ಕೇಂದ್ರ ಬಜೆಟ್‌ 2019: ಯಾವುದು ದುಬಾರಿ? ಯಾವುದು ಅಗ್ಗ?

ಗುರುವಾರ , ಜೂಲೈ 18, 2019
28 °C

ಕೇಂದ್ರ ಬಜೆಟ್‌ 2019: ಯಾವುದು ದುಬಾರಿ? ಯಾವುದು ಅಗ್ಗ?

Published:
Updated:

ನವದೆಹಲಿ: 2019-20ನೇ ಸಾಲಿನ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಮಂಡಿಸಿದರು. ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಬಜೆಟ್‌ ಇದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರು ಬಳಸುವ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೆ, ಇನ್ನು ಹಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ. 

ಬೆಲೆ ಏರಿಕೆಯಾದ ಸರಕುಗಳ ವಿವರ: ಪೆಟ್ರೋಲ್, ಡಿಸೇಲ್‌, ಚಿನ್ನದ ಆಭರಣಗಳು, ಆಮದು ಪುಸ್ತಕಗಳು, ಡಿಜಿಟೆಲ್‌ ಕ್ಯಾಮೆರಾ, ಪಿವಿಸಿ ಪೈಪ್‌ಗಳು, ಟೈಲ್ಸ್‌, ಆಟೋಮೊಬೈಲ್‌ ಬಿಡಿಭಾಗಗಳು, ಮಾರ್ಬಲ್‌ ಸ್ಲ್ಯಾಬ್‌, ಫೈಬರ್ ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾ, ಐಪಿ ಕ್ಯಾಮೆರಾ, ಡಿಜಿಟಲ್‌ ಮತ್ತು ವಿಡಿಯೊ ರೆಕಾರ್ಡರ್‌ಗಳು, ಸಿಂಥೆಟಿಕ್‌ ರಬ್ಬರ್‌, ಬೆಲೆಬಾಳುವ ಲೋಹಗಳು, ತಂಬಾಕು ಉತ್ಪನ್ನ, ಗೋಡಂಬಿ, ಪ್ಲಾಸ್ಟಿಕ್, ಎಸಿ ದುಬಾರಿಯಾಗಲಿದೆ. 

ಬೆಲೆ ಕಡಿಮೆಯಾದ ಸರಕುಗಳ ವಿವರ:  ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು, ಎಲೆಕ್ಟ್ರಿಕ್‌ ವಾಹನಗಳ, ಗೃಹ ಉಪಯೋಗಿ ಎಲೆಕ್ಟ್ರಾನಿಕ್‌ ವಸ್ತುಗಳು, ಫಾಮ್‌ ಆಯಿಲ್‌, ಪ್ಯಾಟಿ ಆಯಿಲ್‌, ಕೊಬಾಲ್ಟ್‌, ಚರ್ಮದ ಉತ್ಪನ್ನಗಳು, ಶಸ್ತ್ರ ಚಿಕಿತ್ಸೆ ಉಪಕರಣಗಳು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 8

  Sad
 • 1

  Frustrated
 • 5

  Angry

Comments:

0 comments

Write the first review for this !