ಬೆಂಗಳೂರು: ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಗ್ ಬಜಾರ್, ಪ್ರಸಕ್ತ ವರ್ಷದ 5 ದಿನಗಳ ಉಳಿತಾಯ ಉತ್ಸವವನ್ನು (ಸಬ್ಸೆ ಸಸ್ತೆ 5 ದಿನ್) ಜ. 25ರಿಂದ 29ರವರೆಗೆ ಆಯೋಜಿಸಿದೆ.

ದೇಶದ 85 ನಗರಗಳಲ್ಲಿರುವ 200 ಬಿಗ್ ಬಜಾರ್ ಮತ್ತು ಫುಡ್ ಬಜಾರ್ ಮಳಿಗೆಗಳಲ್ಲಿ ಗ್ರಾಹಕರು ಈ ಐದು ದಿನಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸರಕುಗಳನ್ನು ಖರೀದಿಸಬಹುದು. ಎಲೆಕ್ಟ್ರಾನಿಕ್ಸ್, ಆಹಾರ ಪದಾರ್ಥಗಳು, ಬಟ್ಟೆ, ಮೊಬೈಲ್, `ಎಫ್‌ಎಂಸಿಜಿ~ ಸರಕುಗಳ ಮೇಲೆ ಭರ್ಜರಿ ರಿಯಾಯ್ತಿ ಲಭ್ಯವಿದೆ ಎಂದು ಬಿಗ್‌ಬಜಾರ್‌ನ ದಕ್ಷಿಣ ವಲಯ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮಂಗಳವಾರ ಇಲ್ಲಿ ತಿಳಿಸಿದರು.

`ಇದು 6ನೇ ವರ್ಷದ ಉಳಿತಾಯ ಉತ್ಸವ. ಐದು ದಿನಗಳ ಈ ವಿಶೇಷ ಮೇಳದಲ್ಲಿ ಉಳಿದ ದಿನಗಳಿಗಿಂತ ಮೂರುಪಟ್ಟು ಹೆಚ್ಚಿನ ವಹಿವಾಟು ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು. ಬಿಗ್ ಬಜಾರ್‌ನ ನೂತನ ಮಳಿಗೆ ರಾಜಾಜಿನಗರದಲ್ಲಿ ಪ್ರಾರಂಭವಾಗಲಿದ್ದು, ಫೆಬ್ರುವರಿ ಮೊದಲ ವಾರದಿಂದ ಗ್ರಾಹಕರಿಗೆ ಮುಕ್ತವಾಗಲಿದೆ ಎಂದು ಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.