡಲು ಬಯಸುತ್ತಾರೆ. ಆದರೆ, ಅವರಿಗೆ ಫೋನ್‌ ನೀಡುವುದು ನಿಮಗೆ ಹಿತವೆನಿಸುವುದಿಲ್ಲ. ಹೆಚ್ಚೆಂದರೆ ಅವರು ನಿಮ್ಮ ಫೋನ್‌ನಲ್ಲಿ ಏನು ನೋಡಲು ಅವಕಾಶ ಸಿಗುತ್ತದೆ? ನಿಮ್ಮ ಖಾಸಗಿ ಸಂದೇಶಗಳು ಅಥವಾ ಚಿತ್ರಗಳು, ಅಲ್ಲವೇ?

ಇಂಥ ತಳಮಳಗಳಿಗೆ ಗುಡ್‌ಬೈ ಹೇಳಿ ಹಾಗೂ ಆಲ್ಟ್‌ ಝಡ್‌ ಲೈಫ್‌ (Alt Z Life) ನಿಮ್ಮದು ಮಾಡಿಕೊಳ್ಳಿ. ಆಲ್ಟ್‌ ಝಡ್‌ ಲೈಫ್‌ ಎಂಬುದು ಸಂಕೋಚವಿಲ್ಲದೆ ಮುಕ್ತವಾಗಿ ಜೀವಿಸುವುದೇ ಆಗಿದೆ. ನಿಮ್ಮ ಖಾಸಗಿ ಕ್ಷಣಗಳು ಇಲ್ಲಿ ಖಾಸಗಿಯಾಗಿಯೇ ಉಳಿಯುತ್ತವೆ.

ಆಲ್ಟ್‌ ಝಡ್‌ ಲೈಫ್‌ನ ಭಾಗಿವಾಗಿ ಸ್ಯಾಮ್‌ಸಂಗ್‌ ಖಾಸಗಿ ಸುರಕ್ಷತೆಗೆ ಹೊಸ ಅನ್ವೇಷಣೆಗಳನ್ನು ಹೊರತಂದಿದೆ, ಅವುಗಳೇ ಕ್ವಿಕ್‌ ಸ್ವಿಚ್‌ ಮತ್ತು ಕಂಟೆಂಟ್‌ ಸಜೆಷನ್ಸ್‌. 'ಮೇಕ್‌ ಫಾರ್‌ ಇಂಡಿಯಾ' ಅಭಿಯಾನದ ಅಡಿಯಲ್ಲಿ ಹೊಸ ಗುಣಲಕ್ಷಣಗಳನ್ನು ಪರಿಚಯಿಸಲಾಗಿದ್ದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಮಾದರಿಯ ಫೋನ್‌ಗಳಲ್ಲಿ ಲಭ್ಯವಿದೆ.

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯಗಳನ್ನು ಹೊರತರಲಾಗಿದೆ. ಇವುಗಳನ್ನು ಪರಿಚಯಿಸುವ ಮೂಲಕ ಉದ್ಯಮದಲ್ಲಿಯೇ ಹೊಚ್ಚ ಹೊಸ ಪ್ರಯತ್ನವನ್ನು ಸ್ಯಾಮ್‌ಸಂಗ್‌ ಸೃಷ್ಟಿಸಿದಂತಾಗಿದೆ.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ಗಳು 'ಉತ್ಕೃಷ್ಟವಾದ ಸ್ಕ್ರೀನ್‌, ಅತ್ಯುತ್ತಮ ಕ್ಯಾಮೆರಾ ಹಾಗೂ ದೀರ್ಘಾವಧಿವರೆಗೂ ಉಳಿಯುವ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿವೆ. ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳು ಕ್ವಾಡ್‌–ಕ್ಯಾಮೆರಾ ಸೆಟ್‌–ಅಪ್‌ಗಳನ್ನು ಹೊಂದಿದ್ದು, ಇದರಲ್ಲಿ ಸಿಂಗಲ್‌ ಟೇಕ್‌, ನೈಟ್‌ ಹೈಪರ್‌ಲ್ಯಾಪ್ಸ್‌, ಪ್ರೊ ಕ್ಯಾಮೆರಾ ಮೋಡ್‌, ಕಸ್ಟಮ್‌ ಫಿಲ್ಟರ್‌, ಸ್ಮಾರ್ಟ್‌ ಸೆಲ್ಫಿ ಆ್ಯಂಗಲ್‌, ಕ್ವಿಕ್ ವಿಡಿಯೊ ಹಾಗೂ ಎಐ ಗ್ಯಾಲರಿ ಜೂಮ್‌ ಸೌಲಭ್ಯಗಳಿವೆ.

ಬನ್ನಿ ಈಗ ಖಾಸಗಿ ಮಾಹಿತಿ ಸುರಕ್ಷತೆಯ ಸೌಲಭ್ಯಗಳನ್ನು ಫಟಾಫಟ್‌ ತಿಳಿದುಕೊಳ್ಳೋಣ.

* ಕ್ವಿಕ್‌ ಸ್ವಿಚ್‌: ಕೇವಲ ಡಬಲ್‌ ಕ್ಲಿಕ್‌ ಮಾಡುವ ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗುತ್ತದೆ

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಂದು ಮುಖ್ಯವಾಗಿರುವ ಖಾಸಗಿ ಮಾಹಿತಿ ಸುರಕ್ಷತೆ ಅಗತ್ಯಗಳನ್ನು ಕ್ವಿಕ್‌ ಸ್ವಿಚ್‌ ಪರಿಹರಿಸುತ್ತದೆ. ಹೆಸರೇ ಸೂಚಿಸುವಂತೆ ಕ್ವಿಕ್‌ ಸ್ವಿಚ್‌ ಬಹಳ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆಲ್ಟ್‌ ಝಡ್‌ ಲೈಫ್‌ನ್ನು ಇನ್ನಷ್ಟು ಸರಳಗೊಳಿಸುತ್ತಿದೆ. ನಿಮ್ಮ ಫೋನ್‌ನಲ್ಲಿ ಗ್ಯಾಲರಿ, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚ್ಯಾಟ್‌ ಹಾಗೂ ಇತರೆ ಅಪ್ಲಿಕೇಷನ್‌ಗಳನ್ನು ಸಾರ್ವಜನಿಕವಾಗಿ ಬಳಸುವಾಗ ಮತ್ತು ಖಾಸಗಿಯಾಗಿ ಉಪಯೋಗಿಸುವಾಗ ಅಗತ್ಯಕ್ಕೆ ತಕ್ಕಂತೆ ಸ್ವಿಚ್‌ ಆಗಲು ಕ್ವಿಕ್‌ ಸ್ವಿಚ್‌ ಸಹಕಾರಿಯಾಗುತ್ತದೆ. ಇದು ಬಹಳ ಅನುಕೂಲಕರ ಹಾಗೂ ಕ್ಷಿಪ್ರವಾಗಿ ನಡೆಯುತ್ತದೆ.

ಪವರ್‌ ಬಟನ್‌ನ್ನು ಎರಡು ಬಾರಿ ಒತ್ತುವ ಮೂಲಕ ಕ್ವಿಕ್‌ ಸ್ವಿಚ್‌ಗೆ ಚಾಲನೆ ನೀಡಬಹುದು. ಅನಂತರ ನೀವು ಸ್ನೇಹಿತರು, ಕುಟುಂಬದವರು ಅಥವಾ ಸಹೋದ್ಯೋಗಿಗಳಿಗೆ ಯಾವುದೇ ಆತಂಕವಿರದೆ ನಿಮ್ಮ ಫೋನ್‌ ನೋಡಲು ನೀಡಬಹುದು.  ಬಹುಶಃ ಅವರೂ ಸಹ ಗ್ಯಾಲಕ್ಸಿ ಎ51/ಎ71 ಕೊಂಡುಕೊಳ್ಳಬಹುದು.

ಈ ವಿಡಿಯೊ ನೋಡಿ. ನಟರಾದ ರಾಧಿಕಾ ಮದನ್‌ ಮತ್ತು ಸನ್ನಿ ಸಿಂಗ್‌ ಅವರನ್ನು ಇಲ್ಲಿ ಕಾಣಬಹುದು. ಸನ್ನಿಯ ಗರ್ಲ್‌ಫ್ರೆಂಡ್‌ ಆಗಿ ರಾಧಿಕಾ ನಟಿಸಿದ್ದಾರೆ. ಗೆಳೆಯನಿಗಾಗಿ ಆಕೆ ಸರ್ಪ್ರೈಸ್‌ ಬರ್ತ್‌ಡೇ ಬ್ಯಾಷ್‌ಗೆ ಯೋಜನೆ ರೂಪಿಸಿದ್ದಾಳೆ. ಆದರೆ, ಆತ ಹತ್ತಿರ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಕ್ವಿಕ್‌ ಸ್ವಿಚ್ ಬಳಸುತ್ತಾಳೆ. ಆ ಗುಟ್ಟು ಸುರಕ್ಷಿತವಾಗಿಯೇ ಉಳಿಯುತ್ತದೆ, ಅದಕ್ಕಾಗಿ ಗ್ಯಾಲಕ್ಸಿ ಎ71ರಲ್ಲಿರುವ ಕ್ವಿಕ್‌ ಸ್ವಿಚ್‌ ಸೌಲಭ್ಯಕ್ಕೆ ಧನ್ಯವಾದಗಳು!

* ಕಂಟೆಂಟ್‌ ಸಜೆಷನ್ಸ್‌– ನಿಮ್ಮ ಎಲ್ಲ ಖಾಸಗಿ ಚಿತ್ರಗಳು ಖಾಸಗಿಯಾಗಿಯೇ ಉಳಿಯುತ್ತವೆ

ಅತ್ಯಂತ ಕಠಿಣವಾದುದನ್ನೂ ಕ್ವಿಕ್‌ ಸ್ವಿಚ್‌ನ ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಸರಳಗೊಳಿಸುತ್ತದೆ. ಇದು ಸಾಧನದಲ್ಲಿಯೇ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವ್ಯವಸ್ಥೆಯಾಗಿದ್ದು, ಸುರಕ್ಷಿತ ಫೋಲ್ಡರ್‌ಗೆ ವರ್ಗಾಯಿಸಬೇಕಾದ ಚಿತ್ರಗಳ ಸಲಹೆ ನೀಡುತ್ತದೆ.

ಇದನ್ನು ಆರಂಭಿಸುವುದು ಇನ್ನಷ್ಟು ಸುಲಭ. ಮೊದಲಿಗೆ ನೀವು ಖಾಸಗಿಯಾಗಿ ಉಳಿಸಲು ಬಯಸಿರುವ ನಿರ್ದಿಷ್ಟ ವ್ಯಕ್ತಿಯ ಮುಖ ಅಥವಾ ನಿರ್ದಿಷ್ಟ ಚಿತ್ರಗಳನ್ನು ಆಯ್ಕೆ ಮಾಡಬೇಕು. ಒಮ್ಮೆ ಅವು ಟ್ಯಾಗ್‌ ಆದರೆ ಮುಗಿಯಿತು. ಉಳಿದದ್ದನ್ನು ಎಐ ನೋಡಿಕೊಳ್ಳುತ್ತೆ!

ಒಂದು ಉದಾಹರಣೆ ತೆಗೆದುಕೊಳ್ಳೋಣ. ನಿಮ್ಮ ಸಂಗಾತಿಯೊಂದಿಗೆ ರಜಾ ದಿನಗಳನ್ನು ಪರ್ವತ ಪ್ರದೇಶಗಳಲ್ಲಿ ಕಳೆದು ಮನೆಗೆ ಮರಳಿ ಬಂದಿರುವಿರಿ. ನಿಮ್ಮ ಫೋನ್‌ನಲ್ಲಿ ಸೆಲ್ಫಿಗಳ  ದೊಡ್ಡ ಸಂಗ್ರಹವೇ ಇರುತ್ತದೆ, ಅವುಗಳನ್ನು ನಿಮ್ಮ ಆಪ್ತ ಸ್ನೇತರು ಸೇರಿದಂತೆ ಯಾರೊಬ್ಬರೂ ನೋಡಲು ನಿಮಗೆ ಇಷ್ಟವಿರುವುದಿಲ್ಲ. ಆದರೆ, ಊಹಿಸಿಕೊಳ್ಳಿ ಏನಾಗುತ್ತದೆಂದು? ಶುಕ್ರವಾರ ರಾತ್ರಿ, ನಿಮ್ಮ ತಂಡದೊಂದಿಗೆ ನೀವು ಮಜಾ ಮಾಡುತ್ತಿರುವಾಗ ಯಾರೋ ಒಬ್ಬರು ಆ ಚಿತ್ರಗಳನ್ನು ನೋಡಿದರೆಂದರೆ. ಆಗ, ಅಲ್ಲಿ ನಿಮ್ಮ ಖಾಸಗಿತನ ಎಲ್ಲವನ್ನೂ ದಾಟಿ ಹೊರ ಹೋಗಿರುತ್ತದೆ.

ಆದರೆ ಇನ್ನು ಮುಂದೆ ಹಾಗೆಲ್ಲ ಆಗುವುದಿಲ್ಲ. ಕಂಟೆಂಟ್‌ ಸಜೆಷನ್ಸ್‌ ನಿಮ್ಮೆಲ್ಲ ಖಾಸಗಿ ಫೋಟೊಗಳನ್ನು ಖಾಸಗಿಯಾಗಿಯೇ ಉಳಿಸುತ್ತದೆ. ಮೇಲೆ ಹೇಳಿದ ಉದಾಹರಣೆಯ ಸಂದರ್ಭದಲ್ಲಿ ನಿಮ್ಮ ಸೆಲ್ಫಿಗಳು ಪಬ್ಲಿಕ್‌ ಗ್ಯಾಲರಿಯಲ್ಲಿ ಕಾಣಿಸುವುದೇ ಇಲ್ಲ. ಏಕೆಂದರೆ, ನೀವು ಅದಾಗಲೇ ನಿಮ್ಮ ಸಂಗಾತಿಯ ಮುಖವನ್ನು ಖಾಸಗಿ ಎಂದು ಆಯ್ಕೆ ಮಾಡಿರುತ್ತೀರಿ ಹಾಗೂ ಆಗಲೇ ಆ ಎಲ್ಲ ಚಿತ್ರಗಳನ್ನೂ ನಿಮ್ಮ ಖಾಸಗಿ ಫೋಲ್ಡರ್‌ಗೆ ವರ್ಗಾಯಿಸಿರುತ್ತೀರಿ!

ಹಿಂದೆಂದೂ ಕಂಡಿರದ ಖಾಸಗಿ ಮಾಹಿತಿ ಸುರಕ್ಷತೆ ಸೌಲಭ್ಯಗಳು

ಸ್ಯಾಮ್‌ಸಂಗ್‌ನ ಹೊಸ ಖಾಸಗಿತನ ಸುರಕ್ಷತೆಯ ಸೌಲಭ್ಯಗಳು ಮೊಟ್ಟ ಮೊದಲ ಬಾರಿಗೆ ರೂಪಿಸಲಾಗಿದೆ. ಇನ್ನಾವುದೇ ಕಂಪನಿಯು ಸಹ ಸ್ಯಾಮ್‌ಸಂಗ್‌ ನಡೆಸುತ್ತಿರುವ ಇಂಥ ಕಾರ್ಯಗಳಿಗೆ ಸಮೀಪದಲ್ಲಿಯೂ ಇಲ್ಲ. ಸ್ಯಾಮ್‌ಸಂಗ್‌ಗೆ ಖಾಸಗಿತನ ಸುರಕ್ಷತೆಯು ಆದ್ಯತೆಯಾಗಿದೆ ಹಾಗೂ ಅದನ್ನು ತಿಳಿದು ಗ್ರಾಹಕರಿಗೂ ಸಂತಸವಾಗಲಿದೆ.

ಉದ್ಯಮದಲ್ಲಿ ಹೊಸ ಹೆಗ್ಗುರುತು ಸಾಧಿಸುವುದನ್ನು ಸ್ಯಾಮ್‌ಸಂಗ್‌ ರೂಢಿಸಿಕೊಂಡಿದೆ. ಗ್ಯಾಲಕ್ಸಿ ಎ ಸಿರೀಸ್‌ ಫೋನ್‌ಗಳಲ್ಲಿ ಅದಾಗಲೇ 'ಉತ್ಕೃಷ್ಟ ಸ್ಕ್ರೀನ್‌, ಅದ್ಭುತ ಕ್ಯಾಮೆರಾ ಹಾಗೂ ದೀರ್ಘಾವಧಿ ಉಳಿಯುವ ಬ್ಯಾಟರಿಗಳನ್ನು' ಅಳವಡಿಸಲಾಗಿದೆ. ಈಗ, ಈ ಖಾಸಗಿ ಮಾಹಿತಿ ಸುರಕ್ಷತೆ ಅನ್ವೇಷಣೆಗಳಿಂದಾಗಿ ಅಂಥ ಫೋನ್‌ ಆಯ್ಕೆ ಮಾಡಲು ಇನ್ನಷ್ಟು ಕಾರಣಗಳು ಸಿಕ್ಕಂತಾಗಿದೆ.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಎರಡೂ ಮಾದರಿಯ ಫೋನ್‌ಗಳು ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು, ರಿಟೇಲ್‌ ಮಳಿಗೆಗಳು ಹಾಗೂ ಸ್ಯಾಮ್‌ಸಂಗ್‌.ಕಾಮ್‌ನಲ್ಲಿ ಲಭ್ಯವಿದೆ.

ಆಕ್ಟ್‌ ಝಡ್‌ ಲೈಫ್‌ ಮೂಲಕ ಹೊಸ ತಲೆಮಾರಿನವರು ಹಾಗೂ ಮಿಲೇನಿಯನ್ಸ್‌ ಇನ್ನು ಮುಂದೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ಈ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಿ ಹಾಗೂ ನಿಮ್ಮೆಲ್ಲ ಖಾಸಗಿತನ ಸುರಕ್ಷತೆಯ ಕಳವಳಗಳಿಗೆ ಬೈ–ಬೈ ಹೇಳಿ!

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT